ಶನಿವಾರಸಂತೆ, ನ. ೨೮: ಸಮೀಪದ ಕೊಡಗು-ಹಾಸನ ಗಡಿಭಾಗ ಹೊಸೂರು ಗ್ರಾಮದಲ್ಲಿರುವ ೪೦೦ ವರ್ಷಗಳ ಇತಿಹಾಸವಿರುವ ಚೋಳರ ಕಾಲದ ಶ್ರೀಬೆಟ್ಟದ ಬಸವೇಶ್ವರ ದೇವಾಲಯದ ಶ್ರೀ ಬಸವೇಶ್ವರ ದೇವಾಲಯ ಸಮಿತಿ ವತಿಯಿಂದ ಸೋಮವಾರ ಇತಿಹಾಸ ಪ್ರಸಿದ್ಧ ಕೌಟೇಕಾಯಿ ಜಾತ್ರೆ ವಿಜೃಂಭಣೆಯಿAದ ಜರುಗಿತು.

ಬೆಳಿಗ್ಗೆ ೯ ಗಂಟೆಯಿAದ ೧೨ ಗಂಟೆಯವರೆಗೆ ದೇವಾಲಯದಲ್ಲಿ ಅರ್ಚಕರು ಬಸವೇಶ್ವರ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಕೊಡಗು ಜಿಲ್ಲೆಯ ಗಡಿಭಾಗದ ಶನಿವಾರಸಂತೆ, ಇತರೆಡೆಯ ಭಕ್ತರು ಹಾಗೂ ಸಕಲೇಶಪುರ ತಾಲೂಕಿನ ವಿವಿಧೆಡೆಯ ಭಕ್ತರು ಸ್ಥಳೀಯ ಭಕ್ತರೊಂದಿಗೆ ಶ್ರದ್ಧಾಭಕ್ತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಮಧ್ಯಾಹ್ನ ೧ ಗಂಟೆಗೆ ದೇವಾ ಲಯ ಮುಂಭಾಗದ ಕೌಟೇಕಾಯಿ ಮತ್ತು ಹೂವುಗಳಿಂದ ಅಲಂಕೃತ ವೇದಿಕೆಯಲ್ಲಿ ಸನ್ಮಾನ ಸಮಾರಂಭ ಆರಂಭವಾಯಿತು. ಹೊಸೂರು ಗ್ರಾಮದ ಬೆಂಗಳೂರಿನ ಉದ್ಯಮಿ ಕೆ.ಟಿ. ಬೆಳ್ಳಿಗೌಡ ಕೌಟೇಕಾಯಿ ದೀಪವನ್ನು ಬೆಳಗಿಸಿ ಸಮಾರಂಭ ಉದ್ಘಾಟಿಸಿದರು.

ಬೆಂಗಳೂರಿನ ಯುವ ಉದ್ಯಮಿ ಕೀರ್ತಿ, ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಹಾಗೂ ಜಾತ್ರಾ ಸಮಿತಿ ಕಾರ್ಯದರ್ಶಿ ಹಾಗೂ ಪರಿಸರ ಹೋರಾಟಗಾರ ಹೊಸೂರು ರಮೇಶ್ ಮಾತನಾಡಿದರು.

ಸಮಾರಂಭದಲ್ಲಿ ಬೆಂಗಳೂರಿನ ಹಿರಿಯ ಉದ್ಯಮಿ ಕೆ.ಟಿ.ಬೆಳ್ಳಿಗೌಡ, ಯುವ ಉದ್ಯಮಿ ಕೀರ್ತಿ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಸಹಕಾರಿ ಧುರೀಣ ಸೋಮೇಗೌಡ, ಶನಿವಾರಸಂತೆ ಪತ್ರಕರ್ತ ಕೆ.ಎನ್. ದಿನೇಶ್ ಮಾಲಂಬಿ ಹಾಗೂ ದಾನಿ ವಿಶ್ವನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಾತ್ರೆ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗಿದ್ದು ಶನಿವಾರಸಂತೆ ಕಾವೇರಿ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಮೂಹಿಕ ನೃತ್ಯ ಜನಮನ ಸೆಳೆಯಿತು. ದೇವಾಲಯ ಆಡಳಿತ ಮಂಡಳಿ ಹಾಗೂ ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.