ಮಡಿಕೇರಿ, ನ. ೨೮: ವೀರಾಜಪೇಟೆ - ಸಿದ್ದಾಪುರ ರಸ್ತೆಯಲ್ಲಿ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿದ್ದಲ್ಲದೇ, ಸ್ಟೇರಿಂಗ್‌ನಿAದ ಎರಡು ಕೈಗಳನ್ನು ತೆಗೆದು ಮೊಣಕಾಲಿನಿಂದ ಚಾಲನೆ ಮಾಡಿ ಫೇಸ್‌ಬುಕ್ ಖಾತೆಗೆ ಹಾಕಿದ್ದ ಬೆಟ್ಟಗೇರಿ ನಿವಾಸಿ ಚೋವಂಡ ಲೋಕೇಶ್ ಅಪ್ಪಣ್ಣ ಎಂಬಾನ ಮೇಲೆ ವೀರಾಜಪೇಟೆ ಗ್ರಾಮಾಂತರ ಪೊಲೀ ಸರು ಪ್ರಕರಣ ದಾಖಲಿಸಿದ್ದಾರೆ.

ಈ ರೀತಿಯ ವಾಹನ ಚಾಲನೆಯಿಂದ ಅಪಘಾತಗಳು ಸಂಭವಿಸಿ ವಾಹನ ಚಾಲಕನಿಗೂ ರಸ್ತೆಯಲ್ಲಿ ಸಂಚರಿಸುವವರಿಗೂ ತೊಂದರೆಗಳಾಗುವ ಸಾಧ್ಯತೆ ಗಳಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಕೃತ್ಯಕ್ಕೆ ಬಳಿಸಿದ ಕಾರನ್ನು ಜಪ್ತಿ ಮಾಡಲು ಕ್ರಮ ಕೈಗೊಳ್ಳುವುದರೊಂದಿಗೆ, ಆತನ ವಾಹನ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಸಂಬAಧಿಸಿದ ಇಲಾಖೆಗೆ ಶಿಫಾರಸ್ಸು ಮಾಡುವುದಾಗಿ ಪೊಲೀಸ್ ಪ್ರಕಟಣೆ ತಿಳಿಸಿದೆ.