ಪೊನ್ನಂಪೇಟೆ, ನ. ೩೦: ಪ್ರತಿಷ್ಠಿತ ಪೊನ್ನಂಪೇಟೆ ನಾಡು ವ್ಯವಸಾ ಯೋತ್ಪನ್ನ ಮಾರುಕಟ್ಟೆ ಹಾಗೂ ಪರಿವರ್ತನ ಸಹಕಾರ ಸಂಘದ ೨೦೨೩- ೨೮ ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಮುದ್ದಿಯಡ ಡಿ. ಗಣಪತಿ (ಮಂಜು) ಹಾಗೂ ಉಪಾಧ್ಯಕ್ಷರಾಗಿ ಬೊಟ್ಟಂಗಡ ದಶಮಿ ದೇಚಮ್ಮ ಅವಿರೋಧವಾಗಿ ಆಯ್ಕೆಯಾದರು.
೧೩ ನಿರ್ದೇಶಕರುಗಳನ್ನೊ ಳಗೊಂಡ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯು ಸಂಘದ ಸಭಾಂ ಗಣದಲ್ಲಿ ನಡೆಯಿತು. ನೂತನವಾಗಿ ಆಯ್ಕೆಗೊಂಡ ನಿರ್ದೇಶಕರುಗಳಿಗೆ ದೃಢೀಕರಣ ಪತ್ರವನ್ನು ವಿತರಿಸಲಾಯಿತು.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಮುದ್ದಿಯಡ ಡಿ. ಗಣಪತಿ ಎರಡನೇ ಬಾರಿಗೆ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭ ಸಂಘದ ನಿರ್ದೇಶಕರಾದ ಮುದ್ದಿಯಡ ಎ. ಸೋಮಯ್ಯ, ಚೋಡುಮಾಡ ಪಿ. ಶ್ಯಾಮ್, ಪಧಾರ್ಥಿ ಎಸ್. ಮಂಜುನಾಥ, ಮೂಕಳೇರ ಪಿ. ಶಾರದ, ಬಿಲ್ಲವ ಎಸ್. ಚಂದ್ರಶೇಖರ್, ಮಾಚಂಗಡ ಬಿ. ಮೊಣ್ಣಪ್ಪ ನಿರನ್, ಮೂಕಳೇರ ಬಿ. ರಮೇಶ್, ಬೋಡoಗಡ ಟಿ. ಜಗದೀಶ್, ಐನಂಡ ಕೆ. ಬೋಪಣ್ಣ, ಹಾಲುಮತದ ಎಂ. ಡಿಕ್ಕಿ, ಹೆಚ್.ಹೆಚ್. ತಮ್ಮಯ್ಯ ಹಾಜರಿದ್ದು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಶುಭ ಕೋರಿದರು. ಚುನಾವಣಾ ಅಧಿಕಾರಿ ಪಿ.ಆಶಾ ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು.