ಮಡಿಕೇರಿ, ನ. ೨೫: ಪ್ರಸಕ್ತ ಸಾಲಿಗೆ ಜಿಲ್ಲಾ ಉದ್ಯಮ ಕೇಂದ್ರ ಮತ್ತು ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಉಪಕರಣ ಯೋಜನೆಯಡಿ ವಿದ್ಯುತ್ ಚಾಲಿತ ಹೊಲಿಗೆಯಂತ್ರ, ಮರಗೆಲಸ ಮತ್ತು ಗಾರೆ ಕಸುಬಿನ ಸುಧಾರಿತ ಉಪಕರಣ ಪಡೆಯಲು ಆಸಕ್ತಿಯುಳ್ಳ ಗ್ರಾಮೀಣ ಪ್ರದೇಶದ ವೃತ್ತಿನಿರತ ಕಸುಬುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿಗದಿತ ದಾಖಲಾತಿಗಳೊಂದಿಗೆ hಣಣಠಿs://ಞoಜಚಿgu.ಟಿiಛಿ.iಟಿ/eಟಿ/ಚಿಠಿಠಿಟiಛಿಚಿಣioಟಿ-ಜಿoಡಿ-ಜಿಡಿee-ಣooಟಞiಣs-ಜಿoಡಿ-ಡಿuಡಿಚಿಟ-ಚಿಡಿಣisಚಿಟಿs-ಜuಡಿiಟಿg-ಣhe-ಥಿeಚಿಡಿ-೨೦೨೩-೨೪/ ವೆಬ್‌ಸೈಟ್‌ನಲ್ಲಿ ಡಿಸೆಂಬರ್ ೨೦ ರೊಳಗೆ ಅಪ್‌ಲೋಡ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿಯೊಂದಿಗೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ವೋಟರ್ ಐಡಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರಿಂದ ಪಡೆದ ಪ್ರಮಾಣ ಪತ್ರ (ಸರ್ಟಿಫಿಕೇಟ್ ಪ್ರಮ್ ಪಂಚಾಯಿತಿ ಡೆವಲೆಪ್‌ಮೆಂಟ್ ಆಫಿಸರ್(ಫಾರ ಟೈಲರಿಂಗ್, ಮೆಷಿನ್ ಮತ್ತು ಕಾರ್‌ಫೆಂಟರಿ) ದಾಖಲಾತಿಗಳನ್ನು ನೀಡುವುದು. ಹೆಚ್ಚಿನ ಮಾಹಿತಿಗೆ ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ) ರವರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರ್ ರಸ್ತೆ, ಮಡಿಕೇರಿ ದೂ. ೦೮೨೭೨-೨೨೮೧೧೩ ನ್ನು ಸಂಪರ್ಕಿಸಬಹುದು ಎಂದು ಕೊಡಗು ಜಿಲ್ಲಾ ಪಂಚಾಯಿತಿ ಗ್ರಾಮೀಣ ಕೈಗಾರಿಕೆಗಳ ಉಪ ನಿರ್ದೇಶಕರು ತಿಳಿಸಿದ್ದಾರೆ.

ಅರ್ಹತೆ: ವಿದ್ಯುತ್ ಚಾಲಿತ ಹೊಲಿಗೆಯಂತ್ರ ಪಡೆಯುವುದಕ್ಕಾಗಿ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಟ ೧೮ ವರ್ಷ ಹಾಗೂ ಗರಿಷ್ಠ ೫೦ ವರ್ಷಗಳು ಇರತಕ್ಕದ್ದು.

ಗಾರೆಕೆಲಸ ಮತ್ತು ಮರಗೆಲಸ ಉಪಕರಣಗಳನ್ನು ಪಡೆಯುವುದಕ್ಕಾಗಿ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ವಾಸವಿರುವ ಅಭ್ಯರ್ಥಿ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಗಾರೆಕೆಲಸ ಮತ್ತು ಮರಗೆಲಸ ಉಪಕರಣಗಳನ್ನು ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಟ ೧೮ ವರ್ಷ ಹಾಗೂ ಗರಿಷ್ಠ ೬೦ ವರ್ಷಗಳು ಇರತಕ್ಕದ್ದು. ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ. ಸರ್ಕಾರಿ ನೌಕರರು ಅಥವಾ ಕುಟುಂಬದವರು ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಈಗಾಗಲೇ ಉಚಿತ ಸುಧಾರಿತ ಉಪಕರಣ ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ ಕೊಡಗು ಜಿಲ್ಲಾ ಪಂಚಾಯಿತಿ ಗ್ರಾಮೀಣ ಕೈಗಾರಿಕೆಗಳ ಉಪ ನಿರ್ದೇಶಕರು ತಿಳಿಸಿದ್ದಾರೆ.

ಉದ್ದಿಮೆ ಸ್ಥಾಪಿಸಲು ಸಹಾಯಧನಕ್ಕೆ

ಪ್ರಸಕ್ತ ಸಾಲಿನ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ಧಿಗಾಗಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರು ಎಲೆಕ್ಟಾçನಿಕ್ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಉದ್ದಿಮೆಯನ್ನು ಸ್ಥಾಪಿಸಲು ಘಟಕ ವೆಚ್ಚದ ಶೇ.೭೦ರಷ್ಟು ಅಥವಾ ರೂ.೫ ಲಕ್ಷಗಳ ಸಹಾಯಧನವನ್ನು ಪಡೆಯಲು (ಉಳಿದ ಘಟಕ ವೆಚ್ಚ ಬ್ಯಾಂಕಿನಿAದ ಪಡೆಯುವುದು) ಅರ್ಜಿ ಆಹ್ವಾನಿಸಲಾಗಿದೆ.

(ಯೂಟ್ಯೂಬ್ ಚಾನಲ್, ಸೋಷಿಯಲ್ ಮೀಡಿಯಾ ನ್ಯೂಸ್ ವೇಜಸ್, ನ್ಯೂಸ್ ಆನ್‌ಲೈನ್ ಬ್ಲಾಗ್, ನ್ಯೂಸ್ ಕಂಟೆAಟ್ ಕ್ರಿಯೇಷನ್, ವೆಬ್ ಪೇಜಸ್, ಆನ್‌ಲೈನ್ ಜರ್ನಲಿಸಂ, ಮೀಡಿಯಾ ರಿಲೇಟೆಡ್ ಟ್ರೆöÊನಿಂಗ್) ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರ ಕುಟುಂಬದ ಆದಾಯ ಗ್ರಾಮೀಣ ಪ್ರದೇಶದವರಿಗೆ ರೂ. ೧.೫೦ ಲಕ್ಷ ಮತ್ತು ನಗರ ಪ್ರದೇಶದವರಿಗೆ ರೂ.೨ ಲಕ್ಷಗಳ ಮಿತಿಯಲ್ಲಿರಬೇಕು. ಕಳೆದ ೧೫ ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ವಯೋಮಿತಿ ೨೧ ರಿಂದ ೫೦ ವರ್ಷದವರೆಗೆ ಇರಬೇಕು. ಕುಟುಂಬದ ಸದಸ್ಯರು ಸರ್ಕಾರಿ-ಅರೆ ಸರ್ಕಾರಿ ಸಂಸ್ಥೆಯ ನೌಕರರಾಗಿರಬಾರದು. ಸಫಾಯಿ ಕರ್ಮಚಾರಿಗಳ ಮಕ್ಕಳಿಗೆ-ಅಲೆಮಾರಿ-ಅರೆ ಅಲೆಮಾರಿ ಜನಾಂಗದವರ ಮಕ್ಕಳಿಗೆ ಆದ್ಯತೆ ನೀಡಲಾಗುವುದು.

ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಆರ್ಥಿಕ ಸೌಲಭ್ಯ ಪಡೆದಿರಬಾರದು. ಕಡ್ಡಾಯವಾಗಿ ಯುಎಎಂ(ಉದ್ಯೋಗ್ ಆಧಾರ್ ಮೆಮೋರಂಡಮ್)ನಲ್ಲಿ ನೋಂದಾಯಿತರಾಗಿರಬೇಕು. ಸಹಾಯಧನ ಹೊರತುಪಡಿಸಿ ಉಳಿದ ಮೊತ್ತವು ಬ್ಯಾಂಕ್ ಸಾಲವಾಗಿದೆ. ಸ್ಥಾಪಿಸಿದ ಉದ್ಯಮದಲ್ಲಿ ಒಬ್ಬ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಅರ್ಜಿದಾರರು ಒಳಪಡುವ ಉಪಜಾತಿಗೆ ಸಂಬAಧಿಸಿದ ಅಭಿವೃದ್ಧಿ ನಿಗಮಗಳಿಗೆ ಯೋಜನಾವರದಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಬ್ಯಾಂಕುಗಳಿAದ ಸಹಾಯಧನ ಬಿಡುಗಡೆ ಮಾಡಲು ಕ್ಲೇಮ್ ಬಂದ ಕೂಡಲೇ ಸಹಾಯಧನ ಮೊತ್ತವನ್ನು ಸಂಬAಧಿಸಿದ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗೆ ನಿಗಮದ ವೆಬ್‌ಸೈಟ್ hಣಣಠಿs://ಞmvsಣಜಛಿಟ.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಪಡೆದುಕೊಳ್ಳುವುದು. ಅರ್ಜಿಯನ್ನು ಡಿಸೆಂಬರ್ ೮ ರೊಳಗೆ ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲೆ-೫೭೧೨೦೧ ದೂ. ೦೮೨೭೨-೨೨೮೮೫೭ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಸಹಕಾರ ಡಿಪ್ಲೊಮಾ ತರಬೇತಿಗೆ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ (ಕೆಐಸಿಎಂ) ಮಡಿಕೇರಿ ಇಲ್ಲಿ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್’’ (ಡಿಸಿಎಂ) ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಎಸ್‌ಎಸ್‌ಎಲ್‌ಸಿ-ಪಿಯುಸಿ-ಪದವಿ-ಸ್ನಾತಕೋತ್ತರ ಪದವಿ ಪಡೆದಿರಬೇಕು. ತರಬೇತಿ ಅವಧಿ ೬ ತಿಂಗಳು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮಾಹೆಯಾನ ರೂ. ೬೦೦ ಹಾಗೂ ಇತರ ಎಲ್ಲಾ ಅಭ್ಯರ್ಥಿಗಳಿಗೆ ರೂ. ೫೦೦ ರಂತೆ ಶಿಷ್ಯವೇತನ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ೮೭೯೨೬೨೮೪೩೭, ೯೮೪೫೩೧೮೩೬೪, ೯೬೬೩೧೫೩೯೨೨, ೮೭೬೨೯೨೫೮೬೨, ೮೭೬೨೧೧೦೯೫೨ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲೆ ಡಾ. ರೇಣುಕಾ ಆರ್.ಎಸ್. ತಿಳಿಸಿದ್ದಾರೆ.