ಮಡಿಕೇರಿ, ನ. ೩೦: ಶಿವಮೊಗ್ಗ ಜಿಲ್ಲಾ ಅಡಿಷನಲ್ ಎಸ್.ಪಿ.ಯಾಗಿ ಕೊಡಗಿನವರಾದ ಅಮ್ಮಂಡ ಪ್ರಕಾಶ್ ಕಾರ್ಯಪ್ಪ ಅವರು ನಿಯೋಜಿತರಾಗಿದ್ದಾರೆ.
ಬೆಂಗಳೂರಿನಲ್ಲಿ ಲೋಕಾಯುಕ್ತದ ವಿಶೇಷ ತನಿಖಾ ತಂಡದಲ್ಲಿ ಡಿ.ವೈ.ಎಸ್.ಪಿ.ಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಇದೀಗ ಬಡ್ತಿ ಹೊಂದಿದ್ದು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಪ್ರಕಾಶ್ ಕಾರ್ಯಪ್ಪ ಅವರು ಮೂಲತಃ ಕಡಂಗ ಮುರೂರಿನವರಾಗಿದ್ದು, ಅಮ್ಮಂಡ ದಿ. ಗಣಪತಿ ಹಾಗೂ ಪಾರ್ವತಿ (ತಾಮನೆ -ನಾಳಿಯಂಡ) ದಂಪತಿಯ ಪುತ್ರ.