ಬದುಕಿನ ಕೆಲವು ವಿಚಾರಗಳನ್ನು ಹೀಗೆಯೇ ಎಂದು ನಿರ್ಧರಿಸುವುದು ಅಸಾಧ್ಯ. ಸಾಂದರ್ಭಿಕವಾಗಿ, ಸನ್ನಿವೇಶಕ್ಕೆ ಹೊಂದಿಕೊAಡ, ವ್ಯಕ್ತವಾದ, ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡರೆ ಅದು ಸಾರ್ವಕಾಲಿಕ ಸತ್ಯವಾಗಲಾರದು. ಉದಾಹರಣೆಗೆ ಹೆಣ್ಣಿನ ಅಂತರAಗದ ಸಂವೇದನಾಶೀಲತೆಗೆ, ಅವಳ ಪ್ರೀತಿ, ತ್ಯಾಗ, ಶ್ರಮಕ್ಕೆ ಬೆಲೆ ಕೊಟ್ಟು ಅವಳನ್ನು ದೇವತಾ ಸ್ವರೂಪಿಯಾಗಿ ಕಾಣುವವರೂ ಇದ್ದಾರೆ. ಹೆಣ್ಣಿನ ಆಂತರಿಕ ಸೌಂದರ್ಯ ನಗಣ್ಯವೆಂಬAತೆ, ಅವಳನ್ನು, ಅವಳಲ್ಲಿರುವ ಕೌಶಲ್ಯಗಳನ್ನು ಕಡೆಗಣಿಸಿ ಕೇವಲ ಅವಳೊಂದು ಸರಕು ಎಂಬAತೆ, ಮೃಗಕ್ಕಿಂತಲೂ ಕೀಳಾಗಿ ಕಾಣುವ, ತಮ್ಮ ನಡವಳಿಕೆಯಲ್ಲಿ ಕ್ರೌರ್ಯತೆಯನ್ನೇ ಮೆರೆಯುವವರೂ ನಮ್ಮೊಂದಿಗೆ ಇದ್ದಾರೆ. ಹೀಗಿರುವಾಗ ಇಂತಹ ವಿಚಾರದಲ್ಲಿ ಏಕಾಭಿಪ್ರಾಯಕ್ಕೆ ಬರುವುದು ಸಮಂಜಸ ಎನಿಸಲಾರದು. ಇಂದು ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇಲ್ಲಿ ಅಭಿಪ್ರಾಯವನ್ನು ವ್ಯಕ್ತಗೊಳಿಸುವಾಗ ಎರಡನೆಯ ವರ್ಗದವರನ್ನು ನೇರವಾಗಿ ಪರಿಗಣನೆಗೆ ಒಳಪಡಿಸುತ್ತಾ ವಿಚಾರಗಳನ್ನು ಚರ್ಚಿಸಬೇಕಾಗುತ್ತದೆ. ಇದು ಇಂದು ನಿನ್ನೆಯ ಸಮಸ್ಯೆಯಾಗಿ ಉಳಿದಿಲ್ಲ.
ಅನಾದಿ ಕಾಲದಿಂದಲೂ ಸಾಗಿ ಬಂದಿರುವ ಮಹಿಳೆಯರ ಮೇಲಿನ ದೌರ್ಜನ್ಯ ಭಾರತದ ಶ್ರೇಷ್ಠ ಪರಂಪರೆ, ಸಂಸ್ಕೃತಿಗೊAದು ಕಪ್ಪು ಚುಕ್ಕೆಯೇ ಸರಿ. ಅಸಮಾನತೆ ಎನ್ನುವುದು ಲಿಂಗ, ಜಾತಿ, ಅಂತಸ್ತು, ಧರ್ಮ ಹೀಗೇ ಬೇರೆ ಬೇರೆ ಆಯಾಮಗಳಲ್ಲಿ ನಡೆಯುತ್ತಲೇ ಬಂದಿರುವುದು ಸತ್ಯ. ಇದರ ಕಹಿ ಅನುಭವವನ್ನುಂಡು ಬೆಂಕಿಯಲ್ಲಿ ಅರಳಿದ ಹೂವಿನಂತೆ ಬದುಕಿ ತೋರಿಸಿದ ಮಹನೀಯರೆಲ್ಲರೂ ಇಂದು ನಮಗೆ ದಾರಿ ದೀವಿಗೆಯಾಗಿದ್ದಾರೆ. ೧೨ನೇ ಶತಮಾನದಲ್ಲಿ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿದ್ದ ಅಸಂಬದ್ಧ ಆಚರಣೆಗಳನ್ನು ನೇರ ಮಾತುಗಳಿಂದಲೇ ಧಿಕ್ಕರಿಸುತ್ತಾ, ಹೆಣ್ಣಿನ ಅಂತರAಗದ ಅಳಲಿಗೆ ನ್ಯಾಯ ಒದಗಿಸಲು ಪ್ರಯತ್ನಿಸಿದ ನಮ್ಮ ನಾಡಿನ ಮೊಟ್ಟ ಮೊದಲ ಮಹಿಳಾ ಹೋರಾಟಗಾರ್ತಿ ಅಕ್ಕಮಹಾದೇವಿ. ಅವಳ ಇಡೀ ಬದುಕೇ ಒಂದು ರೋಚಕ ಹಾದಿ. ರಾಜಸ್ತಾನ್ನಲ್ಲಿ ಬಾಲ್ಯ ವಿವಾಹದಿಂದಾಗಿ ತಾನು ಅನುಭವಿಸಿದ ಬದುಕಿನ ಕಠಿಣ ಅನುಭವಗಳು ಬೇರೆ ಯಾವ ಹೆಣ್ಣು ಮಕ್ಕಳಿಗೂ ಬಾರದಿರಲಿ ಎಂದು ಸಮಾಜ ಸೇವಕಿಯಾಗಿ ದುಡಿಯುತ್ತಿದ್ದಾಗಲೇ, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮತ್ತೆ ಪುಟ್ಟಿದೆದ್ದ ಫೀನಿಕ್ಸ್ ಪಕ್ಷಿಯಂತೆ ತನ್ನ ಸಾಮರ್ಥ್ಯಕ್ಕೂ ಮೀರಿ ಮಹಿಳಾ ಪರ ಹೋರಾಟದಲ್ಲಿ ತೊಡಗಿಸಿಕೊಂಡ ಭಾಂವ್ರಿದೇವಿ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತನ್ನ ಪತಿ ಜ್ಯೋತಿಬಾ ಫುಲೆಯ ಸಂಪೂರ್ಣ ಬೆಂಬಲದಲ್ಲಿ ಹೆಣ್ಣು ಮಕ್ಕಳ ಶಾಲೆಯನ್ನು ತೆರೆದು, ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ ತೊಡಗಿಕೊಂಡ ಸಾವಿತ್ರಿ ಭಾಯಿ ಫುಲೆ. ಆದರೆ ಅವರನ್ನು ಇಡೀ ಊರಿನ ಜನ ಸಗಣಿ ನೀರು ಎರಚುವ ಮೂಲಕ ಅವರ ನಿಲುವಿಗೆ, ಸತ್ಕಾರ್ಯಕ್ಕೆ ತೊಡಕುಂಟು ಮಾಡಿದ್ದೂ ದೌರ್ಜನ್ಯದ ಮತ್ತೊಂದು ಮುಖ. ಇವೆಲ್ಲಾ ಹೆಣ್ಣಿನ ಮೇಲಾಗುತ್ತಿದ್ದ ಶೋಷಣೆಯ ವಿವಿಧ ಮುಖಗಳನ್ನು ಪರಿಚಯಿಸುವ ಪ್ರಯತ್ನ. ಆದರೆ ಎಂತಹ ಕ್ಲಿಷ್ಟ ಸನ್ನಿವೇಶಗಳನ್ನೂ ಎದುರಿಸಿಯೂ ಒಬ್ಬ ಅಸಾಮಾನ್ಯ ಸ್ತಿçà ಹೇಗೆ ಬೆಳೆಯಬಲ್ಲಳು ಎನ್ನುವುದಕ್ಕೆ ಕೆಲವು ಸಾಧಕರ ಉದಾಹರಣೆಗಳಿವು. ಕೋಮಲೆ ಎಂದೇ ಎಲ್ಲಾ ಸಾಹಿತಿ, ಕವಿಗಳಿಂದ ಬಿಂಬಿತವಾಗಿರುವ ಒಬ್ಬ ಸ್ತಿçÃಯಲ್ಲಿಯೂ ಎಂತಹ ಉಕ್ಕಿನಂತಹ ದಿಟ್ಟ ಮನಸ್ಸಿರಬಲ್ಲದು ಎಂಬುದನ್ನು ಇಂತಹ ಹಲವು ಸಾಧಕಿಯರ ಮೂಲಕವೇ ತಿಳಿಯಬೇಕು. ಕುಟುಂಬದ, ಸಮಾಜದ, ತಿರಸ್ಕಾರ, ಕುಹಕ ನುಡಿಗಳು ಮಾತ್ರವಲ್ಲದೆ ದೈಹಿಕವಾಗಿಯೂ ನೋಯಿಸಲ್ಪಟ್ಟ ಹೆಣ್ಣು ಜೀವನವನ್ನೇ ಅಂತ್ಯವಾಗಿಸಿಕೊAಡಿರುವ ಘಟನೆಗಳು ಸ್ಥೆöÊರ್ಯವನ್ನು ಕಸಿಯುವಂತೆ ಮಾಡಬಲ್ಲದು. ಆದರೆ ಅದೇ ಹೆಣ್ಣು ಮಕ್ಕಳು ಸಿಡಿದು ನಿಂತು ಉತ್ತರವಾಗಿ ಸಾಧನೆಯಲ್ಲಿ ಗುರುತಿಸಿಕೊಂಡಾಗ ವೀರತ್ವದ ಗುಣಕ್ಕೆ ಶಿರಬಾಗಿ ನಮಿಸಲೇಬೇಕೆನಿಸುತ್ತದೆ.
ನಮ್ಮ ಹಿಂದಿನ ಮಹಿಳೆಯರ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳೇ ಒಂದು ತೆರನಾಗಿದ್ದವು.
ವರದಕ್ಷಿಣೆ, ಬಾಲ್ಯವಿವಾಹ, ಸತಿ ಸಹಗಮನ ಪದ್ಧತಿ, ವಿಧವೆಯರ ಮೇಲಾಗುತ್ತಿದ್ದ ಹಿಂಸೆ, ಶಿಕ್ಷಣದ ಕೊರತೆ, ಹೆಣ್ಣು ಎಂಬ ಕ್ಷುಲ್ಲಕ ದೃಷ್ಟಿಯಿಂದ ಅವಳ ಮೇಲಾಗುತ್ತಿದ್ದ ದೌರ್ಜನ್ಯಗಳು ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಇವುಗಳಿಂದ ಹೆಣ್ಣನ್ನು ಮುಕ್ತಿಗೊಳಿಸಲು ತಮ್ಮ ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲಿಯೇ ಬದುಕು ಮುಗಿಸಿದವರು ಹಲವು ಸಾಧಕರು. ಈಗಿನ ಮಹಿಳೆಯರು ಇವೆಲ್ಲ ಸಮಸ್ಯೆಗಳಿಂದ ಬಹುಪಾಲು ಮುಕ್ತಳಾಗಿ ಹೆಣ್ಣು ಸುಶಿಕ್ಷಿತಳು, ವಿದ್ಯಾವಂತೆ, ತನ್ನ ಕಾಲಮೇಲೆ ನಿಂತು ತನ್ನ ಬದುಕನ್ನು ರೂಪಿಸಿಕೊಳ್ಳಬಲ್ಲಷ್ಟು ಸಮರ್ಥಳೂ ಆಗಿದ್ದಾಳೆ ನಿಜ. ದೇಶದ ಆಡಳಿತ ವ್ಯವಸ್ಥೆಯಿಂದ ಹಿಡಿದು ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಮಹಿಳೆಗೆ ಇಂದು ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರವೇನು ? ಹೇಗೆ ? ಎಂಬುದೇ ಪ್ರಶ್ನೆಯಾಗಿಬಿಟ್ಟಿದೆ. ತಂತ್ರಜ್ಞಾನದ ಸೋಗಿನಲ್ಲಿ ಭಯ ಹುಟ್ಟಿಸುವ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಸೂಕ್ಷö್ಮ ಮನಸ್ಸಿನ ಮಹಿಳೆಯರು ಬಲಿಪಶುಗಳಾಗುತ್ತಿರುವುದು ದೌರ್ಜನ್ಯದ ಮತ್ತೊಂದು ಮುಖ. ರಾಜಕೀಯ ಗಾಳಗಳಂತೆ ಹಣದ ಅವಶ್ಯಕತೆಗೊ, ಕುಟುಂಬ ನಿರ್ವಹಣೆಗಾಗಿಯೋ ಹನಿಟ್ರಾö್ಯಪ್ ಹೆಸರಿನಲ್ಲಿ ಸಾಮಾಜಿಕ ಘನತೆಗೆ ಪ್ರತಿಷ್ಠಿತರ ಹೆಸರಿಗೆ, ಗೌರವಕ್ಕೆ ಕುಂದು ತರುವಂತಹ ದುಷ್ಕೃತ್ಯಕ್ಕೆ ಬಳಸಲ್ಪಡುತ್ತಿರುವುದು ನಿಜಕ್ಕೂ ಮುಜುಗರಕ್ಕೆ ಕಾರಣವಾಗುತ್ತಿದೆ. ಇಂತಹ ಅವಮಾನಕರ ಘಟನೆಗಳಿಗೆ ಗುರಿಯಾಗುತ್ತಿರುವ ಮಹಿಳೆಯರಿಂದಾಗಿ, ಇಡೀ ಹೆಣ್ಣು ಸಮುದಾಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಲ್ಲದೆ ಅವಳಲ್ಲಿರುವ ಸೃಜನಶೀಲತೆಗೆ, ಪ್ರತಿಭೆಗೆ, ಕೌಶಲ್ಯಕ್ಕೆ ಸೂಕ್ತ ಅವಕಾಶಗಳಿದ್ದರೂ ತೊಡಗಿಸಿಕೊಳ್ಳುವಲ್ಲಿ ಹಿಂಜರಿತವುAಟಾಗುತ್ತದೆ. ಕಾರಣ ಸಾರ್ವಜನಿಕ ಜೀವನದಲ್ಲಿ ಅವಳ ಆತ್ಮ ಗೌರವಕ್ಕೆ ಕುಂದುAಟಾಗದAತೆ ತೊಡಗಿಸಿಕೊಳ್ಳುವುದೇ ಇಂದಿನ ದಿನಗಳಲ್ಲಿ ಸವಾಲಾಗಿಬಿಟ್ಟಿದೆ. ಮನರಂಜನೆಗಾಗಿ ಇಂದಿನ ಹೆಚ್ಚಿನ ಯುವಕ-ಯುವತಿಯರು ಆಶ್ರಯಿಸಿರುವುದು ಸಾಮಾಜಿಕ ಜಾಲತಾಣಗಳನ್ನು. ಆದರೆ ಇದರೊಳಗೆ ಮತ್ತೊಂದು ಭೂಗತ ಲೋಕವೇ ಅಡಗಿರುವುದು, ಇದರ ಅಟ್ಟಹಾಸಕ್ಕೆ ಮಹಿಳೆಯರೇ ಬಲಿಯಾಗುತ್ತಿರುವುದು ದುರಂತ ಬದುಕಿಗೆ ಹಿಡಿದ ಕೈಗನ್ನಡಿ. ಸ್ವಾತಂತ್ರö್ಯಕ್ಕೂ, ಸ್ವೇಚಾಚ್ಚಾರಕ್ಕೂ ವ್ಯತ್ಯಾಸವೇ ತಿಳಿಯದ ಮನಸ್ಸುಗಳು ಇಂದು ಈ ವ್ಯೂಹದೊಳಗೆ ಸಿಲುಕಿ ನಲುಗುತ್ತಿವೆ. ಒಂದು ರೀತಿಯ ಭಯೋತ್ಪಾದಕತೆ, ಆತಂಕ, ಒತ್ತಡಗಳಿಗೆ ಒಳಗಾದ ಮನಸ್ಸುಗಳು ಆತ್ಮಹತ್ಯೆಯ ಮೊರೆ ಹೋಗುತ್ತಿವೆ. ಸಿನಿಮಾ, ಮಾಡೆಲಿಂಗ್, ಕ್ರೀಡಾ ಕ್ಷೇತ್ರಗಳಲ್ಲಿ ಜನಪ್ರಿಯತೆ ಗಳಿಸುವ ಹುಮ್ಮಸ್ಸಿನಲ್ಲಿ ತಮಗೇ ತಿಳಿಯದಂತೆ ಅನಾಹುತಕ್ಕೆ ಸಿಲುಕಿಕೊಂಡು ಬದುಕಿನ ದುರಂತ ಅಂತ್ಯಕ್ಕೆ ಒಳಪಡುತ್ತಿರುವುದು ಸತ್ಯ. ತಾಂತ್ರಿಕ ಕ್ಷೇತ್ರದಲ್ಲಿನ ತಂತ್ರಗಳು (ಡೀಪ್ಫೇಕ್ನಂತಹ ವಿದ್ಯಮಾನಗಳು) ಮಹಿಳೆಯರಿಗೆ ಬಿಡಿಸಲಾಗದ ಕಗ್ಗಂಟಾಗಿದೆ ಎಂದರೆ ತಪ್ಪಾಗಲಾರದು. ಮಹಿಳಾ ದೌರ್ಜನ್ಯವೆನ್ನುವುದು ಕಾಲ ಬದಲಾದಂತೆ ಹೊಸ ಹೊಸ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಅಪಹರಣ, ಅತ್ಯಾಚಾರ, ಕೊಲೆಗಳಂತಹ ಅಮಾನುಷ ಕೃತ್ಯಗಳ ಜೊತೆಗೆ ಮಾನಸಿಕ ಹಿಂಸೆಗೆ ಗುರಿಮಾಡುವ ಬ್ಲಾಕ್ಮೇಲ್ನಂತಹ ಮನೋವೈಕಲ್ಯತೆ ಮೆರೆಯುವವರು ಇಂದು ಮಹಿಳೆಯರ ಪಾಲಿನ ನಿಜವಾದ ಭಯೋತ್ಪಾದಕರು. ಆಧುನಿಕ ಮಹಿಳೆ ತನ್ನ ಬದುಕನ್ನು ತನ್ನಿಚ್ಚೆಯಂತೆ, ಸ್ವಾವಲಂಬಿಯಾಗಿ ಬದುಕುವುದೇ ಒಂದು ಹೆಗ್ಗಳಿಕೆ. ತನ್ನವರಿಂದಲೇ ದೋಷಾರೋಪಣೆಗೆ, ನಿಂದನೆಗೆ ಒಳಗಾಗುವುದಲ್ಲದೆ ಕಾಣದ ಕೈವಾಡಗಳಿಗೆ ಸೆಡ್ಡು ಹೊಡೆದು ಬದುಕಬೇಕಾದ ಅವಿವಾರ್ಯತೆಯಂತೂ ಇದೆ. ಅನ್ಯಾಯವನ್ನು ಪ್ರತಿಭಟಿಸುವ, ನ್ಯಾಯದ ಪರವಾಗಿ ದಿಟ್ಟ ಹೆಜ್ಜೆಯನ್ನಿಡುವ ಮಹಿಳೆಯರಿಗೆ ಶಕ್ತಿ ನೀಡುವ ಕೆಲಸವನ್ನು ಕುಟುಂಬ, ಸಮಾಜ, ಮಾಧ್ಯಮಗಳು ಮಾಡಬೇಕು. ದೌರ್ಜನ್ಯಕ್ಕೆ ಒಳಗಾದ ನೊಂದ ಮನ ನಿರೀಕ್ಷೆ ಮಾಡುವುದು ತಮ್ಮ ಜೀವನೋತ್ಸಾಹವನ್ನು ಹೆಚ್ಚಿಸಬಲ್ಲ ಬಾಹ್ಯ ಪ್ರೇರಣೆಯನ್ನು. ಅದನ್ನು ಪ್ರಜ್ಞಾವಂತ ಸಮಾಜ ಅರ್ಥೈಸಿಕೊಂಡು ನಡೆದುಕೊಳ್ಳಬೇಕು. ಈಗಿನ ಯುವ ಪೀಳಿಗೆ ಹೆಣ್ಣನ್ನು ತಾಯಿಯಾಗಿ, ಅಕ್ಕ ತಂಗಿಯಾಗಿ, ಬಾಳ ಸಂಗಾತಿಯಾಗಿ, ಮಗಳಾಗಿ, ಗೆಳತಿಯಾಗಿ ಬೇರೆ ಬೇರೆ ಪಾತ್ರದಲ್ಲಿ, ಸಂಬAಧಗಳಿಗೆ, ಮೌಲ್ಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಾಗುವಂತಾಗಲಿ. ಮನಸ್ಸಿನ ವಿಕಲತೆಗೆ ಹೆಣ್ಣು ಗುರಿಯಾಗದಿರಲಿ. ಇತರ ಹೆಣ್ಣು ಮಕ್ಕಳ ಬಗೆಗೆ ನಾವಾಡುವ ಮಾತು, ನೋಡುವ ನೋಟ, ನಮ್ಮ ಮಗಳು ಪತ್ನಿ, ಸಹೋದರಿಯರನ್ನು ಒಳಗೊಂಡAತೆ ವ್ಯಕ್ತವಾಗುವಂತಾದರೆ ಬಹುಷಃ ಭಾವನೆಗಳ ಮೇಲಿನ ದೌರ್ಜನ್ಯ ನಿಯಂತ್ರಣಕ್ಕೆ ಬರಬಹುದು. ಇದು ಕಾನೂನಿನ ವ್ಯಾಪ್ತಿಗೆ ಬಾರದ ವಿಚಾರ. ಆಸಿಡ್ ಧಾಳಿ, ನಿರ್ಭಯ ಪ್ರಕರಣ, ಸೌಜನ್ಯ ಪ್ರಕರಣದಂತಹ ಅಮಾನವೀಯ ಕೃತ್ಯಗಳಿಗೆ ಅಷ್ಟೇ ಬಿರುಸಾದ ಉತ್ತರವನ್ನು ಅಪರಾಧಿಗಳ ಶಿಕ್ಷೆಯಲ್ಲಿ ಶೀಘ್ರವಾಗಿ ಅನ್ವಯವಾಗುವಂತಾಗಬೇಕು. ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದ ಪೊಲೀಸ್, ಕಾನೂನು ವ್ಯವಸ್ಥೆಯು ಅಪರಾಧಿಗಳಿಗೆ ಪಾಠವಾಗುವಂತಿರಬೇಕು. ಮುಖ್ಯವಾಗಿ ಹೆಣ್ಣನ್ನು ಗೌರವದಿಂದ ನಡೆಸಿಕೊಳ್ಳುವ ಸಂಸ್ಕೃತಿಯನ್ನು ಪ್ರತೀ ಮನೆ ಮನೆಯಲ್ಲಿಯೂ ಪಾಲಿಸಲೇಬೇಕು. ಹೆಣ್ಣನ್ನು ಪೂಜಿಸುವ ಸ್ಥಳದಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತು ಇಲ್ಲಿ ಸಾರ್ಥಕತೆ ಪಡೆಯುತ್ತದೆ.
- ಪ್ರತಿಮಾ ಹರೀಶ್ ರೈ, ಉಪನ್ಯಾಸಕರು, ಸೈಂಟ್ ಆನ್ಸ್ ಪದವಿ ಕಾಲೇಜು, ವೀರಾಜಪೇಟೆ.