ಸೋಮವಾರಪೇಟೆ, ನ. ೨೫: ಕಳೆದ ಐದು ದಿನಗಳಿಂದ ಇಲ್ಲಿನ ನಂಜಮ್ಮ ಸಮುದಾಯ ಭವನದಲ್ಲಿ ನಡೆದ ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ಭರವಸೆಯ ಜೇಸಿ ಸಪ್ತಾಹ ೨೦೨೩ರ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ಮಂಗಳವಾರ ನಡೆಯಿತು.

ಮುಖ್ಯ ಅತಿಥಿ ಸೆನೆಟರ್ ಕುಮಾರ್ ಮಾತನಾಡಿ, ಮಾನವನ ಸಹೋದರತ್ವವು ರಾಷ್ಟç ಸಾರ್ವಭೌಮತ್ವಕ್ಕಿಂತಲೂ ಮಿಗಿಲಾದದ್ದಾಗಿದೆ. ಮಕ್ಕಳಿಂದ ವಯೋವೃದ್ಧರವರೆಗಿನ ಎಲ್ಲರಿಗೂ ಜೇಸಿ ಸಂಸ್ಥೆ ಎಲ್ಲ ರೀತಿಯ ಸಹಾಯವನ್ನು ಮಾಡುತ್ತಿದೆ. ಅರ್ಹರು ಜೇಸಿ ಸಂಸ್ಥೆಯ ಸದಸ್ಯತ್ವವನ್ನು ಪಡೆದು ಸಮಾಜಸೇವೆಗೆ ಮುಂದಾಗಬೇಕೆAದರು.

ವಲಯ ಉಪಾಧ್ಯಕ್ಷ ಪ್ರಶಾಂತ್ ಮಾತನಾಡಿ, ಜೇಸಿಐ ಸಂಸ್ಥೆ ಜನರನ್ನು ಒಂದು ಶಕ್ತಿಯನ್ನಾಗಿ ರೂಪಿಸುತ್ತಿದೆ. ಸಂಸ್ಥೆ ದೇಶದಾದ್ಯಂತ ಜೇಸಿ ಕುಟುಂಬದ ಸದಸ್ಯರಿಗೆ ಸಮಸ್ಯೆ ಎದುರಾದಾಗ ಉತ್ತಮ ಸ್ಪಂದನ ನೀಡುತ್ತಿದೆ. ಜನರಲ್ಲಿ ಸ್ನೇಹ ಸಂಬAಧ ಬೆಸೆಯಲು ಉತ್ತಮ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಜೇಸಿ ಸಂಸ್ಥೆಯ ರಾಷ್ಟಿçÃಯ ಸಮಿತಿ ಸದಸ್ಯ ನರೇನ್ ಕಾರ್ಯಪ್ಪ ಬಹುಮಾನ ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿ ಸಂಸ್ಥೆಯ ಅಧ್ಯಕ್ಷೆ ಎಂ.ಎ. ರುಬೀನಾ ವಹಿಸಿದ್ದರು. ವೇದಿಕೆಯಲ್ಲಿ ನಿಯೋಜಿತ ಅಧ್ಯಕ್ಷ ವಸಂತ, ಸ್ಥಾಪಕ ಅಧ್ಯಕ್ಷ ಕೆ.ಎನ್. ತೇಜಸ್ವಿ, ವಲಯ ನಿರ್ದೇಶಕ ನಾಗೇಗೌಡ, ವಲಯ ಉಪಾಧ್ಯಕ್ಷರುಗಳಾದ ನೆಲ್ಸನ್, ಪ್ರಶಾಂತ್, ಕಾರ್ಯದರ್ಶಿ ಜಗದಾಂಭ ಗುರುಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ ಲಕ್ಷಿö್ಮÃಕುಮಾರ್, ಜೇಸಿ ರಿಶಾ, ಕಾರ್ಯಕ್ರಮ ಯೋಜನಾಧಿಕಾರಿ ವಿನುತಾ ಸುದೀಪ್ ಇದ್ದರು.