ಮಡಿಕೇರಿ, ನ. ೨೯: ಹಲವು ಸಾಹಿತಿಗಳು, ಚಿಂತಕರು, ಸಮಾಜಸೇವಕರು ಬದುಕಿನಲ್ಲಿ ಒಂದು ಪ್ರಶಸ್ತಿ ಗಳಿಸಿ ಇಹಲೋಕ ತ್ಯಜಿಸಬೇಕೆಂದು ಬಯಸಿ, ಆಸೆ ಈಡೇರದೆ ಕಣ್ಮುಚ್ಚುವ ಸನ್ನಿವೇಶಗಳು ಹಲವಿದೆ. ಆದರೆ ಈಗ ಬುದ್ಧಿ ಖಾಲಿ ಇದ್ದು, ಜೇಬು ತುಂಬಿದ್ದರೆ ಸಾಕು. ನಿಮಗೆ ಬೇಕಾದ ಪ್ರಶಸ್ತಿ ಆನ್ಲೈನಿನಲ್ಲಿ ಲಭ್ಯವಿದೆ. ಈ ಧನದಾಹೀ ಆನ್ಲೈನ್ ಸಂಸ್ಥೆಗಳು - ಬುದ್ಧಿವಂತರ ಸೋಗಿನ ವ್ಯಕ್ತಿಗಳಿಗೆ ಡಾಕ್ಟರೇಟ್ ಇತ್ಯಾದಿ ಹತ್ತಾರು ಪ್ರಶಸ್ತಿಗಳನ್ನು ಘೋಷಿಸುತ್ತಿರುವುದರಿಂದ, ಅರ್ಹರು ಹಿಂದಿನ ಸಾಲಿಗೆ ತಳ್ಳಲ್ಪಡುತ್ತಿದ್ದಾರೆ.
ಫೇಸ್ಬುಕ್ ಅಕೌಂಟ್ ಇರುವವರು ದಿನನಿತ್ಯ ಹತ್ತಾರು ಆಕರ್ಷಕ, ನಕಲಿ ಜಾಹೀರಾತು ನೋಡುತ್ತಾರೆ. ಕಲಾಪ್ರಶಸ್ತಿ ೨೦೨೩; ಇದರಲ್ಲಿ ಕಲೆಯ ಎಲ್ಲ ಪ್ರಾಕಾರದ ವ್ಯಕ್ತಿಗಳಿಗೂ ಪ್ರಶಸ್ತಿ ಲಭ್ಯ. ಇಂಟರ್ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್, ಮೀಡಿಯಾ ಅವಾರ್ಡ್, ಸ್ಟಾರ್ ಎಜುಕೇಷನ್ ಅವಾರ್ಡ್, ಗೋಲ್ಡನ್ ಬುಕ್ ಅವಾರ್ಡ್, ಗ್ಲೋಬಲ್ ಸ್ಕಾರ್ಸ್ ಅವಾರ್ಡ್, ಭೂಷಣ್ ಪುರಸ್ಕಾರ್, ಇಂಟರ್ನ್ಯಾಷನಲ್ ಎಜುಕೇಷನ್ ಅವಾರ್ಡ್, ಐಕಾನ್ಸ್ ಆಫ್ ಏಷಿಯಾ, ಇಂಡಿಯನ್ ಗ್ಲೋರಿ ಅವಾರ್ಡ್ - ಹೀಗೆ ಡಜನ್ಗಟ್ಟಲೆ ಜಾಹೀರಾತು ಹಾಕಿ, ಸಮಾಜದ ಕೆಳಸ್ಥರದ ವ್ಯಕ್ತಿಯಿಂದ ಹಿಡಿದು - ಮೇಲ್ವರ್ಗದವರೆಗೂ ಯಾವ್ಯಾವ ಹುದ್ದೆ, ಹವ್ಯಾಸ, ವ್ಯವಹಾರಗಳಿವೆಯೋ - ಎಲ್ಲರನ್ನು ಆಕರ್ಷಿಸಿ ಹಣ ಲಪಟಾಯಿಸುವ ದಂಧೆ ಫೇಸ್ಬುಕ್ಕಿನಲ್ಲಿ ನಡೆಯುತ್ತಿದೆ.
ಕಲಾ ಪ್ರಶಸ್ತಿಯಲ್ಲಿ ನೃತ್ಯ, ಹಾಡು, ಕೊಳಲು, ತಬಲ, ಚಿತ್ರ - ಯಾವುದೇ ಪ್ರಾಕಾರ ಆಸಕ್ತಿ ಇದ್ದರೂ ನಿಗದಿತ ಅರ್ಜಿ ತುಂಬಿ ಕಳುಹಿಸಲು ಹೇಳುತ್ತಾರೆ. ವಿದ್ಯಾಕ್ಷೇತ್ರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಪ್ರಾಧ್ಯಾಪಕರು, ಆಡಳಿತ ಮಂಡಳಿ - ಕೊನೆಗೆ ನಿವೃತ್ತ ಅಧ್ಯಾಪಕರೂ ಅರ್ಜಿ ಗುಜರಾಯಿಸಬಹುದು!
ಅವರ ಜಾಹೀರಾತಿನೊಂದಿಗೆ ೨೦೨೩ ಹಾಗೂ ೨೪ರಲ್ಲಿ ಕೊಲ್ಕತಾ, ಪುಣೆ, ಮುಂಬಯಿ, ದೆಹಲಿಗಳಲ್ಲಿ ಬೇರೆ ಬೇರೆ ದಿನಾಂಕಗಳAದು ಪ್ರಶಸ್ತಿ ಪ್ರದಾನ ನಡೆಯುವ ಸ್ಥಳಗಳು - ಬೇನಾಮಿ ಅತಿಥಿಗಳ ಹೆಸರುಗಳನ್ನು ಮುದ್ರಿಸಿ - ಅವು ಅಪ್ಪಟ - ಅಧಿಕೃತ ಪ್ರಶಸ್ತಿಗಳು ಎಂದು ಬಿಂಬಿಸಿ ವಂಚಿಸಲಾಗುತ್ತದೆ. ಮೇಲಿಂದ ಮೇಲೆ ಜಾಹೀರಾತು ಕಾಣುವ ಫೇಸ್ಬುಕ್ ಪ್ರಿಯರು ಯಾವುದಾದರೊಂದು ಪ್ರಶಸ್ತಿಯ ಜಾಲದಲ್ಲಿ ಸಿಲುಕುತ್ತಾರೆ.
ಕೆಲವೊಂದು ಅವಾರ್ಡ್ಗಳು ಕ್ರೂಸ್ಗಳಲ್ಲಿ! ಗಾಲಾ ಡಿನ್ನರ್-ನೃತ್ಯ ಇತ್ಯಾದಿಯ ಜೊತೆ!
ವಿಶ್ವದಲ್ಲಿ ಫೇಸ್ಬುಕ್ ಅಕೌಂಟ್ ಸುಮಾರು ೨.೮೯೫ ಬಿಲಿಯ ಇದೆ. ಅದರಲ್ಲಿ ಸುಮಾರು ೧.೯೦೮ ಬಿಲಿಯ ಮಂದಿ ನಿತ್ಯ ಫೇಸ್ಬುಕ್ ಬಳಸುತ್ತಾರೆ. ಬಳಸುವವರ ಪೈಕಿ ಎಷ್ಟು ಲಕ್ಷ, ಮಿಲಿಯ ಸಂಖ್ಯೆಯಲ್ಲಿ ಜನ ಜಾಹೀರಾತಿಗೆ ಮಾರು ಹೋದರು ಎಂದು ಅಂದಾಜಿಸಲು ಸಾಧ್ಯವಿಲ್ಲ.
ದಂಧೆಯ ಹಿಂದಿರುವವರು ಬುದ್ಧಿವಂತರು. ಎಲ್ಲ ಸ್ತರದ ಮಂದಿಯ ಹಣವನ್ನೂ ಬಾಚುವ ಉದ್ದೇಶದಿಂದ ಪ್ರಶಸ್ತಿಗಳಿಗೆ ಬಹುದೊಡ್ಡ ಮೊತ್ತ ಕೀಳುತ್ತಿಲ್ಲ. ಎಲ್ಲವೂ ಮೂವತ್ತರಿಂದ ಐದು ಸಾವಿರ ರೂಪಾಯಿಯ ಒಳಗೇ ಲಭ್ಯ ಎಂಬAತೆ ಮಾಡಿದ್ದಾರೆ.
(ಮೊದಲ ಪುಟದಿಂದ) ಇತ್ತೀಚೆಗೆ ಹಲವರಿಗೆ ಡಾಕ್ಟರೇಟ್ ಇತ್ಯಾದಿ ಪ್ರಶಸ್ತಿಗಳು ದೊರೆಯುತ್ತಿರುವುದನ್ನು ಗಮನಿಸುತ್ತಿದ್ದೇವೆ. ಪ್ರತಿಷ್ಠಿತ, ನೋಂದಾಯಿತ ವಿಶ್ವವಿದ್ಯಾಲಯಗಳಿಂದ ದೊರೆಯುವ ಪ್ರಶಸ್ತಿ, ಡಾಕ್ಟರೇಟ್ಗಳು ಮನ್ನಣೆಗೆ ಒಳಗಾದವು. ಹೆಸರೇ ಕೇಳದ ಸಂಸ್ಥೆಗಳಿAದ ಅಂರ್ರಾಜ್ಯ, ಅಂರ್ರಾಷ್ಟಿçÃಯ ಪ್ರಶಸ್ತಿ ಎಂದರೆ ನಂಬಲರ್ಹವಲ್ಲ. ಇಂತಹ ಮೂರ್ನಾಲ್ಕು ಪ್ರಶಸ್ತಿ ದೊರೆತವರು ನನ್ನೊಡನೆ ಪತ್ರಿಕೆಯಲ್ಲಿ ಸುದ್ದಿ ಹಾಕಲು ಕೋರಿದ್ದರು. ಪ್ರಶಸ್ತಿಗೆ ಸೂಕ್ತ ದಾಖಲೆ, ಸಂಸ್ಥೆಯ ನೋಂದಾವಣೆ ವಿವರ ಇತ್ಯಾದಿ ನೀಡಿ ಎಂದಾಗ ಅವರು ಹಿಂದೇಟು ಹಾಕಿದರು.
ಪ್ರಶಸ್ತಿಯ ಬೆಲೆ ಎಷ್ಟು ?
ನಾನು ಫೇಸ್ಬುಕ್ ನೋಡಿ ಎಕ್ಸಲೆನ್ಸ್ ಅವಾರ್ಡ್ ಮತ್ತು ಗೋಲ್ಡನ್ ಬುಕ್ ಅವಾರ್ಡ್ಗೆ ಅರ್ಜಿ ಹಾಕಿದೆ. ಅರ್ಜಿ ವೆಚ್ಚ ಮೊದಲು ೧೪೯೯ ರೂ. ಕಳುಹಿಸಿ ಅಂದರು. ಬಳಿಕ ಏನಾದರೂ ವೆಚ್ಚವಿದೆಯೆ? ಪ್ರಶಸ್ತಿ ದೊರೆತರೆ ನೀವೆಷ್ಟು ಹಣ ನೀಡುತ್ತೀರ? ನಾನು ಕನ್ನಡ ಪುಸ್ತಕ ಪ್ರಕಟಿಸಿರುವೆ, ಆದೀತೆ ಎಂದು ಪ್ರಶ್ನಿಸಿದೆ.
ಪ್ರಶಸ್ತಿ ವಿಜೇತರಿಗೆ ಹಣ ಇಲ್ಲ. ಪ್ರಯಾಣ ಭತ್ಯೆ, ವಸತಿ ಏನೂ ಇಲ್ಲ. ಬದಲು ವಿಜೇತರು ಪ್ರಶಸ್ತಿ ಪ್ರದಾನ ಸಮಾರಂಭದ ವೆಚ್ಚ ರೂ. ೨೯,೯೯೯ ಮೊದಲೇ ಕಳುಹಿಸಬೇಕು. ಅದರಲ್ಲೂ ಪ್ಯಾಕೇಜ್ ಇದೆ. ಪತ್ರಕರ್ತರೊಂದಿಗೆ ಸಂದರ್ಶನ, ಅತಿಥಿಗಳೊಂದಿಗೆ ಮಾತು ಇತ್ಯಾದಿಗಳಿಗೆಲ್ಲ ಅಷ್ಟಷ್ಟು ಎಂದು ಹೆಚ್ಚಿನ ಮೊಬಲಗು. ಆನ್ಲೈನ್ ಪೇಜಿನಲ್ಲಿ ವಿಜೇತರ ಫೋಟೋ ಪ್ರಕಟಿಸಲು ಇನ್ನಷ್ಟು ಮೊಬಲಗು. ಹೀಗೆ ಪಾಸಾದ ವಿಜೇತರನ್ನು `‘ಯಾಮಾರಿಸುವ’’ ಎಲ್ಲ ತಂತ್ರವನ್ನೂ ಬಳಸುತ್ತಾರೆ.
ವಿವರ ಪಡೆದ ನಾನು ಮೌನವಾಗಿದ್ದೆ. ಆದರೆ ಮೇಲಿಂದ ಮೇಲೆ ದೂರವಾಣಿ ಕರೆಗಳು, ವಾಟ್ಸಾಪ್ ಸಂದೇಶಗಳು ಆರಂಭವಾದವು. ಹಣ ಹಾಕಿ - ಅಪ್ಲೆöÊ ಮಾಡಿ ಇತ್ಯಾದಿ ಒತ್ತಾಯ. ಬೇಡ ಎಂದು ಜೋರಾಗೇ ಹೇಳಿದ್ದರೂ ಇಂದು ಮತ್ತೆ ಅವರಿಂದ ಕರೆ ಬಂದಿತು. ಹಾಗಾಗಿ ಈ ಲೇಖನ. ಜುಜುಬಿ ಪ್ರಶಸ್ತಿಗಳ ಬೆನ್ನು ಬಿದ್ದು ಅನಾವಶ್ಯಕ ಹಣ ಕಳೆದುಕೊಳ್ಳಬೇಡಿ.
-ಬಿ.ಜಿ. ಅನಂತಶಯನ