ನಾಪೋಕ್ಲು, ನ. ೩೦: ಸಮೀಪದ ಬಲಮುರಿ ಗ್ರಾಮದ ದೇವನೂರು ಗೌಡ ಒಕ್ಕೂಟದ ವತಿಯಿಂದ ಬೆಳ್ಳಿ ಹಬ್ಬ ವಿಜೃಂಭಣೆಯಿAದ ಸಂಪನ್ನ ಗೊಂಡಿತು. ಬಲಮುರಿ ಗ್ರಾಮದ ಕುಂಜಿಕಟ್ಟು ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಪಿಎಚ್‌ಡಿ, ಪ್ರಾಣಿಶಾಸ್ತçದ ವಿಜ್ಞಾನಿ ಗುಡ್ಡೆಮನೆ ಚಿಣ್ಣಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ದೇವನೂರು ಗೌಡ ಒಕ್ಕೂಟ ಕಳೆದ ೨೪ ವರ್ಷ ಗಳಿಂದ ಜನಾಂಗ ಬಾಂಧವರಿಗಾಗಿ ವಿವಿಧ ಕ್ರಾಯಕ್ರಮಗಳನ್ನು ಆಯೋಜಿಸಿ ಈ ವರ್ಷ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ವಿಜೃಂಭಣೆಯಿAದ ನಡೆಸುತ್ತಿರುವುದು ಶ್ಲಾಘನೀಯ ಎಂದರು.

ದೇವನೂರು ಗೌಡ ಒಕ್ಕೂಟದ ಅಧ್ಯಕ್ಷ ಪೊನ್ನಚ್ಚನ ಎಂ. ಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಳ್ಳಿ ಹಬ್ಬದ ರೈತ ಸಂಭ್ರಮ- ೨೦೨೩ ಸ್ಮರಣ ಸಂಚಿಕೆಯನ್ನು ಮುಖ್ಯ ಅತಿಥಿ ವಿಜ್ಞಾನಿ ಗುಡ್ಡೆಮನೆ ಚಿಣ್ಣಯ್ಯ ಮತ್ತು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಗೊಳಿಸಿದರು. ಗುಡ್ಡೆಮನೆ ಚಿಣ್ಣಯ್ಯ ಹಾಗೂ ಗೌಡ ಒಕ್ಕೂಟದ ಗೌರವ ಕಾರ್ಯದರ್ಶಿ ಬಾಕಿಲನ ಎ. ರಾಜ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕ್ರೀಡಾಕೂಟದ ವಿವರ: ದೇವನೂರು ಗೌಡ ಒಕ್ಕೂಟದ ಕ್ರೀಡಾ ಮಂಡಳಿ ವತಿಯಿಂದ ಜನಾಂಗ ಬಾಂಧವರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಭಾರದ ಕಲ್ಲು ಎಸೆತ, ೧೦೦ ಮೀಟರ್ ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರಿಗೆ ೧೦೦ ಮೀಟರ್ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ೧೦೦.೪, ವಿಷದ ಚೆಂಡು, ಚಿಣ್ಣರ ಓಟ, ಅದೃಷ್ಟದಾಟ ಸೇರಿದಂತೆ ಹಲವು ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕೆ.ವಿ. ಪ್ರಶಾಂತ್, ಗುಡ್ಡೆಮನೆ ಶಶಿ ಬೋಪಯ್ಯ, ಗುಡ್ಡೆಮನೆ ಮಾದಪ್ಪ, ಬಾಕಿಲನ ದಯಾನಂದ, ಚೀಯಪ್ಪನ ಚೇತನ್, ಮೇಡತನ ಅಪ್ಪಯ್ಯ, ಗುಡ್ಡೆಮನೆ ವಸಂತ್ ಕುಮಾರ್, ಗುಡ್ಡೆಮನೆ ಚಂದ್ರಶೇಖರ್, ಬಾಕಿಲನ ರಘು, ಬಾಕಿಲನ ನಾಗೇಶ್ ಮುದ್ದಯ್ಯ, ಚೀಯಪ್ಪನ ಚಂದ್ರಶೇಖರ್ ಬಹುಮಾನಗಳನ್ನು ಪ್ರಾಯೋಜಿ ಸಿದ್ದರು. ಮೇಡತನ, ಕುಂದನ ಮತ್ತು ಜಬ್ಬನ ಹಾಗೂ ಗುಡ್ಡೆಮನೆ ತಂಡಗಳ ನಡುವೆ ಅಂತಿಮ ಹಗ್ಗ ಜಗ್ಗಾಟ ಸ್ಪರ್ಧೆ ನಡೆದು ಮೇಡತನ, ಕುಂದನ ಮತ್ತು ಜಬ್ಬನ ತಂಡದ ಆಟಗಾರರು ಗೆಲುವು ಸಾಧಿಸಿದರು.

ವೇದಿಕೆಯಲ್ಲಿ ಗುಡ್ಡೆಮನೆ ಅನಿಲ್, ಮೇಡತನ ಅಪ್ಪಯ್ಯ, ಬಾಕಿಲನ ಪೂಣಚ್ಚ, ಗುಡ್ಡೆಮನೆ ರಾಮಪ್ಪ, ಚೀಯಪ್ಪನ ಡಿ. ಮಾದಪ್ಪ, ಅಚ್ಚಾಂಡಿರ ಪ್ರಸಾದ್, ಒಕ್ಕೂಟದ ಉಪ ಕಾರ್ಯದರ್ಶಿ ಎ.ಎಂ. ಸೋಮಣ್ಣ, ಬಾಕಿಲನ ಪ್ರೇಮ್ ಕುಮಾರ್, ಕ್ರೀಡಾ ಸಮಿತಿಯ ಅಧ್ಯಕ್ಷ ಜಿ.ಕೆ. ಚಂದ್ರಶೇಖರ್, ಗೌರವ ಕಾರ್ಯದರ್ಶಿ ಎಂ.ಎA. ಹರಿಶ್ಚಂದ್ರ, ಆಡಳಿತ ಮಂಡಳಿ, ಕ್ರೀಡಾ ಸಮಿತಿಯ ಪದಾಧಿ ಕಾರಿಗಳು ಹಾಗೂ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.

ಮೇಡತನ ರಶ್ಮಿ ಶಿವರಾಂ ಪ್ರಾರ್ಥಿಸಿ, ಮಾಜಿ ಅಧ್ಯಕ್ಷ ಕುಂದನ ಪ್ರಭಾನಂದ ಸ್ವಾಗತಿಸಿದರು. ಜಿ.ಬಿ ರಮೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜಿ.ಬಿ. ರಮೇಶ್ ಯೋಗ ಪ್ರದರ್ಶನವನ್ನು ನಡೆಸಿಕೊಟ್ಟ ಬಳಿಕ ಗೌಡ ಸಂಪ್ರದಾಯ ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಸಭಿಕರನ್ನು ರಂಜಿಸಿತು.