ಶನಿವಾರಸಂತೆ, ನ. ೨೫: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಿಲುವಾಗಿಲು-ಬೆಸೂರು ಗ್ರಾಮಗಳ ಶ್ರೀಬಾಲ ತ್ರಿಪುರ ಸುಂದರಿ ಅಮ್ಮನವರ ೧೧ನೇ ವರ್ಷದ ವಾರ್ಷಿಕ ಮಹೋತ್ಸವ ತಾ.೨೭ ರಂದು ಜರುಗಲಿದೆ.

ಅಂದು ಬೆಳಿಗ್ಗೆ ೬ ಗಂಟೆಗೆ ನಿರ್ಮಲ ದರ್ಶನ, ೮ ಗಂಟೆಗೆ ಮಂಗಳಾರತಿ, ೧೦ ಗಂಟೆಗೆ ಗಣ ಹೋಮ, ಮಧ್ಯಾಹ್ನ ೧ ಗಂಟೆಗೆ ಪ್ರಸಾದ ವಿನಿಯೋಗ, ರಾತ್ರಿ ೭ ಗಂಟೆಗೆ ದೀಪಾರಾಧನೆ, ೭-೩೦ ಕ್ಕೆ ಮಹಾಮಂಗಳಾರತಿ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ