ನಾಪೋಕ್ಲು, ನ. ೨೪: ಸಂಪಾಜೆಯ ಮಹಾವಿಷ್ಣು ಮಿತ್ರ ಬಳಗದ ವತಿಯಿಂದ ದೀಪಾವಳಿ ಕ್ರೀಡಾಕೂಟದ ಅಂಗವಾಗಿ ಆಯೋಜಿಸಲಾಗಿದ್ದ ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಸ್ವಾಮಿ ಕೊರಗಜ್ಜ ಪಾಲ್ತಾಡಿ ತಂಡ ಪ್ರಥಮ ಸ್ಥಾನ ಗಳಿಸಿಕೊಂಡಿತು.

ಸಂಪಾಜೆಯ ವಿಷ್ಣು ಬಳಗ ತಂಡ ದ್ವಿತೀಯ ಸ್ಥಾನ, ಓಂ ಪ್ಲಸ್ ಸ್ಟಾರ್ ಮಲ್ಲರ್ ಮೂರನೇ ಸ್ಥಾನ, ಆದರ್ಶ್ ಚಡಾವು ತಂಡವು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಮಹಿಳೆಯರ ವಿಭಾಗದಲ್ಲಿ ಕೊಡಿಯಾಲ ತಂಡವು ಪ್ರಥಮ ಸ್ಥಾನ ಗಳಿಸಿದರೆ, ಆದರ್ಶ ಕೆಡವು ತಂಡವು ದ್ವಿತೀಯ ಸ್ಥಾನ ಗಳಿಸಿತು.

ಸಂಪಾಜೆಯ ಶ್ರೀ ಪಂಚಲಿAಗೇಶ್ವರ ದೇವಸ್ಥಾನದ ಆವರಣದಲ್ಲಿ ಪಂದ್ಯಾಟ ನಡೆಯಿತು.