ಪೊನ್ನಂಪೇಟೆ, ನ.೨೮: ರಾಷ್ಟಿçÃಯ ಹಾಕಿ ತಂಡಗಳಲ್ಲಿ ಕೊಡಗಿನ ಆಟಗಾರರ ಸಂಖ್ಯೆ ಕಡಿಮೆ ಯಾಗುತ್ತಿದೆ. ಇದು ಹೀಗೆ ಮುಂದುವರೆದರೆ ಹಾಕಿ ಕ್ರೀಡೆಯ ತವರಾದ ಕೊಡಗಿನ ಹೆಗ್ಗಳಿಕೆಗೆ ಹಿನ್ನೆಡೆಯಾಗುತ್ತದೆ. ಆದ್ದರಿಂದ ಕೊಡವರು ಯಾವುದೇ ಕಾರಣಕ್ಕೂ ಹಾಕಿ ಕ್ರೀಡೆಯನ್ನು ನಿರ್ಲಕ್ಷಿಸಬಾರದು ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ.ಬೋಪಣ್ಣ ಹೇಳಿದರು.
ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೆöÊಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ವೀರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ೨ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ 'ಹೈ ಪ್ಲೆöÊಯರ್ಸ್ ಕಪ್-೨೦೨೩' ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಹಾಕಿ ಕ್ರೀಡೆಯ ಬಗ್ಗೆ ಕೊಡವರು ಆಸಕ್ತಿ ವಹಿಸದಿದ್ದಲ್ಲಿ ಅದಕ್ಕೆ ಭವಿಷ್ಯವಿಲ್ಲ. ಕೊಡವರ ಹೆಗ್ಗಳಿಕೆಗಳಿಗೆ ಒಂದು ಗರಿ ಮೂಡಿಸುವಲ್ಲಿ ೩ಆರನೇ ಪುಟಕ್ಕೆ
(ಮೊದಲ ಪುಟದಿಂದ) ಹಾಕಿ ಕ್ರೀಡೆಯ ಪಾತ್ರವೂ ಬಹಳಷ್ಟಿದೆ. ಆದ್ದರಿಂದ ಕೊಡಗಿನ ನೈಜ ಹಾಕಿ ಆಟಗಾರರನ್ನು ರೂಪಿಸಲು ಕೆಳಮಟ್ಟದ ಶ್ರಮ ತೀರಾ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಸಿಎನ್ಸಿ ಅಧ್ಯಕ್ಷ ನಂದಿನೆರವAಡ ಯು. ನಾಚಪ್ಪ ಮಾತನಾಡಿ, ಹಾಕಿ ಕ್ರೀಡೆಗೆ ಕೊಡವರ ಕೊಡುಗೆ ವರ್ಣಿಸಲು ಅಸಾಧ್ಯ. ಸರಕಾರದ ಯಾವುದೇ ಅನುದಾನದ ನೆರವಿಲ್ಲದೆ ೧೯೯೭ರಲ್ಲಿ ತಮ್ಮ ವಿಭಿನ್ನ ಚಿಂತನೆಯ ಮೂಲಕ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಪ್ರಾರಂಭಿಸಿದ ಪಾಂಡAಡ ಕುಟ್ಟಪ್ಪ ಅವರು ಕೊಡಗಿನ ಹಾಕಿ ಕ್ರೀಡೆಗೆ ಹೊಸ ಆಯಾಮ ನೀಡಿದವರಾಗಿದ್ದಾರೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಅಂತರರಾಷ್ಟಿçÃಯ ಖ್ಯಾತಿಯ ಅಥ್ಲೆಟಿಕ್ ತಾರೆ, ಏಕಲವ್ಯ ಪ್ರಶಸ್ತಿ ವಿಜೇತ ತೀತಮಾಡ ಅರ್ಜುನ್ ದೇವಯ್ಯ ಮಾತನಾಡಿ, ಇಡೀ ಭಾರತ ಹಾಕಿ ತಂಡವನ್ನು ಮುನ್ನೆಡೆಸುವ ಸಾಮರ್ಥ್ಯ ಹೊಂದಿರುವ ಕೊಡವ ಹಾಕಿ ಆಟಗಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಕೆಲವೊಂದು ಕಾರಣಗಳಿಂದ ಪರಿಣಿತ ಆಟಗಾರರಿಗೂ ಭಾರತ ತಂಡದಲ್ಲಿ ಅವಕಾಶ ದೊರೆಯುತ್ತಿಲ್ಲ. ಯಾವುದೇ ಅಡೆತಡೆಗಳಿದ್ದರೂ ಅವುಗಳೆಲ್ಲವನ್ನು ಮೆಟ್ಟಿನಿಂತು ಕೊಡಗಿನ ಆಟಗಾರರು ಭಾರತದ ಹಾಕಿ ತಂಡದಲ್ಲಿ ಸ್ಥಾನ ಪಡೆದು ದೇಶವನ್ನು ಪ್ರತಿನಿಧಿಸುವ ಕಾಲ ಮತ್ತೆ ಮರುಕಳಿಸಲಿದೆ. ಈ ಕುರಿತು ಎಲ್ಲರೂ ಆಶಾವಾದಿಗಳಾಗಿರಬೇಕು ಎಂದು ಕಿವಿಮಾತು ಹೇಳಿದರು.
ಇದಕ್ಕೂ ಮೊದಲು ಹೈ ಪ್ಲೈಯರ್ಸ್ ಕಪ್-೨೦೨೩ರ ವಿಜೇತರಿಗೆ ನೀಡಲಾಗುವ ಆಕರ್ಷಕ ಟ್ರೋಫಿಗಳನ್ನು ಅರ್ಜುನ್ ದೇವಯ್ಯ ವೇದಿಕೆಯಲ್ಲಿ ಅನಾವರಣಗೊಳಿಸಿದರು. ಎನ್. ಯು. ನಾಚಪ್ಪ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಹಾಕಿ ಕೂರ್ಗ್ ಸಂಸ್ಥೆಯ ಅಧ್ಯಕ್ಷರಾದ ಪಳಂಗAಡ ಲವಕುಮಾರ್, ಕಾಫಿ ಬೆಳಗಾರರಾದ ಕೊಲ್ಲಿರ ಬೋಪಣ್ಣ, ಸ್ಥಳೀಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕಂಜಿತAಡ ಗಿಣಿ ಮೊಣ್ಣಪ್ಪ, ವಿ. ಬಾಡಗ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕೆ. ಸಿ. ಗೀತಾಂಜಲಿ, ಹೈಪ್ಲೈಯರ್ಸ್ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷರಾದ ಮಳವಂಡ ಗಿರೀಶ್ ಮುದ್ದಯ್ಯ, ಪಂದ್ಯಾವಳಿ ನಿರ್ದೇಶಕರಾದ ಕುಪ್ಪಂಡ ದಿಲನ್ ಬೋಪಣ್ಣ ಮೊದಲಾದವರು ಪಾಲ್ಗೊಂಡಿದ್ದರು.
ಗಾಯಕ ವೀರಾಜಪೇಟೆಯ ಮಾಳೇಟಿರ ಅಜಿತ್ ಪೂವಣ್ಣ ಪ್ರಾರ್ಥಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿ. ಬಾಡಗ ಹೈಪ್ಲೆöÊಯರ್ಸ್ ಸಂಸ್ಥೆಯ ಅಧ್ಯಕ್ಷರಾದ ಅಮ್ಮಣಿಚಂಡ ರಂಜಿ ಪೂಣಚ್ಚ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ವೀಕ್ಷಕ ವಿವರಣೆಗಾರರಾದ ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು. ಅಮ್ಮಣಿಚಂಡ ರೋಹಿತ್ ವಂದಿಸಿದರು.
೪ ತಂಡಗಳ ಮುನ್ನಡೆ
ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಪ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ವೀರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ ೨ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಹೈ ಪ್ಲೈಯರ್ಸ್ ಕಪ್-೨೦೨೩ರಲ್ಲಿ ಒಟ್ಟು ನಾಲ್ಕು ತಂಡಗಳು ಮುನ್ನಡೆ ಸಾಧಿಸಿವೆ. ಮಂಗಳವಾರದAದು ಮೊದಲ ದಿನದ ಪಂದ್ಯವಾಡಿದ ಅಮ್ಮಣಿಚಂಡ, ಚೊಟ್ಟೆಪಂಡ, ಮೇಚಿಯಂಡ ಮತ್ತು ಚಂದೂರ ತಂಡಗಳು ಎದುರಾಳಿಗಳನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.
ಮೊದಲ ಪಂದ್ಯದಲ್ಲಿ ಅಮ್ಮಣಿಚಂಡ ತಂಡವು ನಾಮೆರ ತಂಡವನ್ನು ೬-೨ ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ ವಿಘ್ನೇಶ್ ೩, ಅತಿಥಿ ಆಟಗಾರ ದಿವಾನ್, ಸಂಜು ಮತ್ತು ಬೆನ್ನಿ ತಲಾ ಒಂದು ಗೋಲು ಹೊಡೆದರು. ನಾಮೆರ ತಂಡದ ಪರವಾಗಿ ಅತಿಥಿ ಆಟಗಾರ ಬಿಪಿನ್ ೨ ಗೋಲು ದಾಖಲಿಸಿದರು. ೨ನೇ ಪಂದ್ಯದಲ್ಲಿ ಚೊಟ್ಟೆಪಂಡ ತಂಡವು ಮಳವಂಡ ತಂಡವನ್ನು ೩-೨ ಗೋಲುಗಳಿಂದ ಸೋಲಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಜೀವನ್ ೨ ಮತ್ತು ಸೋಮಣ್ಣ ಒಂದು ಗೋಲು ಬಾರಿಸಿದರೆ, ಪರಾಜಿತ ತಂಡದ ಪರವಾಗಿ ಅತಿಥಿ ಆಟಗಾರ ಅಖಿಲ್ ೨ ಗೋಲು ದಾಖಲಿಸಿದರು.
೩ನೇ ಪಂದ್ಯದಲ್ಲಿ ಮೇಚಿಯಂಡ ತಂಡವು ಅಮ್ಮೆಕಂಡ ತಂಡವನ್ನು ೫-೨ ಗೋಲುಗಳಿಂದ ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ ಸೂರಜ್ ೩, ಪೃಥ್ವಿ ಮತ್ತು ಅತಿಥಿ ಆಟಗಾರ ಜಗತ್ ತಲಾ ಒಂದು ಬಾರಿಸಿದರೆ, ಪರಾಜಿತ ತಂಡದ ಪರವಾಗಿ ಅತಿಥಿ ಆಟಗಾರ ಮಿಥುನ್ ೨ ಗೋಲು ಬಾರಿಸಿದರು. ದಿನದ ಕೊನೆಯ ಪಂದ್ಯದಲ್ಲಿ ಚಂದೂರ ತಂಡವು ಕಂಜಿತAಡ ತಂಡವನ್ನು ೪-೦ ಗೋಲುಗಳಿಂದ ಸೋಲಿಸಿ ಮುಂದಿನ ಹಂತ ಪ್ರವೇಶಿಸಿತು. ವಿಜೇತ ಚಂದೂರ ತಂಡದ ಪರವಾಗಿ ಸುರೇಶ್ ಗಣಪತಿ ಮತ್ತು ಶ್ಯಾಮ್ ಸೋಮಣ್ಣ ತಲಾ ೨ ಗೋಲು ಬಾರಿಸಿ ತಂಡದ ವಿಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
- ರಫೀಕ್ ತೂಚಮಕೇರಿ