ಗೋಣಿಕೊಪ್ಪ ವರದಿ, ನ. ೨೪ : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಟೂರ್ನಿಯಲ್ಲಿ ಮೂರ್ನಾಡು ಬ್ಲೇಜ್, ಅಶ್ವಿನಿ ಸ್ಪೋರ್ಟ್ಸ್, ಮಲ್ಮ ಕಕ್ಕಬ್ಬೆ ಹಾಗೂ ಬೇಗೂರು ಈಶ್ವರ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ. ಸೋಲನುಭವಿಸಿದ ಎಂಆರ್‌ಎಫ್, ಬೇರಳಿನಾಡ್, ಕೋಣನಕಟ್ಟೆ ಹಾಗೂ ಬೊಟ್ಯತ್ನಾಡ್ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ.

ಮೂರ್ನಾಡು ಬ್ಲೇಜ್ ತಂಡವು ಮೂರ್ನಾಡು ಎಂಆರ್‌ಎಫ್ ತಂಡವನ್ನು ೭-೧ ಗೋಲುಗಳಿಂದ ಗೆಲುವು ದಾಖಲಿಸಿತು. ಬ್ಲೇಜ್ ಪರ ನಾಣಯ್ಯ ೩, ಗ್ಯಾನ್ ೨, ಚೆಶ್ವಿನ್, ಎಂಆರ್‌ಎಫ್ ಆಟಗಾರ ಬೋಪಣ್ಣ ತಲಾ ಒಂದೊAದು ಗೋಲು ಬಾರಿಸಿದರು. ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಬೇರಳಿನಾಡ್ ತಂಡವನ್ನು ೪-೧ ಗೋಲುಗಳಿಂದ ಸೋಲಿಸಿತು. ಅಶ್ವಿನಿ ಪರ ಕುಶಾಲಪ್ಪ, ನೀಲ್, ತಿಮ್ಮಯ್ಯ, ಜಶನ್, ಬೇರಳಿನಾಡ್ ಪರ ಮುತ್ತಪ್ಪ ತಲಾ ಒಂದೊAದು ಗೋಲು ಹೊಡೆದರು. ಮಲ್ಮ ಕಕ್ಕಬ್ಬೆ ತಂಡಕ್ಕೆ ಕೋಣನಕಟ್ಟೆ ಇಲೆವೆನ್ ವಿರುದ್ಧ ೩-೧ ಗೋಲುಗಳ ಜಯ ದೊರೆಯಿತು. ಮಲ್ಮ ಪರ ಫಾಹದ್, ವಿವೇಕ್, ಪೂವಣ್ಣ, ಕೋಣನಕಟ್ಟೆ ಪರ ಸೋಮಣ್ಣ ತಲಾ ಒಂದೊAದು ಗೋಲು ಬಾರಿಸಿದರು.

ಬೇಗೂರು ಈಶ್ವರ ಯೂತ್‌ಕ್ಲಬ್ ತಂಡಕ್ಕೆ ಶೂಟೌಟ್‌ನಲ್ಲಿ ಬೊಟ್ಯತ್ನಾಡ್ ವಿರುದ್ಧ ೫-೩ ಗೋಲುಗಳ ಜಯ ದೊರೆಯಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ೧-೧ ಗೋಲುಗಳ ಸಮಬಲ ಸಾಧಿಸಿತು. ಟೈಬ್ರೇಕರ್‌ನಲ್ಲಿ ಬೇಗೂರು ೪ ಗೋಲು ಸಿಡಿಸಿತು. ಬೇಗೂರು ಆಟಗಾರರಾದ ಬೋಪಣ್ಣ ೨, ಅಯ್ಯಮ್ಮ, ಚೆರಿತ್, ಮುತ್ತಣ್ಣ, ಕೋಣನಕಟ್ಟೆ ಪರ ಬೋಪಣ್ಣ ೨, ಸುದೇಶ್ ಗೋಲು ಹೊಡೆದರು.