ನಾಪೋಕ್ಲು, ನ. ೨೯: ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದ ಚಪ್ಪಂಡಡಿ ಅಂಗನವಾಡಿಯಲ್ಲಿ ವಿದ್ಯುತ್ ವ್ಯವಸ್ಥೆಯು ಕಳೆದ ಮೂರು ತಿಂಗಳಿನಿAದ ಸ್ಥಗಿತಗೊಂಡಿದ್ದು, ನಾಪೋಕ್ಲು ಶೌರ್ಯ ತಂಡದ ಸದಸ್ಯರು ಶ್ರಮದಾನದ ಮೂಲಕ ಕಾಡು ಗಿಡ ಗಂಟಿಗಳನ್ನು ಕಡಿದು ಸರಿಪಡಿಸಿ ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಿದರು.
ಅಂಗನವಾಡಿಯ ವಿದ್ಯುತ್ ಸಂಪರ್ಕವಿರುವ ಲೈನಿನ ಮೇಲೆ ಕಾಡು ಬೆಳೆದಿದ್ದು ವಿದ್ಯುತ್ ಇಲಾಖೆಯವರು ಕಾಡು ಕಡಿದರೆ ಮಾತ್ರ ವಿದ್ಯುತ್ ಅನ್ನು ಸರಿ ಮಾಡಲು ಸಾಧ್ಯ ಎಂದು ಹೇಳಿದ ಉದ್ದೇಶದಿಂದ ಅಲ್ಲಿನ ಕರ್ತವ್ಯದಲ್ಲಿರುವ ಶಿಕ್ಷಕಿ ಶ್ವೇತ ಅವರು ಶೌರ್ಯ ತಂಡವನ್ನು ಸಂಪರ್ಕಿಸಿ ಸಹಾಯವನ್ನು ಕೇಳಿದರು.
ಸಮಸ್ಯೆಯನ್ನು ಅರಿತ ನಾಪೋಕ್ಲು ವಿಪತ್ತು ನಿರ್ವಹಣೆ ಘಟಕದ ಸ್ವಯಂಸೇವಕರು ಅಂಗನವಾಡಿಯ ಆವರಣಗಳಲ್ಲಿ ದಟ್ಟವಾಗಿ ಬೆಳೆದಿದ್ದಂತಹ ಕಾಡನ್ನು ಕಡಿದು ವಿದ್ಯುತ್ ಲೈನ್ಅನ್ನು ಸರಿಪಡಿಸಿದ್ದಲ್ಲದೆ ಮಕ್ಕಳಿಗೆ ಓಡಾಡಲು ಉತ್ತಮ ರೀತಿಯ ವ್ಯವಸ್ಥೆಯನ್ನ ಕಲ್ಪಿಸಿಕೊಟ್ಟರು.
ಶೌರ್ಯದ ತಂಡದ ಶಂಕರ್, ದಿಲೀಶ್, ಮಾಯಿಲಪ್ಪ, ಉಮಾಲಕ್ಷಿö್ಮ, ಚಂದ್ರಕಲಾ, ಸುನೀತಾ, ಸಂಯೋಜಕಿ ದಿವ್ಯ ಹಾಗೂ ಅಂಗನವಾಡಿ ಶಿಕ್ಷಕಿಯರಾದ ಶ್ವೇತ ಆಶಾಲತಾ ಗೀತಾ ಜೊತೆಗೆ ಸಹಾಯಕಿ ಗೀತಾ ಅಲ್ಲದೆ ವಿದ್ಯುತ್ ಇಲಾಖೆಯ ಮಝೀಜ್ ಹಾಜರಿದ್ದರು.