ಕುಶಾಲನಗರ, ನ. ೨೪: ಕುಶಾಲನಗರ ಸಮೀಪ ಗುಮ್ಮನಕೊಲ್ಲಿ ಗ್ರಾಮದಲ್ಲಿ ದಂತವೈದ್ಯ ಡಾ. ಪ್ರವೀಣ್ ದೇವರಗುಂಡ ಅವರ ಮನೆಗೆ ಐಟಿ ದಾಳಿ ಹೆಸರಲ್ಲಿ ಅಕ್ರಮವಾಗಿ ನುಗ್ಗಿ ದೌರ್ಜನ್ಯ ಎಸಗಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರ ಗೌಡ ಸಮಾಜ ಮತ್ತು ಗೌಡ ಯುವಕ ಸಂಘದ ಪ್ರಮುಖರು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದÀ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮತ್ತು ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಆರೋಪಿಗಳು ಭಾರೀ ಮೊತ್ತದ ಹಣದ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದು, ಈ ಘಟನೆ ಬಗ್ಗೆ ಪ್ರವೀಣ್ ಅವರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಕುಶಾಲನಗರ, ನ. ೨೪: ಕುಶಾಲನಗರ ಸಮೀಪ ಗುಮ್ಮನಕೊಲ್ಲಿ ಗ್ರಾಮದಲ್ಲಿ ದಂತವೈದ್ಯ ಡಾ. ಪ್ರವೀಣ್ ದೇವರಗುಂಡ ಅವರ ಮನೆಗೆ ಐಟಿ ದಾಳಿ ಹೆಸರಲ್ಲಿ ಅಕ್ರಮವಾಗಿ ನುಗ್ಗಿ ದೌರ್ಜನ್ಯ ಎಸಗಿರುವ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಶಾಲನಗರ ಗೌಡ ಸಮಾಜ ಮತ್ತು ಗೌಡ ಯುವಕ ಸಂಘದ ಪ್ರಮುಖರು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದÀ ಗೌಡ ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮತ್ತು ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಆರೋಪಿಗಳು ಭಾರೀ ಮೊತ್ತದ ಹಣದ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದು, ಈ ಘಟನೆ ಬಗ್ಗೆ ಪ್ರವೀಣ್ ಅವರು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಗಣಿ ಪ್ರಸಾದ್ ಆರೋಪಿಗಳ ಬಗ್ಗೆ ಕೂಲಂಕಶವಾಗಿ ತನಿಖೆ ನಡೆಸಬೇಕು. ಆರೋಪಿಗಳು ಹುಡುಕಾಟ ಮಾಡಿರುವ ೨೦೦ ಕೋಟಿ ರೂಗಳ ಬಗ್ಗೆ ಮೂಲ ಹುಡುಕಬೇಕಾಗಿದೆ. ಡಾ. ಪ್ರವೀಣ್ ಅವರಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಎಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಒಂದು ವೇಳೆ ಪೊಲೀಸರು ನಿರ್ಲಕ್ಷö್ಯ ತಾಳಿದಲ್ಲಿ ಗೌಡ ಸಮಾಜದ ನೇತೃತ್ವದಲ್ಲಿ ಗೌಡ ಯುವಕ ಸಂಘ ಮತ್ತು ಗೌಡ ಸಮುದಾಯದ ಅಂಗ ಸಂಸ್ಥೆಗಳ ಸಹಕಾರದೊಂದಿಗೆ ಪ್ರತಿಭಟಿಸುವುದಾಗಿ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಎಚ್ಚರಿಸಿದ್ದಾರೆ.

ಈ ಸಂದರ್ಭ ಡಾ. ಪ್ರವೀಣ್ ದೇವರಗುಂಡ ಮತ್ತು ಗೌಡ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.