ಮಡಿಕೇರಿ, ನ. ೨೮: ಕೊಡವಾಮೆರ ಕೊಂಡಾಟ ಸಂಘಟನೆಯು ನಡೆಸುವ ಕೊಡವ ಕುಟುಂಬಗಳ ನಡುವಿನ ಬಾಳೋಪಾಟ್ ಸ್ಪರ್ಧೆ ಮತ್ತು ಅಖಿಲ ಕೊಡವ ಸಮಾಜ ಮಾಜಿ ಅಧ್ಯಕ್ಷ ದಿ. ಮಾತಂಡ ಮೊಣ್ಣಪ್ಪ ಅವರ ನೆನಪಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಮತ್ತು ಬಾಳೋಪಾಟ್ ತಜ್ಞರ ಸಭೆ ತಾ. ೩೦ ರಂದು ಮಡಿಕೇರಿಯ ಬಾಲಭವನದಲ್ಲಿ ನಡೆಯಲಿದೆ.
ಕೊಡವಾಮೆರ ಕೊಂಡಾಟ ಸಂಘಟನೆಯ ಸ್ಥಾಪಕ ಮತ್ತು ಅಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ೧೧.೩೦ಕ್ಕೆ ಪ್ರಾರಂಭವಾಗುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ, ಶಾಸಕ ಮಂಡೆಪAಡ ಸುಜಾ ಕುಶಾಲಪ್ಪ, ಮಾಜಿ ಸಚಿವ ಮೇರಿಯಂಡ ನಾಣಯ್ಯ, ಸ್ಪರ್ಧೆಯ ಬಹುಮಾನ ದಾನಿಗಳಾದ ಸರ್ಕಂಡ ಸೋಮಯ್ಯ, ಶ್ರೀಮತಿ ಮಲ್ಲೇಂಗಡ ಸುಧಾ ಮುತ್ತಣ್ಣ, ಅಂಜಪರವAಡ ರಂಜು ಮುತ್ತಪ್ಪ, ಹಂಚೆಟ್ಟಿರ ಮನು ಮುದ್ದಪ್ಪ ಸೇರಿದಂತೆ ಹಿರಿಯ ಜಾನಪದ ತಜ್ಞರು ಭಾಗವಹಿಸುವರು. ಕೊಡವ ಜನಾಂಗದ ಮೂಲ ಇತಿಹಾಸದ ಆಧಾರವಾಗಿರುವ ಬಾಳೋಪಾಟ್ನ ವಾಸ್ತವತೆಯ ಅರಿವನ್ನ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಸಬೇಕಾದರೆ, ಬಾಳೋ ಪಾಟ್ ಉಳಿಯುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತೀ ಕೊಡವ ಕುಟುಂಬದ ಪ್ರತೀ ಸದಸ್ಯರೂ ಬಾಳೋಪಾಟ್ ಅರಿಯಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಬಾಳೋಪಾಟ್ ಪೈಪೋಟಿ ಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಆಯೋಜನೆ ಮಾಡಲು ಅಂದು ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಬಾಳೋಪಾಟ್ ಅರಿವಿರುವ ಅಭಿಮಾನ ಇರುವ ಎಲ್ಲರನ್ನು ಮುಕ್ತವಾಗಿ ಸ್ವಾಗತಿಸುತ್ತಾ, ಎಲ್ಲಾ ಕೊಡವ ಸಮಾಜ, ಸಂಘಟನೆಗಳು ಮತ್ತು ತಜ್ಞರನ್ನು ಆಹ್ವಾನಿಸಲಾಗಿದೆ. ಮುಕ್ತ ಅಭಿಪ್ರಾಯ ಮಂಡಿಸಲು ಅವಕಾಶವಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆ ಕೋರಿದೆ.