ಕುಶಾಲನಗರ, ನ. ೨೮: ಕುಶಾಲ ನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಅದ್ದೂರಿಯ ಕನ್ನಡ ರಾಜ್ಯೋತ್ಸವ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು.
ಕುಶಾಲನಗರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕನ್ನಡ ಧ್ವಜಾರೋಹಣವನ್ನು ಸಂಘದ ಕಟ್ಟಡ ನಿವೇಶನದ ದಾನಿಗಳಾದ ಜಯಶ್ರೀ ಅವರು ನೆರವೇರಿಸಿದರು.
ಈ ಸಂದರ್ಭ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೆ.ಎಸ್. ನಾಗೇಶ್ ಅವರು ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು ಕನ್ನಡ ಭಾಷೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಆಟೋ ಚಾಲಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಸಮರ್ಪಕ ಸಂಚಾರ ವ್ಯವಸ್ಥೆಗೆ ಆಟೋ ಚಾಲಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ ಎಂದರು. ಧ್ವಜಾರೋಹಣ ನೆರವೇರಿ ಸಿದ ಜಯಶ್ರೀ ನಾಗೇಶ್ ಮತ್ತು ಪತ್ರಕರ್ತ ಹೆಚ್.ಎಂ. ರಘು ಅವರು ಮಾತನಾಡಿದರು. ಸಂಘದ ಸದಸ್ಯರ ತಂಡಗಳಿಗೆ ನಡೆದ ಕಬಡ್ಡಿ, ಹಗ್ಗ ಜಗ್ಗಾಟ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಹಯೋಗ ದೊಂದಿಗೆ ರಕ್ತದಾನ ಶಿಬಿರ, ಅಂಗಾAಗ ನೋಂದಣಿ ಕಾರ್ಯ ಕ್ರಮ, ಅಸಂಕ್ರಾಮಿಕ ರೋಗಗಳ ಪರೀಕ್ಷೆ ಮತ್ತು ವ್ಯಾಸಕ್ವಮಿ ಅರಿವು ಕಾರ್ಯಕ್ರಮ ನಡೆಯಿತು. ರಕ್ತದಾನ ಕೇಂದ್ರದ ಡಾ ಕರುಂಬಯ್ಯ ಮತ್ತು ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಕೆ. ಶಾಂತಿ ಅವರ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ೨೮ ಮಂದಿ ರಕ್ತದಾನದಲ್ಲಿ ಪಾಲ್ಗೊಂಡರು. ೫೦ ಮಂದಿ ಅಂಗಾAಗ ನೋಂದಣಿ ಮಾಡಿದರು.
ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ಕೃಷ್ಣ ದರ್ಶನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉದ್ಯಮಿ ವಿ.ಎನ್. ತೇಜಸ್, ಸಂಘದ ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷ ಗಣೇಶ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಗೌಡ, ನಿರ್ದೇಶಕರುಗಳು, ನಾಗೇಶ್ ಮತ್ತಿತ ರರು ಇದ್ದರು. ಸಂಘದ ಮಾಜಿ ಕಾರ್ಯ ದರ್ಶಿ ಕೆ.ಸಿ. ದಿನೇಶ್ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕನ್ನಡಾಂಬೆಯ ಮೆರವಣಿಗೆ
ಕುಶಾಲನಗರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಎರಡನೇ ದಿನ ಕುಶಾಲ ನಗರ ಪಟ್ಟಣದಲ್ಲಿ ಕನ್ನಡಾಂಬೆಯ ಭವ್ಯವಾದ ಮೆರವಣಿಗೆ ನಡೆಯಿತು.
ಊರಿನ ಪ್ರಮುಖ ಬೀದಿಗಳಲ್ಲಿ ಅಲಂಕಾರಗೊAಡ ಆಟೋ ರಿಕ್ಷಾಗಳು ಹಾಗೂ ಕಲ್ಲಡ್ಕದ ಗೊಂಬೆ ಕುಣಿತದೊಂದಿಗೆ ಡಿಜೆ ಸಂಗೀತ ಸಹಿತ ಮೆರವಣಿಗೆ ನಡೆಯಿತು.
ಮೆರವಣಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್ ಚಾಲನೆ ನೀಡಿದರು. ಕುಶಾಲನಗರ ಪಟ್ಟಣ ಕೊಪ್ಪ ಮುಖ್ಯ ರಸ್ತೆಯಲ್ಲಿ ತೆರಳಿದ ಮೆರವಣಿಗೆ ನಂತರ ವೇದಿಕೆಗೆ ಹಿಂತಿರುಗಿತು. ಈ ಸಂದರ್ಭ ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷರಾದ ಕೃಷ್ಣದರ್ಶನ್, ಮಹಾದೇವ ಗೌಡ, ಸಂತೋಷ್ ಕುಮಾರ್ ಗೌಡ, ಕೆ.ಸಿ. ದಿನೇಶ್, ವಿ.ಎನ್. ತೇಜಸ್ ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಇದ್ದರು.