ಕಾಫಿ ನಾಡಾದ ಕೊಡಗಿನಲ್ಲಿ ಸಾಂಪ್ರದಾಯಿಕ ಹಬ್ಬದ ಆಚರಣೆಯೊಂದಿಗೆ ಪೊಲಿ... ಪೊಲಿಯೇ... ಬಾ... ಎಂದು ಧಾನ್ಯಲಕ್ಷಿö್ಮಯನ್ನು ಮನೆ ಮನೆಗೆ ತುಂಬಿಕೊಳ್ಳುವ ದೊಡ್ಡ ಹಬ್ಬವೇ ಪುತ್ತರಿ ನಮ್ಮೆ (ಹಬ್ಬ). ವರ್ಷದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳ ರೋಹಿಣಿ ನಕ್ಷತ್ರ ಬರುವ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತಿರುವ ಈ ಪುತ್ತರಿ ಹಬ್ಬಕ್ಕೆ ತನ್ನದೇ ಆದ ವಿಶೇಷತೆಯಿದೆ. “ಪುತ್ತರಿ” ಎಂದರೆ ಕೊಡವ ಭಾಷೆಯ “ಪುದಿಯ”ಎಂದರೆ ಹೊಸತು, “ಅರಿ” ಎಂದರೆ ಅಕ್ಕಿ ಎಂದೂ, ಹೊಸ ಅಕ್ಕಿಯನ್ನು ಮನೆ ಮನೆಗಳಿಗೆ ತರುವ ಹಬ್ಬವೇ ಈ ಪುತ್ತರಿ ನಮ್ಮೆಯ ವಿಶೇಷ.

ವರ್ಷಂಪ್ರತಿ ಕೊಡಗಿನ ಕುಲದೇವರಾದ ಶ್ರೀ ಪಾಡಿ ಇಗ್ಗುತಪ್ಪ ದೇವ ನೆಲೆಯಲ್ಲಿ ಪಂಚಾAಗದ ಆಧಾರದ ಮೇಲೆ ಅಮ್ಮಂಗೇರಿಯ ಜೋತಿಷ್ಯರು ಹಾಗೂ ತಕ್ಕಮುಖ್ಯಸ್ಥರು ಸೇರಿ ಪುತ್ತರಿ ಆಚರಣೆಯ ದಿನವನ್ನು ಗುರುತಿಸಿದ ದಿನದಂದೇ ಕೊಡಗಿನಾದ್ಯಂತ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆರಿಸಲಾಗುತ್ತದೆ.

ಈ ವರ್ಷ ನವೆಂಬರ್ ೨೭ ರಂದು ರೋಹಿಣಿ ನಕ್ಷತ್ರ ಬರುವುದರಿಂದ ಅಂದು ಸಂಜೆ ಕೊಡಗಿನಲ್ಲಿ ಆಯಾಯ ಕುಟುಂಬದವರೆಲ್ಲ ಸಾಂಪ್ರದಾಯಿಕ ಉಡುಪಿನೊಂದಿಗೆ ಐನ್‌ಮನೆಯಲ್ಲಿ ಸೇರುವುದು. ನೆಲ್ಲಕ್ಕಿ ನಡುಬಾಡೆಯಲ್ಲಿರುವ ದೇವರ ದೀಪಕ್ಕೆ ನಮಸ್ಕರಿಸಿ ಕುಟುಂಬದ ಪುರುಷರು, ಮಹಿಳೆಯರು, ಮಕ್ಕಳು ಹಿರಿಯರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗುವರು.

ಸಂಪ್ರದಾಯದAತೆ ಕೊಡಗಿನ ಶ್ರೀ ಇಗ್ಗುತಪ್ಪ ದೇವನೆಲೆಯಲ್ಲಿ ನೆರೆ ಕಟ್ಟುವ ಹಾಗೂ ಗದ್ದೆಗಳಲ್ಲಿ ಕದಿರು ತೆಗೆದ ನಂತರ ರಾತ್ರಿ ೭.೪೫ಕ್ಕೆ ಐನ್‌ಮನೆಯ ಮುಂದಿನ ಹಟ್ಟಿಯಲ್ಲಿ ಕುಟುಂಬದ ಪುರುಷರೆಲ್ಲ ಪೊಲಿ... ಪೊಲಿಯೇ... ಬಾ... ಇಗ್ಗುತಪ್ಪಂಡ ಭಂಡಾರಕೆಟ್ಟ್ ಪೊಲಿಯೇ ಬಾ... ಬೈತೂರಪ್ಪಂಡ ಭಂಡಾರಕೆಟ್ಟ್ ಪೊಲಿಯೇ ಬಾ... ಕಾವೇರಮ್ಮೆರ ಭಂಡಾರಕೆಟ್ಟ್ ಪೊಲಿಯೇ ಬಾ... ಎಂದು ದೇವರನ್ನು ಕರೆಯುತ್ತ ಮರದ ಮೂರು ತರಹದ ಎಲೆ ಹಾಗೂ ಒಂದು ವಿಶೇಷ ತರನಾದ ಬಳ್ಳಿಯನ್ನಿಟ್ಟು ನಾರಿನ ಬಳ್ಳಿಯಲ್ಲಿ ನೆರೆ ಕಟ್ಟುವುದೇ ಹಬ್ಬದ ಸಂಪ್ರದಾಯ.

ಫಲಹಾರದ ಜೊತೆಗೆ ಬೇಯಿಸಿದ ಪುತ್ತರಿ ಗೆಣಸನ್ನು ಸವಿದು ದೇವರ ನೆಲೆಯಲ್ಲಿ ಪುತ್ತರಿ ನಮ್ಮೆ ಅಂಗವಾಗಿ ವರ್ಷದ ಧಾನ್ಯವನ್ನು ತರಲು ಭತ್ತದ ಗದ್ದೆಗೆ ಕದಿರು ತೆಗೆಯಲು ಹೋಗುವ ಬಗ್ಗೆ ಹಿರಿಯರು ದೇವರ ನೆಲೆಯಲ್ಲಿ ಬೇಡಿಕೊಳ್ಳುವರು. ದುಡಿಕೊಟ್ಟ್ ಹಾಡಿನೊಂದಿಗೆ ತೆರಳುವಾಗ ಮಹಿಳೆಯೊಬ್ಬಳು ಮುಂದೆ ದೇವರ ದೀಪವನ್ನು ಹಿಡಿದು ತೆರಳಿದರೆ, ಬಿದಿರಿನ ಕುತ್ತಿಯನ್ನು ಹೆಗಲ ಮೇಲೆ ಹಿಡಿದ ಬಿಳಿಯ ಕುಪ್ಪಸ ತೊಟ್ಟ ವ್ಯಕ್ತಿ ದುಡಿಕೊಟ್ಟ್ ಹಾಡಿನ ಜೊತೆ ಸಂಪ್ರದಾಯದ ವಾಲಗ(ವಾದ್ಯ)ದೊಂದಿಗೆ ಕಲ್ಲೋಣಿ(ಕಲ್ಲಾಸಿನದಾರಿ)ಯಲ್ಲಿ ಗದ್ದೆಗೆ ತೆರಳಿ ಗಾಳಿಗೆ ಗುಂಡು ಹಾರಿಸಿ ೮.೪೫ಕ್ಕೆ ಸರಿಯಾಗಿ ಗದ್ದೆಯಲ್ಲಿ ಬೆಳೆದ ಭತ್ತದ ಕದಿರನ್ನು ಕುಯಿದು ಎಲ್ಲರಿಗೂ ನೀಡಿ ಪೊಲಿ... ಪೊಲಿಯೇ... ಬಾ... ಇಗ್ಗುತಪ್ಪಂಡ ಭಂಡಾರಕೆಟ್ಟ್ ಪೊಲಿಯೇ ಬಾ... ಬೈತೂರಪ್ಪಂಡ ಭಂಡಾಕೆಟ್ಟ್ ಪೊಲಿಯೇ... ಬಾ.. ಕಾವೇರಮ್ಮೆರ ಭಂಡಾರ ಕೆಟ್ಟ್ ಪೊಲಿಯೇ... ಬಾ... ಎಂದು ದೇವರನ್ನು ನೆನೆಯುತ್ತಾ ದುಡಿಕೊಟ್ಟ್ ಹಾಡಿನೊಂದಿಗೆ ಐನ್‌ಮನೆಗೆ ತೆರಳುವರು. ಮಹಿಳೆಯೊಬ್ಬಳು ಅಕ್ಕಿ ಹಾಕಿ ಕುತ್ತಿಯಲ್ಲಿ ಭತ್ತದ ತೆನೆಯೊಂದಿಗೆ ತೆರಳಿದ ವ್ಯಕ್ತಿಯ ಕಾಲಿಗೆ ನೀರು ಹಾಕಿ ತೊಳೆದು ಹಾಲು ಕುಡಿಸಿ ಐನ್‌ಮನೆಗೆ ಬರಮಾಡಿಸಿಕೊಳ್ಳುವರು.

ದೇವರ ನೆಲೆಗೆ ನಮಸ್ಕರಿಸಿ ಕುತ್ತಿಯನ್ನು ಒಪ್ಪಿಸುವರು. ನಂತರ ಕನ್ನಿ ಕೋಂಬರೆಯಲ್ಲಿ ಹಬ್ಬದ ಹಲವು ವಿಧಿವಿಧಾನವನ್ನು ಮುಗಿಸಿ ೯.೪೫ಕ್ಕೆ ಕುಟುಂಬದರೆಲ್ಲ ಸೇರಿ ವಿಶೇಷ ಭೋಜನವನ್ನು ಮಾಡಿ ಮನೆಗಳಿಗೆ ತೆರಳಿ ಪ್ರತೀ ಕದಿರನ್ನು ನೆರೆಗೆ ಸಿಕ್ಕಿಸಿ ಕೈಮಡ, ದೇವರ ನೆಲೆಯಾದ ನೆಲ್ಲಕ್ಕಿ ನಡು ಬಾಡೆಗೆ, ಮನೆಯ ಮುಂದಿನ ಕನ್ನಿಕಂಬಕ್ಕೆ, ಅಂದು ತಯಾರಿಸಿದ ಪಾಯಸದ ಪಾತ್ರೆಗೆ ಹಾಗೂ ಮನೆಯ ಹಲವು ಭಾಗಗಳಿಗೆಲ್ಲ ಕಟ್ಟುವರು.

ದಕ್ಷಿಣ ಕೊಡಗಿನ ಕೆಲವೆಡೆ ಪುರಾತನ ಸಂಪ್ರದಾಯದAತೆ ಬೆಳಿಗ್ಗೆ ಹಾಗೂ ಕದಿರು ತೆಗೆಯುವ ಸಂಪ್ರದಾಯವಿದ್ದು ಅದರದೇ ಪುರಾತನ ಕಥೆಯೇ ಇದೆ. ಹಬ್ಬದ ಅಂಗವಾಗಿ ಅಕ್ಕಿಯನ್ನು ಹುರಿದು ಪುಡಿಮಾಡಿ ತಯಾರಿಸಿದ ವಿಶೇಷ ಖಾದ್ಯ ಅಡಿಕೆಹಿಟ್ಟು ಹಾಗೂ ಬಾಳೆ ಹಣ್ಣಿನ ತಂಬಿಟ್ಟನ್ನು ಮಾಡಿ ತಾವೂ ಸವಿಯುವುದ ಜೊತೆಗೆ ಮನೆಗಳಿಗೆ ಹಬ್ಬ ದಿನದಂದು ಬರುವವರಿಗೆಲ್ಲರಿಗು ನೀಡಿ ಸತ್ಕರಿಸುವರು.

ಮಾರನೆಯ ದಿನದಿಂದ ಕೆಲವೆಡೆ ಊರಿನ ಹಲವು ಕುಟುಂಬಗಳು ಸೇರಿ ಪುತ್ತರಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ಪುತ್ತರಿ ಹಾಡು, ಊರಿನವರೆಲ್ಲ ಸೇರಿ ನಿಗದಿತ ದಿನದಂದು ಆಯಾಯ ಕುಟುಂಬದ ಐನ್‌ಮನೆಗಳಲ್ಲಿ ಮನೆಪಾಟ್ ಏರ್ಪಡಿಸುವರು. ಕೆಲವು ದಿನದ ನಂತರ ಊರ್ ಮಂದಿನಲ್ಲಿ ಊರಿನವರೆಲ್ಲ ಸೇರಿ ಊರ್ರೊಮೆಯನ್ನು ಏರ್ಪಡಿಸಿ ಹಿರಿಯರು ದೇವನೆಲೆಯಲ್ಲಿ ವಿಶೇಷ ಭೋಜನವನ್ನಿಟ್ಟು ದೇವರಲ್ಲಿ ಬೇಡಿಕೊಳ್ಳುವರು. ಊರಿನ ಪುರುಷರು, ಮಹಿಳೆಯರು, ಮಕ್ಕಳೆಲ್ಲ ಊರುಮಂದ್‌ನಲ್ಲಿ ಸೇರಿ ಸುತ್ತಲೂ ಕೂತು ವಿಶೇಷ ಭೋಜನವನ್ನು ಸವಿಯುವರು. ನಂತರದ ದಿನಗಳಲ್ಲಿ ಸುತ್ತಲಿನ ನಾಡ್‌ಮಂದ್‌ನಲ್ಲಿ ಸೇರಿ ವಿವಿಧ ಸಂಪ್ರದಾಯದೊAದಿಗೆ ಕೋಲಾಟ್, ಬೊಳಕಾಟ್ ಪ್ರದರ್ಶನ ನಡೆಯುವುದು. ‘ಬಪ್ಪಕ ಪುತ್ತರಿ ಬಣ್ಣತೇ ಬಾತೋ... ಪೋಪಕ ಪುತ್ತರಿ ಎಣ್ಣತೇ ಪೊಚೋ... ಪೊಯಿಲೇ... ಪೊಯಿಲೇ...’ ಎಂದು ಹಬ್ಬದ ಸಂಭ್ರಮದ ನಡುವೆ ಹಬ್ಬ ಹೇಳದೇ ಹೋಯಿತೆಂದು ಜಾನಪದ ಹಾಡಿನಲ್ಲಿ ಹೇಳುತ್ತಾ ಕೋಲು ಹೊಡೆದು ದೇವರ ನೆಲೆಯಲ್ಲಿ ಕೋಲು ಒಪ್ಪಿಸಿ ಹಬ್ಬಕ್ಕೆ ಕೊನೆ ಹಾಡುವರು.

- ಪುತ್ತರಿರ ಕರುಣ್ ಕಾಳಯ್ಯ, ಚೆಟ್ಟಳ್ಳಿ