ವೀರಾಜಪೇಟೆ, ನ. ೨೯: ಮೈಸೂರಿನ ಶಾರದಾ ವಿಲಾಸ್ ಕಾಲೇಜು ಸಭಾಂಗಣದಲ್ಲಿ ನಡೆದ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ಹಾಗೂ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಡಾನ್ಸ್ ಫೆಡರೇಶನ್ ವತಿಯಿಂದ ಆಯೋಜಿಸಿದ್ದ ಮೈಸೂರು ಝೋನಲ್ ಡಾನ್ಸ್ ಚಾಂಪಿಯನ್ ಶಿಪ್- ೨೦೨೩ರ ಶಾಸ್ತಿçÃಯ ನೃತ್ಯ ಹಾಗೂ ಜಾನಪದ ನೃತ್ಯ ಸ್ಪರ್ಧೆಯಲ್ಲಿ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳು ಸಮಗ್ರ ಚಾಂಪಿಯನ್ ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡು ಡಿಸೆಂಬರ್ನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿದುಷಿ ಹೇಮಾವತಿ ಕಾಂತ್ರಾಜ್ ಹಾಗೂ ಕಾವ್ಯಶ್ರೀ ಅವರ ನೇತೃತ್ವದಲ್ಲಿ ವೀರಾಜಪೇಟೆಯ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಸಂಸ್ಥೆಯ ವಿದ್ಯಾರ್ಥಿಗಳಾದ ಶ್ರಾವ್ಯ, ಜನ್ವಿತಾ, ವೈಶಾಲಿ, ಗಹನ, ಪುನರ್ವಿ, ದೀಕ್ಷಾ ಕೆ.ಎನ್, ಇಶಾನಿ, ದೀಪ್ತಿ, ಅನ್ವಿತಾ, ದಿಯಾ ಎಚ್.ಜಿ, ದಿಶಾ, ಜಾಗ್ವಿ, ಸಾನ್ವಿ ವಿ.ಎ, ತಷ್ಯಾ, ಅಂಜನಿ, ಶ್ರುನಿಕ, ತ್ರಿಷ್ಯ, ಧನ್ಯಶ್ರೀ, ಕೌಶಿ, ಬೃಂದಾ, ದೀಪು, ನೇಸರ, ತಷ್ಮ ತಂಗಮ್ಮ, ದೃಶ್ಯ, ಶ್ರೇಯ ಭೋಜಮ್ಮ, ಯದ್ವಿಕ್, ಶ್ರೇಯ ಎನ್.ಎ, ತನಿಷಾ, ದಕ್ಷ, ಆದ್ಯಾ, ನೆಹಾಲಿ ನೀಲಮ್ಮ, ಮನಿಷಾ, ಗಾಯತ್ರಿ, ನಿಕೇತ, ವಿನುತಾ, ಲಿಪ್ಸ, ಅಕ್ಷತ, ಪ್ರಾಧಿನ್ಯ, ಆರುಷಿ, ಮನ್ವಿತಾ, ದಿಯಾ ಬಿ.ಬಿ, ಜನನಿ, ಸಾತ್ವಿಕ, ದಿವ್ಯ, ಚೈತನ್ಯ ಟಿ.ಡಿ. ಪ್ರಿಯಾ ಪೊನ್ನಮ್ಮ, ಶ್ರದ್ಧಾ, ದೀಕ್ಷಾ ಈ.ಎಚ್, ಪುಣ್ಯ, ವರ್ಷ ಶೇಟ್, ಚೈತನ್ಯ ಎಚ್.ಜಿ, ಅಷ್ಮಯ, ಹೇಮಶ್ರೀ, ಮತ್ತು ನೀತು ಅವರು ಭಾಗವಹಿಸಿ ಒಟ್ಟು ಚಿನ್ನ, ಬೆಳ್ಳಿ, ಕಂಚು ಸೇರಿದಂತೆ ಹಲವು ಪದಕಗಳನ್ನು ಪಡೆದುಕೊಂಡಿದ್ದಾರೆ.