ನಾಪೋಕ್ಲು, ಡಿ. ೧: ಸಂಬAಧಗಳು ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಅದರಲ್ಲಿ ರಾಜಕೀಯ ಇರಬಾರದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ಸಮೀಪದ ಅಮ್ಮಂಗೇರಿಯಲ್ಲಿ ಶ್ರೀ ಪಾಡಿ ಸುಬ್ರಮಣ್ಯ ಯುವಕ ಸಂಘದ ೩೭ನೇ ವರ್ಷದ ಹುತ್ತರಿ ಕ್ರೀಡಾಕೂಟದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ವೀರಾಜಪೇಟೆ ಕ್ಷೇತ್ರ ಮತ್ತು ಕೊಡಗಿನ ಅಭಿವೃದ್ಧಿ ಮಾಡುವ ಉದ್ಧೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಜನರ ಆಶೀರ್ವಾದದಿಂದ ಜಯಗಳಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ. ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕ ಸಂಘದ ಅಧ್ಯಕ್ಷ ಪೊಂಗೇರ ಉಲ್ಲಾಸ್ ತಮ್ಮಯ್ಯ ವಹಿಸಿದ್ದರು.

ವೇದಿಕೆಯಲ್ಲಿ ರಾಜ್ಯ ಕಾಂಗ್ರೆಸ್ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಸ್ಥಳೀಯರಾದ ಬಾಚಮಂಡ ಲವ ಚಿಣ್ಣಪ್ಪ, ಕಲಿಯಂಡ ಸಂಪನ್ ಅಯ್ಯಪ್ಪ, ನಿವೃತ್ತ ಎಎಸ್‌ಐ ಪೊಂಗೇರ ಗಣೇಶ್, ಕಣಿಯರ ನಾಣಯ್ಯ, ಕಣಿಯರ ಮುತ್ತಕ್ಕಿ, ಐಕೋಳಂಡ ಕಾವೇರಪ್ಪ, ಕುಂಜಿಲ ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪ ಲೋಕೇಶ್, ಸಂಘದ ಪದಾಧಿಕಾರಿಗಳು ಇದ್ದರು.

ಕ್ರೀಡಾಕೂಟದಲ್ಲಿ ಎಲ್ಲಾ ವಯೋಮಾನದವರಿಗೆ ಪ್ರತ್ಯೇಕ ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ವಾಲಿಬಾಲ್, ಥ್ರೋಬಾಲ್, ಬಕೆಟ್‌ಗೆ ಚೆಂಡು ಹಾಕುವದು, ಚೆಂಡು ಬದಲಾಯಿಸುವದು, ಪುರುಷರಿಗೆ ಮತ್ತು ಮಹಿಳೆಯರಿಗೆ ಹಗ್ಗ ಜಗ್ಗಾಟ ಸ್ಪರ್ಧೆ ಏರ್ಪಡಿಸಲಾಗಿತ್ತು.