ಚೆಯ್ಯಂಡಾಣೆ, ನ. ೨೫. ಕರಡ ಗ್ರಾಮದ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಕೊಕೇರಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡು ಪ್ರಶಸ್ತಿಗೆ ಮುತ್ತಿಕ್ಕಿತು. ಬಾವಲಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಕರಡ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯಾವಳಿಯನ್ನು ಬ್ರಿಗೇಡಿಯರ್ ಪಟ್ರಪಂಡ ಮೊಣ್ಣಪ್ಪ ಹಾಕಿ ಸ್ಟಿಕ್‌ನಿಂದ ಬಾಲ್ ತಳ್ಳುವುದರ ಮೂಲಕ ಪಂದ್ಯಾಟ ಉದ್ಘಾಟಿಸಿದರು.

ಫೈನಲ್ ಪಂದ್ಯಾಟದಲ್ಲಿ ಕೊಕೇರಿ ತಂಡ ಬಾವಲಿ ತಂಡವನ್ನು ೩-೦ ಗೋಲುಗಳಿಂದ ಮಣಿಸಿ ರೋಚಕ ಗೆಲುವು ಪಡೆಯಿತು.

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸುವಲ್ಲಿ ವಿಫಲವಾಯಿತು. ದ್ವಿತೀಯಾರ್ಧದ ೩೭ನೇ ನಿಮಿಷದಲ್ಲಿ ಮಚ್ಚಂಡ ಪ್ರಿನ್ಸ್ ಪೊನ್ನಣ್ಣ ಮೊದಲ ಆಕರ್ಷಕ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ನಂತರ ೪೬ ನೇ ನಿಮಿಷದಲ್ಲಿ ಚೆರುವಾಳಂಡ ಸುಬ್ಬಯ್ಯ ಮತ್ತೊಂದು ಗೋಲು ಬಾರಿಸಿ ಶಕ್ತಿ ತುಂಬಿದರು. ೫೪ ನಿಮಿಷದಲ್ಲಿ ಮಚ್ಚಂಡ ಪ್ರಿನ್ಸ್ ಪೊನ್ನಣ್ಣ ಮತ್ತೊಂದು ಗೋಲು ಬಾರಿಸಿ ತಂಡದ ಗೆಲುವಿನ ಅಂತರ ಹೆಚ್ಚಿಸಿದರು.

ಬಾವಲಿ ತಂಡದ ಆಟಗಾರರು ಪ್ರಥಮಾರ್ಧದಲ್ಲಿ ಉತ್ತಮ ಪ್ರದರ್ಶನ ತೋರಿದರೂ ದ್ವಿತೀಯಾಧÀðದಲ್ಲಿ ಅವಕಾಶ ಕೈಚೆಲ್ಲಿದರು. ಕೊಕೇರಿ ಗೋಲ್ ಕೀಪರ್ ಉತ್ತಮ ಪ್ರದರ್ಶನ ನೀಡಿ ಗೋಲಿನ ಅವಕಾಶಕ್ಕೆ ತಡೆಯೊಡ್ಡಿದ್ದರು.

ಚಾಂಪಿಯನ್ ಕೊಕೇರಿ ತಂಡಕ್ಕೆ ರೂ. ೩೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ಬಾವಲಿ ತಂಡಕ್ಕೆ ರೂ. ೨೦ ಸಾವಿರ ರೂಪಾಯಿ ನಗದು ಹಾಗು ಆಕರ್ಷಕ ಟ್ರೋಫಿ ಬಹುಮಾನವಾಗಿ ನೀಡಲಾಯಿತು.

ತೀರ್ಪುಗಾರರಾಗಿ ಚೆಯ್ಯಂಡ ಲವ ಅಪ್ಪಚ್ಚು, ಚಂದಪAಡ ಆಕಾಶ್, ಅಂಜಪರವAಡ ಕುಶಾಲಪ್ಪ, ನೆಲ್ಲಮಕ್ಕಡ ಪವನ್ ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಚೆಪ್ಪುಡಿರ ಕಾರ್ಯಪ್ಪ ಹಾಗೂ ನೆರಪಂಡ ಹರ್ಷ ಮಂದಣ್ಣ, ಚೇನಂಡ ಸಂಪತ್ ನೀಡಿದರು.

ನಾಟಿ ಕೋಳಿ ವಿಶೇಷ ಬಹುಮಾನ

ಪಂದ್ಯಾವಳಿಯಲ್ಲಿ ವಿಶೇಷವಾಗಿ ಚಾಂಪಿಯನ್ ಕೊಕೇರಿ ತಂಡಕ್ಕೆ ನಾಟಿ ಕೋಳಿ ಹಾಗೂ ರನ್ನರ್ಸ್ ಬಾವಲಿ ತಂಡಕ್ಕೆ ಟೈಸನ್ ಕೋಳಿ ಪ್ರೋತ್ಸಾಹಕ ಬಹುಮಾನವಾಗಿ ಐತಿಚಂಡ ಪ್ರಕಾಶ್ ಕಾರ್ಯಪ್ಪ ನೀಡಿದರು.

- ಅಶ್ರಫ್