ಕುಶಾಲನಗರ, ನ. ೩೦: ಕುಶಾಲ ನಗರ ಗಣಪತಿ ರಥೋತ್ಸವ ಅಂಗ ವಾಗಿ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲದೊAದಿಗೆ ದೇವಾಲಯಕ್ಕೆ ಆಗಮಿಸಿ ಸಾಮೂಹಿಕ ಪೂಜೆ ಸಲ್ಲಿಸಿದರು.
ದೇವಾಲಯದ ಪ್ರಧಾನ ಅರ್ಚಕ ಆರ್.ಕೆ. ನಾಗೇಂದ್ರ ಬಾಬು ಅವರ ನೇತೃತ್ವದಲ್ಲಿ ಅರ್ಚಕ ರಾಘವೇಂದ್ರ ಭಟ್ ಮತ್ತಿತರರು ವಿಶೇಷ ಪೂಜೆ ಸಲ್ಲಿಸಿ ದೇವಾಲಯದ ರಥೋತ್ಸವ ಮತ್ತು ಉತ್ಸವಾದಿಗಳು ಸಾಂಗವಾಗಿ ನೆರವೇರಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭ ಗಣಪತಿ ದೇವಾಲಯ ಸಮಿತಿ ಗೌರವ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಪಟ್ಟಣದ ವಿವಿಧ ದೇವಾಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಇAದು ರಥೋತ್ಸವ: ಕುಶಾಲನಗರ ಶ್ರೀ ಗಣಪತಿ ದೇವಸ್ಥಾನದ ರಥೋತ್ಸವ ಇಂದು ನಡೆಯಲಿದೆ. ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಗಣಪತಿ ರುದ್ರಾಭಿಷೇಕ ಪುಷ್ಪಾ ಲಂಕಾರ, ರಥಪೂಜೆ, ರಥ ಬಲಿ ನಂತರ ಮಧ್ಯಾಹ್ನ ೧೨ ಗಂಟೆಗೆ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಿ ರಥ ಬೀದಿಯಲ್ಲಿ ಸಾಗಲಿದೆ.