ಕೊಡಗಿನಲ್ಲಿ ಎಲ್ಲಿ ನೋಡಿದರು ಹುತ್ತರಿ ಹಬ್ಬದ ಸಂಭ್ರಮ. ಧಾನ್ಯ ಲಕ್ಷಿö್ಮಯನ್ನು ಮನೆತುಂಬಿಸಿಕೊಳ್ಳುವ ಹಬ್ಬ. ಮಕ್ಕಳಿಗೆ ಪಟಾಕಿ ಸಿಡಿಸಲು ಕಾತುರ. ಕೊಡಗಿನಾದ್ಯಂತ ಈ ಹಬ್ಬವನ್ನು ಏಕಕಾಲಕ್ಕೆ ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯಂದು ಆಚರಿಸುವರು. ಹುತ್ತರಿ ಎಂದರೆ ಕೊಡವ ಭಾಷೆಯ ಪುತ್ತರಿ ಪುದಿಯ + ಅರಿ = ಪುತ್ತರಿ ಹೊಸ ಅಕ್ಕಿ.

ಹುತ್ತರಿ ಹಬ್ಬ ಕೊಡವರ ಸಂಸ್ಕೃತಿ-ಸAಪ್ರದಾಯದ ಹಬ್ಬ. ಅಂದು ಹೊರಗಡೆ ನೆಲೆಸಿರುವ ಕೊಡವ ಜನಾಂಗದವರೆಲ್ಲ ಹಬ್ಬಕ್ಕೆಂದು ಒಟ್ಟಾಗಿ ಸೇರಿ ಹಬ್ಬ ಆಚರಿಸುವರು. ಕೊಡಗಿನಲ್ಲಿರುವ ಎಲ್ಲರೂ ಹುತ್ತರಿ ಹಬ್ಬ ಆಚರಿಸುವರು. ಹಬ್ಬದ ಆಚರಣೆಯೂ ವಿಶಿಷ್ಟ ಗದ್ದೆಯಲ್ಲಿ ಉತ್ತು - ಬಿತ್ತಿ ಬೆಳೆಸಿದ ಪೈರು ಹುಲುಸಾಗಿ ಬೆಳೆದು ಬಂದಾಗ ಭತ್ತದ ತೆನೆಯನ್ನು ಆರಾಧಿಸಿ ಮನೆ ತುಂಬಿಸಿಕೊಳ್ಳುವರು.

ಪ್ರಕೃತಿಗೆ ವಿಶೇಷ ಸ್ಥಾನ ನೀಡುವ ಕೊಡಗಿನಲ್ಲಿ ಅವರ ಆಚಾರ, ವಿಚಾರ, ಸಂಪ್ರದಾಯ, ಉಡುಗೆ, ತೊಡುಗೆ, ಊಟ, ಉಪಚಾರ, ಅತಿಥಿ ಸತ್ಕಾರದಲ್ಲಿ ವಿಶೇಷವಾದ ಅವಿನಾಭಾವ ಸಂಬAಧವಿದೆ. ಹುತ್ತರಿ ಹಬ್ಬದಲ್ಲಿ ಭೂ ಮಾತೆಗೆ, ಅನ್ನ ನೀಡುವ ಧಾನ್ಯಲಕ್ಷಿö್ಮಗೆ, ಭಕ್ತಿಯಿಂದ ಕೃತಜ್ಞತೆ ಸಲ್ಲಿಸುವುದೇ ಈ ಹಬ್ಬದ ಆಚರಣೆ. ಹುತ್ತರಿ ಹಬ್ಬದಲ್ಲಿ ಮನೆಗೆ ಸುಣ್ಣ-ಬಣ್ಣ ಬಳಿದು ಅಂಗಳ ಸ್ವಚ್ಛಗೊಳಿಸಿ ಮನೆಯ ಮುಂಬಾಗಿಲಿಗೆ ತಳಿರು-ತೋರಣ ಕಟ್ಟಿ ಮನೆ ಜನರೆಲ್ಲ ಹೊಸ ಬಟ್ಟೆ ತೊಟ್ಟು, ಹಬ್ಬದ ಸಿದ್ಧತೆ ಮಾಡಿಕೊಳ್ಳುವರು. ಹಬ್ಬದಲ್ಲಿ ಅಕ್ಕಿ ಹಿಟ್ಟು ಕಲೆಸಿ ಚಿಕ್ಕ ಕಾಡು ಸೌತೆಯನ್ನು ವೃತ್ತಾಕಾರದಲ್ಲಿ ಮುರಿದು ಅದನ್ನು ಅಕ್ಕಿ ಹಿಟ್ಟಿನಲ್ಲಿ ಅದ್ದಿ ಪುತ್ತರಿ ಕುರಿಪೊ ಎಂದು ಹೇಳಿದಂತೆ ಮನೆಯ ಕಿಟಕಿ, ಬಾಗಿಲು, ಸೇರು, ಕುಡಿಕೆ, ಕುಡುಗೋಲಿಗೆ ಮುದ್ರೆಯನ್ನು ಹಾಕುವರು.

ಕದಿರು ಕುಯ್ಯಲು ಹೋಗುವಾಗ ಮನೆಯ ಹಿರಿಯರು ಕುಪ್ಪಸ ದಟ್ಟಿ ಧರಿಸಿ ಹೊರಡುವರು. ಬಾಕಿ ಉಳಿದವರು ಚಾಪೆ, ಕುಕ್ಕೆ, ಕೋವಿ, ಕತ್ತಿ ಹಿಡಿದು ಹೊರಡುವರು. ಕದಿರಿಗೆ ಪೂಜೆ, ನೈವೇದ್ಯ ಸಲ್ಲಿಸಿ, ಬೆಳೆ ಕೊಯ್ಯುವರು. ಗುಂಡು, ಸಿಡಿಮದ್ದು, ಪಟಾಕಿಗಳ ಕರ್ಕಶ ಶಬ್ದ, ಓಲಗದೊಂದಿಗೆ ಕದಿರು ಪೂಜೆ ಮಾಡಿ ‘ಪೊಲಿ... ಪೊಲಿ... ದೇವಾ...’ ಎಂದು ಮನೆಯಲ್ಲಿ ಮತ್ತೆöÊದೆ ಕದಿರು ತಂದವರ ಪಾದಕ್ಕೆ ನೀರು ಹಾಕಿ ಕುಡಿಯಲು ಹಾಲು ಕೊಟ್ಟು ಬರಮಾಡಿಕೊಳ್ಳುವರು. ಮನೆಯಲ್ಲಿ ದೇವರೆದುರು ಚಾಪೆ ಹಾಸಿ ತಳಿಯ ತಕ್ಕಿ ಇಟ್ಟಿರುವರು. ತಂದ ಕದಿರನ್ನು ಚಾಪೆ ಮೇಲಿರಿಸಿ ಮರದ ಎಲೆಗಳನ್ನು ಭತ್ತದ ತೆನೆಯನ್ನು ನಾರಿನಿಂದ ಕಟ್ಟಿ ನೆರೆಕಟ್ಟುವರು. ದೇವರಿಗೆ ನೈವೇದ್ಯವಿಟ್ಟು ಹೊಸ ಅಕ್ಕಿ ಸೇರಿಸಿ ತಂಬಿಟ್ಟು ಪಾಯಸ ಮಾಡಿ ತಿನ್ನುವರು. ಹುತ್ತರಿ ಗೆಣಸನ್ನು ಹಾಲು - ಜೇನಿನೊಡನೆ ಸವಿಯುವರು.

ಹಬ್ಬದ ನಂತರ ೩ ದಿನಗಳಲ್ಲಿ ಹುತ್ತರಿ ಮೈದಾನದಲ್ಲಿ (ಕೋಲ್‌ಮಂದ್) ಸಾಂಪ್ರದಾಯಿಕ ಕೊಡವ ಉಡುಪಿನಲ್ಲಿ ಸುಗ್ಗಿ ಕುಣಿತ, ಕೋಲಾಟ (ಇದು ಪ್ರಸಿದ್ಧ ಜನಪದ ನೃತ್ಯ) ಆಡುವರು. ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದು.

- ಚೊಟ್ಟೆಯಂಡಮಾಡ ಲಲಿತಾ ಕಾರ್ಯಪ್ಪ, ಟಿ. ಶೆಟ್ಟಿಗೇರಿ.