ಪೊನ್ನಂಪೇಟೆ, ನ. ೨೯: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊನ್ನಂಪೇಟೆ ವಲಯದ ೯ ಒಕ್ಕೂಟಗಳ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ ಹುದಿಕೇರಿಯ ತ್ರಿವೇಣಿ ಭವನದಲ್ಲಿ ನಡೆಯಿತು. ತಾಲೂಕು ಯೋಜನಾಧಿಕಾರಿ ಬಿ. ದಿನೇಶ್ ಹಾಗೂ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಬಾನಂಗಡ ಅರುಣ್ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಯೋಜನಾಧಿಕಾರಿ ದಿನೇಶ್ರವರು ಗ್ರಾಮಾಭಿವೃದ್ಧಿ ಯೋಜನೆ ಹಿನ್ನೆಲೆ ಬಗ್ಗೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕಾರ್ಯಕ್ರಮಗಳಲ್ಲಿ ಆಗಿರುವ ಬದಲಾವಣೆಗಳು ಮತ್ತು ಮುಂದೆ ಆಗುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಹಣ ಸಂಗ್ರಹಣೆಗೆ ತಡವಾಗಿ ಬಂದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಜಿಲ್ಲಾ ಆಡಿಟ್ ಪ್ರಬಂಧಕರಾದ ಸತೀಶ್ ರೈ ಅವರು ಬಡ್ಡಿ ದರದ ಬಗ್ಗೆ ಹಾಗೂ ಲೀಡ್ ಆಪ್ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಎನ್ಆರ್ಎಂಎಲ್ರವರು ವಿಮಾ ಸೌಲಭ್ಯ ಸಂಪೂರ್ಣ ಸುರಕ್ಷಾ ಹಾಗೂ ಆರೋಗ್ಯ ರಕ್ಷಾ, ಮೈಕ್ರೋ ಬಜೆಟ್ ಪಾಲಿಸಿ, ಭೀಮಾ ಜ್ಯೋತಿ ಪಾಲಿಸಿ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಕಂತು ಬಾಕಿ ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಗುರಿ ಸಾಧನೆ ಮಾಡಿರುವ ಒಕ್ಕೂಟವನ್ನು ಪ್ರಶಂಸಿಸಲಾಯಿತು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ನರಸಿಂಹಮೂರ್ತಿ, ೯ ಒಕ್ಕೂಟಗಳ ಅಧ್ಯಕ್ಷರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.