ವೀರಾಜಪೇಟೆ, ನ. ೨೫: ಹಿಂದಿನ ಶಾಸಕರು ತಂದ ಅನುದಾನಕ್ಕೆ ಇಂದಿನ ಶಾಸಕರು ಭೂಮಿ ಪೂಜೆ ಮಾಡುತ್ತಿದ್ದಾರೆ. ರಾಜ್ಯ ಸರಕಾರದ ಕೊಡುಗೆ ಶೂನ್ಯ. ಮುಂದಿನ ವರ್ಷ ಕೊಡಗಿನಲ್ಲಿ ಅಭಿವೃದ್ಧಿ ಮರೀಚಿಕೆಯಾಗಲಿದೆ ಎಂದು ಕೊಡಗು- ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದರು.

ಕೇಂದ್ರ ಸರಕಾರದ ವಿಕಸಿತ ಭಾರತ ಸಂಕಲ್ಪಯಾತ್ರೆ ಅಡಿಯಲ್ಲಿ ವೀರಾಜಪೇಟೆ ಪುರಭವನದಲ್ಲಿ ಆಯೋಜಿಸಿದ್ದ ಉಜ್ವಲ ಯೋಜನೆ ಯಡಿ ಅಡುಗೆ ಅನಿಲ ವಿತರಣ ಸಮಾರಂಭದಲ್ಲಿ ಮಾತನಾಡಿ ಜಿಲ್ಲೆಯಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದ್ದರೆ ಅದು ಹಿಂದಿನ ಶಾಸಕರು ತಂದ ಅನುದಾನಗಳಾಗಿವೆ ಎಂಬುದು ಪ್ರಮುಖ ಅಂಶ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ದಲ್ಲಿ ಸಬ್‌ಕಾ ಸಾತ್ ಸಬ್‌ಕ ವಿಕಾಸ್ ಎಂಬ ಧ್ಯೇಯವಾಕ್ಯದೊಂದಿಗೆ ಜಾತಿ, ಧರ್ಮಗಳಿಲ್ಲದೆ ಎಲ್ಲರಿಗೂ ಉತ್ತಮ ಸವ ಲತ್ತುಗಳನ್ನು ನೀಡಲಾಗು ತ್ತಿದೆ. ತಮ್ಮ ಮೊದಲ ಸ್ವಾತಂತ್ರೊö್ಯÃತ್ಸವದ ಭಾಷಣದಲ್ಲಿ ಶೌಚಾ ಲಯಗಳ ನಿರ್ಮಾಣದ ಘೋಷಣೆ ಮಾಡಿದರು. ಜನಧನ್, ಮುದ್ರಾ, ಉಜ್ವಲ ಯೋಜನೆ ಸೇರಿದಂತೆ ಹತ್ತು ಹಲವು ಜನಪರ ಯೋಜನೆ ಜಾರಿಗೆ ತಂದಿದ್ದಾರೆ. ಇಂದಿನ ಆಧುನಿಕ ಯುಗಕ್ಕೆ ಹೊಂದಿ ಕೊಂಡು ರೈತರ ಬೆಳೆಗೆ ಔಷಧ ಸಿಂಪ ಡಿಸುವಾಗ ಅವರ ಜೀವಕ್ಕೆ ಹಾನಿ ಯಾಗದಂತೆ ಕೃಷಿ ಕ್ಷೇತ್ರದಲ್ಲಿ ದ್ರೋಣ್ ವ್ಯವಸ್ಥೆಯನ್ನು ತರಲಾಗಿದೆ. ಇದರಿಂದ ಶುಂಠಿ, ಅಡಿಕೆ, ಕಾಫಿ ತೋಟ ಸೇರಿದಂತೆ ಎಲ್ಲಾ ಕಡೆ ಸಿಂಪಡಣೆ ಸುಲಭವಾಗಲಿದೆ ಎಂದರು.

೪೦ ಜನ ಫಲಾನುಭವಿಗಳಿಗೆ ಸಂಸದರು ಅಡುಗೆ ಅನಿಲವನ್ನು ಈ ಸಂದರ್ಭ ವಿತರಿಸಿದರು ಹಾಗೂ ಏಕತ ಪ್ರತಿಜ್ಞಾ ವಿಧಿಯನ್ನು ಸಹ ಬೋಧಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯ್ಡು, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರಭಾಕರ್, ಮಡಿಕೇರಿ ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸುರೇಶ್, ಹೆಚ್.ಪಿ.ಸಿ.ಎಲ್.ನ ಮಾರಾಟ ಅಧಿಕಾರಿ ರಾಹುಲ್, ಬಿ.ಪಿ.ಸಿ.ಎಲ್. ಮಾರಾಟ ಅಧಿಕಾರಿ ನಿತೀನ್ ಲೆವೆಸ್, ಜಿಲ್ಲಾ ನರ್ಬಾಡ್ ಅಧಿಕಾರಿ ರಮೇಶ್ ಬಾಬು, ತಾಲೂಕು ನಾಗರಿಕ ಅಹಾರ ಸರಬರಾಜು ಇಲಾಖೆಯ ಅಧಿಕಾರಿ ಸೀನಾಕುಮಾರಿ, ಆರ್‌ಸಿಎಫ್ ಅಧಿಕಾರಿ ಅರುಣ್‌ಕು ಮಾರ್, ಪುರಸಭಾ ಸದಸ್ಯೆ ಜೂನ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ಕಿರುಕುಳ

ಬಿಜೆಪಿ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡಿದರೆ ನಾವು ಪೊಲೀಸ್ ಠಾಣೆಗೆ ನುಗ್ಗಬೇಕಾದಿತು ಎಂಬ ಎಚ್ಚರಿಕೆಯನ್ನು ಮೈಸೂರು-ಕೊಡಗು ಲೋಕಸಭಾ ಸದಸ್ಯ ಪ್ರತಾಪ್‌ಸಿಂಹ ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ಏನೋ ಬರೆದರು ಎಂದು ನಮ್ಮ ಕಾರ್ಯಕರ್ತರನ್ನು ವಿನಾಕಾರಣ ಪೊಲೀಸ್ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಬೆದರಿಸುವ ಕೆಲಸ ಕೊಡಗಿನಲ್ಲಿ ನಡೆಯುತ್ತಿದೆ. ಈ ವಿಚಾರದಲ್ಲಿ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ರೀತಿ ಆಗದಂತೆ ನೋಡಿಕೊಳ್ಳಲು ತಿಳಿಸಿದ್ದೇನೆ. ಪೊಲೀಸರು ಕಾಂಗ್ರೆಸ್ ಹಾಗೂ ರಾಜ್ಯ ಸರಕಾರದ ಏಜೆಂಟರAತೆ ವರ್ತಿಸುವುದು ಸರಿಯಲ್ಲ. ಕಾನೂನು ಮೀರಿ ನಡೆಯವ ಯಾವ ಅಧಿಕಾರ ಪೊಲೀಸರಿಗೆ ಇಲ್ಲ. ಜಾಲತಾಣದಲ್ಲಿ ಸೂಕ್ಷö್ಮ ವಿಚಾರಗಳಿದ್ದು ವ್ಯವಸ್ಥೆಗೆ ಧಕ್ಕೆ ತರುವಂತಾಗಿದ್ದರೆ ಪೊಲೀಸರು ದೂರು ಸ್ವೀಕರಿಸಿ ಕೂಲಂಕುಶ ಪರಿಶೀಲನೆ ನಡೆಸಬೇಕು. ನಮ್ಮ ಕಾರ್ಯಕರ್ತರಿಗೆ ವಿನಾ ಕಾರಣ ತೊಂದರೆ ನೀಡುವುದನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿದರು.