ಕರಿಕೆ, ನ. ೨೬ : ಇಲ್ಲಿಗೆ ಸಮೀಪದ ಚೇರಂಬಾಣೆ ಕೊಳಗದಾಳು ಪಾಕ ಎಂಬಲ್ಲಿ ಕಾಡಾನೆ ಭತ್ತದ ಗದ್ದೆಗೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ ನಾಶ ಪಡಿಸಿದೆ

ಇಲ್ಲಿನ ನಿವಾಸಿ ಎಂ.ಎಸ್.ಜಯಚAದ್ರ ಎಂಬವರ ಗದ್ದೆಗೆ ದಾಳಿ ಮಾಡಿದ ಕಾಡಾನೆ ಸುಮಾರು ಒಂದು ಎಕರೆಯಷ್ಟು ಕಟಾವಿಗೆ ಬಂದ ಭತ್ತದ ಬೆಳೆಗಳನ್ನು ತಿಂದು, ತುಳಿದು ನಾಶ ಪಡಿಸಿದ್ದು, ಅರಣ್ಯ ಇಲಾಖೆ ಕೂಡಲೇ ಪರಿಹಾರ ವಿತರಿಸಲು ಕ್ರಮ ವಹಿಸಬೇಕು. ಅಲ್ಲದೆ ಕಾಡನೆಯನ್ನು ಕಾಡಿಗಟ್ಟಲು ತುರ್ತು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.