ಕೂಡಿಗೆ, ನ. ೨೮: ಬಸವನಹಳ್ಳಿಯ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಇದರ ಮಾಸಿಕ ಸಭೆಯು ಅಧ್ಯಕ್ಷ ಎನ್.ಆರ್. ಅರುಣ್ ರಾವ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸಂಘದ ಅಭಿವೃದ್ಧಿಗೆ ಪೂರಕವಾದ ಅಂಶ ಸಂಘದ ಸದಸ್ಯರುಗಳಿಗೆ ಸಹಕಾರವಾಗುವ ವಿವಿಧ ಯೋಜನೆಗಳನ್ನು ಹಮ್ಮಿ ಕೊಳ್ಳುವ ಬಗ್ಗೆ, ಕಟ್ಟಡದ ಮೇಲ್ಛಾವಣಿ ಅಳವಡಿಸಿ, ಸಂಘಕ್ಕೆ ತಾಂತ್ರಿಕ ಪರಿಣಿತರ ನೇಮಕ ಮಾಡಿ ಕೊಳ್ಳುವ ವಿಷಯ, ಸಂಘ ಪ್ರಗತಿಪರ ಯೋಜನೆಗೆ ಸಂಬAಧಿಸಿ ದಂತೆ ವಿಷಯದ ಚರ್ಚೆಗಳು ನಡೆದವು.

ಅಧ್ಯಕ್ಷ ಎನ್. ಆರ್. ಅರುಣ್ ರಾವ್ ಮಾತನಾಡಿ, ಮುಂದಿನ ದಿನಗಳಲ್ಲಿ ವಿಭಾಗಿಯ ಸಹಕಾರ ಇಲಾಖೆಯ ಸಹಕಾರದೊಂದಿಗೆ ನೂತನ ಕಟ್ಟಡದ ಯೋಜನೆಗಳನ್ನು ಹಮ್ಮಿಕೊಳ್ಳುವ ವಿಷಯಗಳ ಬಗ್ಗೆ ಸಭೆಯಲ್ಲಿ ಮಾಹಿತಿಯನ್ನು ತಿಳಿಸಿದರು ಅದರ ಮುಖೇನ ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಮುಖ್ಯ ಎಂದರು.

ಇದೇ ಸಂದರ್ಭದಲ್ಲಿ ನೂತನವಾಗಿ ಕುಶಾಲನಗರ ವಲಯ ಅರಣ್ಯಾಧಿಕಾರಿಯಾಗಿ ನೇಮಕಗೊಂಡಿರುವ ಎಂ.ಎ. ರತನ್ ಕುಮಾರ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೇರಿದಂತೆ ಸರ್ವ ನಿರ್ದೇಶಕರು, ಮುಖ್ಯ ಕಾರ್ಯನಿವಾರ್ಹಣಾಧಿಕಾರಿ ಹಾಜರಿದ್ದರು.