ಗೋಣಿಕೊಪ್ಪಲು, ೩೦: ೫೦ ನೇ ವರ್ಷದ ಕರ್ನಾಟಕ ಸಂಭ್ರಮಾಚರಣೆ ಅಂಗವಾಗಿ ಗೋಣಿಕೊಪ್ಪ ಆಟೋ ಮಾಲೀಕರ, ಚಾಲಕರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ೧೮ ನೇ ವರ್ಷದ ಕನ್ನಡ ರಾಜ್ಯೋತ್ಸವ ಬಸ್ ನಿಲ್ದಾಣದಲ್ಲಿ ಅದ್ದೂರಿಯಾಗಿ ಜರುಗಿತು.
ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಇರುವವರು ನಾವು ಕನ್ನಡಿಗರು ಎನ್ನುವುದು ಯಾವತ್ತು ಮರೆಯಬಾರದು, ಅನ್ಯ ಭಾಷೆಯನ್ನು ಗೌರವಿಸಬೇಕು, ಹೊರ ದೇಶ, ರಾಜ್ಯದಿಂದ ಬಂದವರಿಗೆ ನಮ್ಮ ಭಾಷೆಯ ಬಗ್ಗೆ ಕಾಳಜಿ
ಇರಬೇಕು, ಆಚಾರ, ವಿಚಾರ ಬಗ್ಗೆ ಜವಾಬ್ದಾರಿಯುತ ನಡೆ ಕೂಡ ಇರಬೇಕು, ಇನ್ನೊಂದು ಭಾಷೆಯನ್ನು ವಿರೋಧ ಮಾಡಬಾರದು, ಕರ್ನಾಟಕದಲ್ಲಿ ಇರುವ ನಾವೆಲ್ಲರೂ ಒಂದು ಕುಟುಂಬದAತೆ ಇರಬೇಕು, ನಮ್ಮ ಕನ್ನಡ ಭಾಷೆಯ ಮೇಲೆ, ಪ್ರೀತಿ, ಪ್ರೇಮ ತೋರಬೇಕು, ಹೊರಗಿನಿಂದ ಬಂದವರಿಗೆ
ಕನ್ನಡ ಕಲಿಸುವ ಕೆಲಸ ಆಗಬೇಕು ಎಂದರು.
(ಮೊದಲ ಪುಟದಿಂದ) ಗೋಣಿಕೊಪ್ಪ ಆಟೋ ಮಾಲೀಕರ ಹಾಗೂ ಚಾಲಕರ ಸಂಘದ ಗೌರವ ಅಧ್ಯಕ್ಷ ಕುಲ್ಲಚಂಡ ಪಿ. ಬೋಪಣ್ಣ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದೆ ತೇಜಸ್ವಿನಿಗೌಡ ಮಾತನಾಡಿ ಕನ್ನಡ ತನವನ್ನು ಉಳಿಸುವ ನಿಟ್ಟಿನಲ್ಲಿ ಆಟೋ ಚಾಲಕರು, ಮಾಲೀಕರು, ಬಸ್ ನಿರ್ವಾಹಕರು, ಚಾಲಕರು ಮೊದಲ ಸಾಲಿನಲ್ಲಿದ್ದಾರೆ. ಸೂರ್ಯ ಚಂದ್ರ ಇರುವ ತನಕ ನಮ್ಮ ಕನ್ನಡ ಉಳಿಯಲಿದೆ. ಕನ್ನಡದ ಕೆಲಸ ನಿರಂತರವಾಗಿ ಆಗಬೇಕು, ಸಾಹಿತಿಗಳಿಗೆ ಪ್ರೋತ್ಸಾಹ ಸಿಗಬೇಕು, ಈ ನೆಲ, ಜಲ ಉಳಿಸುವ ಸಲುವಾಗಿ ನಾವೆಲ್ಲರೂ ಕಟಿಬದ್ಧರಾಗಿ ದುಡಿಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಕಲೆ, ಸಂಸ್ಕೃತಿಯ ಬೀಡು ಕರ್ನಾಟಕದಲ್ಲಿ ಕನ್ನಡ ನಮ್ಮ ಭಾಷೆಯಾಗಿದೆ. ಈ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಆಟೋ ಸಂಘದ ಗೌರವ ಅಧ್ಯಕ್ಷ ಕೆ.ಪಿ.ಬೋಪಣ್ಣ, ಪ್ರಗತಿ ಆಟೋ ಸಂಘದ ಅಧ್ಯಕ್ಷ ಮಲ್ಲಂಡ ಪ್ರಕಾಶ್ ಕಾರ್ಯಕ್ರಮದ ಕುರಿತು ಮಾತನಾಡಿದರು.
ಅತಿಥಿಗಳಾಗಿ ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಮನ್ನಕ್ಕಮನೆ ಸೌಮ್ಯಬಾಲು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ. ಬೋಪಣ್ಣ, ಸ್ಥಾಪಕ ಅಧ್ಯಕ್ಷ ಪಿ.ಎಸ್. ಲೋಕೇಶ್, ಆಟೋ ಚಾಲಕರ ಸಂಘದ ಅಧ್ಯಕ್ಷ ಜಿಮ್ಮ ಸುಬ್ಬಯ್ಯ, ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಕೆ.ವೈ. ಅಶ್ವಥ್ ಉಪಸ್ಥಿತರಿದ್ದರು.
ಸಾಧಕರಾದ ತರಕಾರಿ ವ್ಯಾಪಾರಿ ಎಂ.ಆರ್. ರಫೀಕ್, ಆಟೋ ಚಾಲಕ ಗಣೇಶ್, ಸೆಸ್ಕ್ ಸಿಬ್ಬಂದಿ ಸಿದ್ದಯ್ಯ ಹಾಗೂ ಪೌರಕಾರ್ಮಿಕ ಗಣೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸ್ಥಳೀಯ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸ್ಸನ್ನು ಸೂರೆಗೊಂಡವು. ಮೈಸೂರು ಕಲಾವಿದರ ತಂಡದಿAದ ರಸ ಮಂಜರಿ ಕಾರ್ಯಕ್ರಮ ಜರುಗಿತು.
ಉತ್ತಮ ಅಲಂಕೃತ ಆಟೋ ರಿಕ್ಷಾಗಳಿಗೆ ಬಹುಮಾನ ನೀಡಲಾಯಿತು.
ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಕೆ.ವೈ. ಅಶ್ವಥ್, ಸ್ವಾಗತಿಸಿ, ಕಲಾವಿದೆ ಗೀತಾ ನಾಯ್ಡು ನಿರೂಪಿಸಿ, ಆಟೋ ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ಜಿಮ್ಮ ಸುಬ್ಬಯ್ಯ ವಂದಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಆಗಮಿಸಿದ್ದರು. -ಹೆಚ್.ಕೆ ಜಗದೀಶ್