ಮಡಿಕೇರಿ, ನ. ೨೮: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ, ಮಡಿಕೇರಿ ಓಂಕಾರೇಶ್ವರ ದೇವಾ ಲಯ ವ್ಯವಸ್ಥಾಪನ ಸಮಿತಿ, ಹೆಬ್ಬಟ್ಟ ಗೇರಿಯ ಪಾಂಡೀರ ಕುಟುಂಬ ಮತ್ತು ಮಡಿಕೇರಿ ಕೊಡವ ಸಮಾ ಜದ ವತಿಯಿಂದ ಐತಿಹಾಸಿಕ ಪುತ್ತರಿ ಕೋಲಾಟ್ ಕಾರ್ಯಕ್ರಮ ನಗರದ ಕೋಟೆ ಆವರಣದಲ್ಲಿ ನಡೆಯಿತು.

ಕೋಟೆ ಗಣಪತಿ ದೇವಾಲಯ ದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಾಂಡೀರ ಕುಟುಂಬಸ್ಥರು ದೇವ ಕೋಲನ್ನು ಕೋಟೆಯ ಮಂದ್‌ಗೆ ದುಡಿಕೊಟ್ಟ್ ಪಾಟ್, ವಾಲಗ ಸಹಿತ ತಂದು ಪ್ರಾರ್ಥನೆ ಸಲ್ಲಿಸಿ ಪುತ್ತರಿ ಕೋಲಾಟ್‌ಗೆ ಚಾಲನೆ ನೀಡಿದರು.

ಪಾಂಡೀರ ಕುಟುಂಬ, ಮಡಿಕೇರಿ ಕೊಡವ ಸಮಾಜ, ಪೊಮ್ಮಕ್ಕಡ ಒಕ್ಕೂಟದಿಂದ ಕೋಲಾಟ್, ಉಮ್ಮತ್ತಾಟ್, ಬೊಳಕಾಟ್, ಪರೆಕಳಿ ಪ್ರಸ್ತುತಗೊಂಡು ಕೊನೆಗೆ ನೆರೆದಿದ್ದವರು ವಾಲಗಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಪಾಲ್ಗೊಂಡು ಮಾತನಾಡಿ, ಭತ್ತ ಕಟಾವು ಮಾಡಿ ಧಾನ್ಯಲಕ್ಷಿö್ಮಯನ್ನು ಬರಮಾಡಿಕೊಳ್ಳುವ ಮುನ್ನ ಕೊಡವ ಜನಾಂಗ ಸಾಂಸ್ಕೃತಿಕ ಚಟುವಟಿಕೆ ಮೂಲಕ ಸಂಭ್ರಮಿಸುತ್ತಿದ್ದರು. ರಾಜರ ಕಾಲದಿಂದ ಪುತ್ತರಿ ಕೋಲಾಟ್ ಆರಂಭ ವಾಯಿತು. ಮೊದಲು ಗದ್ದಿಗೆಯಲ್ಲಿ ಕಾರ್ಯಕ್ರಮ ನಡೆಯುತಿತ್ತು. ಅದು ಸಮಾಧಿ ಎಂಬ ಕಾರಣಕ್ಕೆ ತಾನು ಶಾಸಕನಾಗಿದ್ದ ಸಂದರ್ಭ ಕೋಟೆ ಆವರಣಕ್ಕೆ ಸ್ಥಳಾಂತರ ಮಾಡಲಾ ಯಿತು. ಜನಾಂಗದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕು. ನಶಿಸದಂತೆ ಎಚ್ಚರವಹಿಸಬೇಕೆಂದು ಕರೆ ನೀಡಿದರು. ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಓಂಕಾರೇಶ್ವರ ದೇವಾಲಯ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ವ್ಯವಸ್ಥಾಪಕ ದೇವರಾಜು, ಪಾಂಡೀರ ಕುಟುಂಬದ ಪಟ್ಟೇದಾರ ಮೇದಪ್ಪ, ತಕ್ಕಮುಖ್ಯಸ್ಥ ರವಿ ಕರುಂಬಯ್ಯ, ಕೊಡವ ಸಮಾಜದ ಪದಾಧಿಕಾರಿಗಳು ಹಾಜರಿದ್ದರು.

ಪಾಂಡೀರ ನಿರೀಕ್ಷ ಬೋಜಮ್ಮ ಪ್ರಾರ್ಥಿಸಿ, ಕೊಡವ ಸಮಾಜ ನಿರ್ದೇಶಕ ಕೇಕಡ ವಿಜಯ್ ಸ್ವಾಗತಿಸಿ, ಚೋಕಿರ ಅನಿತಾ ನಿರೂಪಿಸಿ, ಪಾಂಡೀರ ಹೇಮಾ ವಂದಿಸಿದರು.