ಮಡಿಕೇರಿ, ನ. ೨೫: ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ನವೆಂಬರ್ ೨೭ ರಂದು ಸಂಜೆ ೪ ಗಂಟೆಯಿAದ “ಸಾಮೂಹಿಕ ಸತ್ಯನಾರಾಯಣ” ಪೂಜೆ ನಡೆಯಲಿದೆ. ಆದ್ದರಿಂದ ಸಾರ್ವಜನಿಕ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ “ಸಾಮೂಹಿಕ ಸತ್ಯನಾರಾಯಣ” ಪೂಜೆಯಲ್ಲಿ ಭಾಗವಹಿಸಿ, ಪೂಜೆಯನ್ನು ಯಶಸ್ವಿಗೊಳಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯವರಾದ ಚಂದ್ರಶೇಖರ್ ಎನ್.ಜಿ ಅವರು ಕೋರಿದ್ದಾರೆ.