ಮಡಿಕೇರಿ, ನ. ೨೯: ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ೨೦೨೨-೨೩ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಜಮಾಬಂಧಿ ಸಭೆ ಡಿಸೆಂಬರ್ ೨ ರ ಪೂರ್ವಾಹ್ನ ೧೧ ಗಂಟೆಗೆ ಪಂಚಾಯಿತಿ ನೋಡಲ್ ಅಧಿಕಾರಿ ಎಂ.ಎನ್. ನಂದೀಶ್ ಅವರ ಅಧ್ಯಕ್ಷತೆಯಲ್ಲಿ, ಅಧ್ಯಕ್ಷ ಮೂಕಚಂಡ ಸುಬ್ಬಯ್ಯ (ಪ್ರಸನ್ನ) ಸಮಕ್ಷಮದಲ್ಲಿ ಬಿಟ್ಟಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.