ಸೋಮವಾರಪೇಟೆ, ನ. ೨೮: ಇಲ್ಲಿನ ಕಕ್ಕೆಹೊಳೆ ಬಳಿಯಿರುವ ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಭಕ್ತಾದಿಗಳ ಸಹಕಾರದಿಂದ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಅನ್ನದಾನ ಸಮಿತಿಗೆ ಅನ್ನದಾನಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ದೇವಾಲಯದ ಆವರಣದಿಂದ ಕಳುಹಿಸಿಕೊಡಲಾಯಿತು.

ಅನ್ನದಾನ ಸಾಮಗ್ರಿಗಳ ವಾಹನಕ್ಕೆ ಅರಶಿನಕುಪ್ಪೆಯ ಶ್ರೀ ಮಂಜುನಾಥಸ್ವಾಮಿ ದೇವಾಲಯದ ಗುರುಗಳಾದ ಶ್ರೀ ರಾಜೇಶ್‌ನಾಥ್ ಗುರೂಜಿ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಮಣಿಕಂಠನ್ ನಂಬೂದರಿ, ಮುತ್ತಪ್ಪ ಸ್ವಾಮಿ ದೇವಾಲಯದ ಮಡಯನ್ ಸುಧೀಶ್, ವ್ಯವಸ್ಥಾಪಕ ಚರಣ್, ವಕೀಲ ಗಿರೀಶ್ ಮತ್ತಿತರರು ಇದ್ದರು.