ಪೊನ್ನಂಪೇಟೆ, ನ. ೩೦: ಬಿಟ್ಟಂಗಾಲ ಸಮೀಪದ ವಿ. ಬಾಡಗದಲ್ಲಿ ನಡೆಯುತ್ತಿರುವ ಹೈಫ್ಲೈಯರ್ಸ್ ಕಪ್-೨೦೨೩ರ ಕ್ವಾರ್ಟರ್ ಫೈನಲ್ ಪಂದ್ಯವಾಡಿದ ಚೇಂದಿರ, ಕರ್ತಮಾಡ, ಚಂದೂರ ಮತ್ತು ಕೊಂಗAಡ ತಂಡಗಳು ಸೆಮಿಫೈನಲ್ಗೆ ಪ್ರವೇಶಿಸಿವೆ.
ವಿ. ಬಾಡಗದ ಹೈಫ್ಲೆöÊಯರ್ಸ್ ಸಂಸ್ಥೆ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜರುಗುತ್ತಿರುವ ವೀರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ನಾಡು ವ್ಯಾಪ್ತಿಯ ೨ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಹೈಫ್ಲೆöÊಯರ್ಸ್ ಕಪ್-೨೦೨೩ರ ಗುರುವಾರದ ೩ನೇ ದಿನದ ಪಂದ್ಯಾವಳಿಯಲ್ಲಿ ಈ ೪ ತಂಡಗಳು ಸೆಮಿಫೈನಲ್ಸ್ ಸುತ್ತಿಗೆ ಅರ್ಹತೆ ಪಡೆದುಕೊಂಡಿವೆ.
ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೇಂದಿರ ತಂಡವು ಸಣ್ಣುವಂಡ ತಂಡವನ್ನು ೫-೨ ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಹೇಮಂತ್ ೯ನೇ ನಿಮಿಷದಲ್ಲಿ, ಪುನೀತ್ ೧೯ನೇ ನಿಮಿಷದಲ್ಲಿ, ಅತಿಥಿ ಆಟಗಾರ ಮಂಜುನಾಥ್ ೨೩ನೇ ನಿಮಿಷದಲ್ಲಿ ಮತ್ತು ಚಿಣ್ಣಪ್ಪ ೪೩ನೇ ಮತ್ತು ೫೦ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಪರಾಜಿತ ತಂಡದ ಪರವಾಗಿ ಪೊನ್ನಣ್ಣ ೩೯ನೇ ಮತ್ತು ೫೩ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ೨ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚಂದೂರ ತಂಡವು ಗುಮ್ಮಟ್ಟಿರ ತಂಡವನ್ನು ೬-೨ ಗೋಲುಗಳಿಂದ ಸೋಲಿಸಿ ಮುನ್ನಡೆ ಸಾಧಿಸಿತು. ಚಂದುರ ತಂಡದ ಪರವಾಗಿ ಸುರೇಶ್ ಗಣಪತಿ ೬ನೇ, ಅತಿಥಿ ಆಟಗಾರ ಕಿರಣ್ ಮೇದಪ್ಪ ಹತ್ತನೇ, ೫೩ನೇ ಹಾಗೂ ೫೭ನೇ ನಿಮಿಷದಲ್ಲಿ, ಮತ್ತೋರ್ವ ಅತಿಥಿ ಆಟಗಾರ ಚೇತನ್ ಸೋಮಣ್ಣ ೧೩ನೇ ಹಾಗೂ ೪೪ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಪರಾಜಿತ ತಂಡದ ಪರವಾಗಿ ಅತಿಥಿ ಆಟಗಾರ ಬೋಪಣ್ಣ ೨೩ನೇ ಹಾಗೂ ಯಶ್ವಿನ್ ೫೧ನೇ ನಿಮಿಷದಲ್ಲಿ ಗೋಲು ಹೊಡೆದರು.
೩ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ತಮಾಡ ತಂಡವು ಮೇಚಿಯಂಡ ತಂಡವನ್ನು ೩-೨ ಗೋಲುಗಳಿಂದ ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಬೆಳ್ಯಪ್ಪ ೬ನೇ, ಸಾಗರ್ ಪೂಣಚ್ಚ ೩೨ನೇ ಮತ್ತು ೫೩ನೇ ನಿಮಿಷದಲ್ಲಿ ಗೋಲು ಹೊಡೆದರೆ, ಮೇಚಿಯಂಡ ತಂಡದ ಪರವಾಗಿ ವಿನಿತ್ ನಾಣಯ್ಯ ೯ನೇ ಹಾಗೂ ಅತಿಥಿ ಆಟಗಾರ ನಾಚಪ್ಪ ೫೮ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಂಗAಡ ತಂಡವು ಅಮ್ಮಣಿಚಂಡ ತಂಡವನ್ನು ಸಡನ್ ಡೆತ್ನಲ್ಲಿ ೭-೬ ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.
ಆರAಭದಿAದಲೇ ತೀವ್ರ ಹಣಾಹಣಿಯಿಂದ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ವಿಜೇತ ತಂಡದ ಪರವಾಗಿ ಅದ್ವೆöÊತ್ ೧೬ನೇ ನಿಮಿಷದಲ್ಲಿ ಮತ್ತು ನಾಚಪ್ಪ ೫೪ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಅಮ್ಮಣಿಚಂಡ ತಂಡದ ಪರವಾಗಿ ಅತಿಥಿ ಆಟಗಾರ ದಿವಾನ್ ೪೮ನೇ ನಿಮಿಷದಲ್ಲಿ ಮತ್ತು ಚೇತನ್ ೫೫ನೇ ನಿಮಿಷದಲ್ಲಿ ಗೋಲು ಬಾರಿಸಿದ್ದರಿಂದ ದ್ವಿತೀಯಾರ್ಧದ ಅಂತ್ಯದ ವೇಳೆಗೆ ಎರಡೂ ತಂಡಗಳು ಸಮಬಲ ಸಾಧಿಸಿದವು. ಇದರಿಂದ ಶೂಟ್ ಔಟ್ ನಿಯಮಾವಳಿ ಅಳವಡಿಸಿದ ಸಂದರ್ಭದಲ್ಲಿ ಉಭಯ ತಂಡಗಳು ಮತ್ತೆ ಸಮಬಲದ ಗೋಲು ದಾಖಲಿಸಿದ ಕಾರಣ ಸಡನ್ ಡೆತ್ ಅಳವಡಿಸಬೇಕಾಯಿತು. ಈ ವೇಳೆ ವಿಜೇತ ತಂಡದ ಪರವಾಗಿ ಒಂದು ಗೋಲು ಹೆಚ್ಚು ದಾಖಲಾದ ಕಾರಣ ಕೊಂಗAಡ ತಂಡಕ್ಕೆ ಅದೃಷ್ಟ ಒಲಿಯಿತು. ಕೊಂಗAಡ ತಂಡದ ಪರವಾಗಿ ಅತಿಥಿ ಆಟಗಾರ ಚೆಲ್ಸಿ ಮೇದಪ್ಪ ೨ ಗೋಲು ಬಾರಿಸಿದರೆ, ತಂಡದ ಅದ್ವೆöÊತ್, ರಚನ್ ಮತ್ತು ನಾಚಪ್ಪ ತಲಾ ಒಂದೊAದು ಗೋಲು ದಾಖಲಿಸಿದರು. ಪರಾಜಿತ ತಂಡದ ಪರವಾಗಿ ಅತಿಥಿ ಆಟಗಾರ ಚೇತನ್ ೨ ಗೋಲು ಬಾರಿಸಿದರೆ ತಂಡದ ವಿಘ್ನೇಶ್ ಬೋಪಣ್ಣ ಮತ್ತು ಸಂಜು ಸೋಮಯ್ಯ ತಲಾ ಒಂದೊAದು ಗೋಲು ಬಾರಿಸಿದರು.
-ರಫೀಕ್ ತೂಚಮಕೇರಿ