ಸಿದ್ದಾಪುರ, ನ. ೨೬: ಕೋಳಿ ಗೂಡಿಗೆ ಬಂದ ನಾಗರಹಾವೊಂದು ನಾಲ್ಕು ಮೊಟ್ಟೆಗಳನ್ನು ನುಂಗಿ ಕೋಳಿಯನ್ನು ಬಲಿ ತೆಗೆದುಕೊಂಡ ಘಟನೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲಾಪುರ ಗ್ರಾಮದ ಕಾಫಿ ತೋಟವೊಂದರ ಲೈನ್ ಮನೆಯಲ್ಲಿ ನಡೆದಿದೆ.
ಮೊಟ್ಟೆಯನ್ನು ಇಟ್ಟು ಮರಿ ಮಾಡಲು ಬಿದಿರು ಬುಟ್ಟಿಯಲ್ಲಿ ಮುಚ್ಚಿಡಲಾಗಿತ್ತು. ಕಾಫಿ ತೋಟದೊಳಗಿಂದ ಬಂದ ಬೃಹತ್ ಗಾತ್ರದ ನಾಗರಹಾವು ಕೋಳಿಗೂಡಿಗೆ ತೆರಳಿ ಹುಡುಕಾಟ ನಡೆಸಿದೆ. ನಂತರ ಕೋಳಿ ಮೊಟ್ಟೆಯನ್ನು ಕಂಡು ಬುಟ್ಟಿಯೊಳಗೆ ನುಗ್ಗಿದ್ದು, ನಾಗರÀಹಾವಿನಿಂದ ತನ್ನ ಮೊಟ್ಟೆಯನ್ನು ರಕ್ಷಿಸಿಕೊಳ್ಳಲು ಕೋಳಿ ಹರಸಾಹಸಪಟ್ಟಿದೆ.
ಹಾವಿನೊಂದಿಗೆ ಸೆಣಸಾಟದಲ್ಲಿ ಕೋಳಿ ಬಲಿಯಾಗಿದೆ. ಬುಟ್ಟಿಯಲ್ಲಿದ್ದ ನಾಲ್ಕು ಮೊಟ್ಟೆಗಳನ್ನು ನುಂಗಿದ ನಾಗರಹಾವು ಕೊನೆಗೆ ಕೋಳಿಯನ್ನು ನುಂಗಲು ಯತ್ನಿಸಿದ್ದು, ಕೋಳಿಗೂಡು ಸ್ವಚ್ಛಗೊಳಿಸಲು ತೆರಳಿದ ಕಾರ್ಮಿಕ ಕಾವೇರಿಯಪ್ಪ ಪತ್ನಿ ಚಕ್ಕಮ್ಮ ಎಂಬವರಿಗೆ ನಾಗರಹಾವು ಕೋಳಿಯ ಬಳಿ ಇರುವುದು ಕಂಡು ಬಂಡಿದೆ.
ಗಾಬರಿಗೊAಡ ದಂಪತಿ ತಕ್ಷಣ ಮಗ ಧರ್ಮ ಎಂಬವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಗುಹ್ಯ ಗ್ರಾಮದ ಉರಗ ರಕ್ಷಕ ಸುರೇಶ್ ಪೂಜಾರಿ ನಾಗರಹಾವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೆರೆ ಹಿಡಿದ ಸಂದರ್ಭ ಹಾವು ನುಂಗಿದ್ದ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಾಲ್ಕು ಮೊಟ್ಟೆಗಳನ್ನು ಕಕ್ಕಿದೆ. ಹೊಟ್ಟೆ ತುಂಬಾ ಸಿಕ್ಕಿದ್ದು ಇಲ್ಲದಂತಾಯ್ತಲ್ಲ ಎಂದು ಆಕ್ರೋಶಗೊಂಡ ನಾಗರಹಾವು ಉರಗ ರಕ್ಷಕನ ಮೇಲೆ ದಾಳಿಗೂ ಯತ್ನಿಸಿತು. ಸೆರೆ ಹಿಡಿದ ಹಾವನ್ನು ಸುರೇಶ್ ಪೂಜಾರಿ ಮಾಲ್ದಾರೆ ಅರಣ್ಯಕ್ಕೆ ಬಿಟ್ಟಿದ್ದಾರೆ.
-ಎಸ್.ಎಂ ಮುಬಾರಕ್