ಮಡಿಕೇರಿ, ನ. ೨೯: ಮಡಿಕೇರಿ ಲಯನ್ಸ್ ವತಿಯಿಂದ ಸ್ಥಳೀಯ ಎ.ವಿ. ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾದ್ಯಾಯಿನಿ ಪ್ರಪುಲ್ಲ ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡುತ್ತಾ ವ್ಯವಹಾರಕ್ಕಾಗಿ ಯಾವುದೇ ಭಾಷೆ ಬಳಸಿದರೂ ಆಡು ಭಾಷೆಯಾಗಿ ಕನ್ನಡವನ್ನು ತಪ್ಪದೆ ಬಳಸಬೇಕಾಗಿದೆ. ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಬಹುದೊಡ್ಡ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ ಎಂದರು.

ಲಯನ್ಸ್ ಅಧ್ಯಕ್ಷ ಮಧುಕರ್ ಶೇಟ್ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು ಜಾತಿ, ಧರ್ಮವನ್ನು ಮೀರಿ ಒಬ್ಬ ಉತ್ತಮ ಭಾರತೀಯನಾಗಿ ಬೆಳೆದು ದೇಶದ ಸತ್ಪçಜೆಯಾಗಿ ಬದುಕಬೇಕು ಎಂದರು.

ಕಾರ್ಯದರ್ಶಿ ನಟರಾಜು ಕೆತ್ತೂರ್, ಖಜಾಂಚಿ ರವಿ ಎನ್.ಬಿ, ಪ್ರಾಂತೀಯ ಅಧ್ಯಕ್ಷ ನವೀನ್ ಅಂಬೆಕಲ್ ಹಾಗೂ ವಲಯದ ಉಸ್ತುವಾರಿ ಕವಿತಾ ಬೊಳ್ಳಪ್ಪ ಉಪಸ್ಥಿತರಿದ್ದರು.

ಅಯಾನ್ ಸ್ವಾಗತಿಸಿದರೆ, ಅಸ್ವಿದ ಮಕ್ಕಳ ದಿನಾಚರಣೆ ಬಗ್ಗೆ ಮಾತನಾಡಿದರು. ಸುಮಿತ್ರ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಿಸ್ರಿಯ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಂಸ್ಥೆಯ ಸದಸ್ಯರಾದ ಮಧುಕರ್ ಕೆ, ಗೀತಾ ಮಧುಕರ್, ಪ್ರತಿಮಾ ರವಿ, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.