ಪೊನ್ನಂಪೇಟೆ, ನ. ೨೯: ಕೊಡಗಿನ ಮಂದ್ ಮಾನಿಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸುವAತೆ ಸಂಸದೆ ತೇಜಸ್ವಿನಿ ಗೌಡ ಕರೆ ನೀಡಿದರು.
ಪೊನ್ನಂಪೇಟೆ ಸಮೀಪದ ಬೊಟ್ಟಿಯತ್ ನಾಡ್ ದೇವಮಕ್ಕಡ ಬಾಣೆ ಪುತ್ತರಿ ಕೋಲ್ ಮಂದ್ ಸಂದರ್ಭ ಮಂದ್‌ಗಳ ಅಧ್ಯಯನಕ್ಕಾಗಿ ಭೇಟಿ ನೀಡಿ ಮಾತನಾಡಿದ ಅವರು, ಕೊಡವ ಜನಾಂಗ ಈ ದೇಶದಲ್ಲಿಯೇ ಒಂದು ವಿಶಿಷ್ಟ ಜನಾಂಗವಾಗಿದ್ದು, ನಶಿಸಿ ಹೋಗುತ್ತಿರುವ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಯುವ ಜನಾಂಗ ಮುಂದಾಗಬೇಕಿದೆ. ಕೊಡಗಿನ ಮಂದ್‌ಗಳ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಂದ್‌ಗಳ ಬೆಳವಣಿಗೆಗೆ ಸರ್ಕಾರದ ಮಟ್ಟದಲ್ಲಿ ಸಹಾಯ ಮಾಡುವುದಾಗಿ ಹೇಳಿದರು. ನಮ್ಮ ಸಂಸ್ಕೃತಿ, ಉಡುಗೆ-ತೊಡುಗೆಗಳ ಬಗ್ಗೆ ನಮಗೆ ಕೀಳರಿಮೆ ಇರಬಾರದು. ಮೊದಲು ನಾವು ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು. ಹಾಗಾದರೆ ಮಾತ್ರ ಒಂದು ಜನಾಂಗದ ಉಳಿವು ಸಾಧ್ಯ ಎಂದರು.
ಈ ಸಂದರ್ಭ ಹುದೂರುವಿನ ತಕ್ಕ ಹಾಗೂ ಬೊಟ್ಟಿಯತ್‌ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಸೇರಿದಂತೆ ಹಳ್ಳಿಗಟ್ಟು, ಈಚೂರ್, ಕುಂದಾ, ಮುಗಟಗೇರಿ, ಅರ್ವತೊಕ್ಲು ಗ್ರಾಮಗಳ ತಕ್ಕ ಮುಖ್ಯಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಸಾಮೂಹಿಕ ಮೂರು ಸುತ್ತು ಪುತ್ತರಿ ಕೋಲಾಟ್ ನಡೆಯಿತು.