ಶನಿವಾರಸಂತೆ, ನ. ೨೮: ೨೦೨೩ ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಮಹಿಳೆಯರಿಗೆ ಹೆಚ್ಚಿನ ಶಕ್ತಿ ಕೊಡಬೇಕು ಎಂಬ ಉದ್ದೇಶದಿಂದ ಗೃಹಲಕ್ಷಿö್ಮÃ, ಶಕ್ತಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಶುಭೋದಯ ಸಭಾಂಗಣದಲ್ಲಿ ನಡೆದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

ಗೃಹಲಕ್ಷಿö್ಮÃ, ಅನ್ನಭಾಗ್ಯ ಯೋಜನೆ ಸೌಲಭ್ಯ ದೊರೆಯದ ಮಹಿಳೆಯರು ಪಂಚಾಯಿತಿಯಲ್ಲಿ ಸಿಡಿಪಿಒ ಅವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಸಿ ಸೌಲಭ್ಯ ಒದಗಿಸಬೇಕು. ಶನಿವಾರಸಂತೆ ಗ್ರಾಮ ಪಂಚಾಯಿತಿಗಿAತ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೌಲಭ್ಯ ಕಡಿಮೆಯಿದೆ. ಅದಕ್ಕಾಗಿ ಅವಳಿ ಗ್ರಾಮಗಳಂತಿರುವ ಶನಿವಾರಸಂತೆ-ದುAಡಳ್ಳಿ ಗ್ರಾಮಗಳನ್ನು ಸೇರಿಸಿ ಸಾರ್ವಜನಿಕರು ಸಮ್ಮತಿಸಿದಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಸೇರಿಸಿಬಹುದು. ದುಂಡಳ್ಳಿ ಪಂಚಾಯಿತಿಯಲ್ಲಿ ಶುದ್ಧ ನೀರಿನ ಘಟಕಕ್ಕೆ ಆದ್ಯತೆ ನೀಡಬೇಕು. ಕುಡಿಯುವ ನೀರಿನ ಸಮಸ್ಯೆಯನ್ನು ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಂಡಿಸಿ ಬಗೆಹರಿಸಿಕೊಳ್ಳಬಹುದು. ರೂ. ೫೦ ಲಕ್ಷ ಅನುದಾನದಲ್ಲಿ ದುಂಡಳ್ಳಿ ಪಂಚಾಯಿತಿಯಲ್ಲಿ ನೀರಿನ ಸೌಲಭ್ಯ ಇಲ್ಲದ ಗ್ರಾಮದಲ್ಲಿ ಕೆಇಬಿ ಅನುಮೋದನೆ ಪಡೆದು ಕೊಳವೆ ಬಾವಿ ತೆಗೆಸಿ ನೀರಿನ ಸೌಲಭ್ಯ ಒದಗಿಸಲಾಗುವುದು. ರಾಜಕೀಯ ಭಿನ್ನಾಭಿಪ್ರಾಯ ಮರೆತು ಗ್ರಾಮಾಭಿವೃದ್ಧಿಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡುವಂತೆ ಕರೆ ನೀಡಿದರು.

ಪಂಚಾಯಿತಿಯ ಹಿರಿಯ ಸದಸ್ಯ ಡಿ.ಪಿ. ಭೋಜಪ್ಪ ಮಾತನಾಡಿ, ಪಂಚಾಯಿತಿಗೆ ಆದಾಯ ಬರಲೆಂಬ ಉದ್ದೇಶದಿಂದ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ನೂತನ ಕಟ್ಟಡ ನಿರ್ಮಾಣ ಹಾಗೂ ಪಂಚಾಯಿತಿ ಅಭಿವೃದ್ಧಿ ಸಾಧಿಸಲು ಜನಪ್ರತಿನಿಧಿಗಳ ಹಾಗೂ ಸರ್ವ ಸದಸ್ಯರ ಸಹಕಾರ ಅತ್ಯಗತ್ಯ. ಪಂಚಾಯಿತಿಯಲ್ಲಿ ಹಣ ಮತ್ತು ಕಾರ್ಮಿಕರ ಕೊರತೆಯಿದ್ದು ಸರ್ವ ಸದಸ್ಯರು ಕೈ ಜೊಡಿಸಿದರೆ ಮಾತ್ರ ಅಭಿವೃದ್ಧಿ ಕಾರ್ಯಗಳು ಸಾಧ್ಯ ಎಂದರು.

ಪAಚಾಯಿತಿ ವ್ಯಾಪ್ತಿಯ ೨೧ ಗ್ರಾಮಗಳಲ್ಲಿ ವಾಸ್ತವ್ಯದ ಸಮಸ್ಯೆಯಿದ್ದು ಮನೆಗಳ ಪಟ್ಟೆಗಾಗಿ ಅರ್ಜಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ದೇವರಾಜ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರಾದ ಡಿ.ಪಿ. ಭೋಜಪ್ಪ, ಸಿ.ಜೆ. ಗಿರೀಶ್, ದೇವರಾಜ್, ಪೂರ್ಣಿಮಾ ಕಿರಣ್, ಜಾನಕಿ, ಭವಾನಿ, ನಂದಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ, ಸಿಬ್ಬಂದಿ, ಕಂದಾಯ ಪರಿವೀಕ್ಷಕ ಹೇಮಂತ್, ಸಿಬ್ಬಂದಿ ಹೂವಯ್ಯ, ಇತರರು ಉಪಸ್ಥಿತರಿದ್ದರು. ಸದಸ್ಯೆ ಪೂರ್ಣಿಮಾ ಪ್ರಾರ್ಥಿಸಿದರು. ಸದಸ್ಯ ಭೋಜಪ್ಪ ಸ್ವಾಗತಿಸಿ, ಶಿಕ್ಷಕ ಜಯಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.