ಅನಿಲ್ ಎಚ್.ಟಿ.
ಮಡಿಕೇರಿ, ನ. ೨೪ :ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಭರವಸೆಯಂತೆ ಜಾರಿಗೊಳಿಸಿದ ಮಹಿಳೆಯರಿಗಾಗಿನ ಉಚಿತ ಬಸ್ ಪ್ರಯಾಣಕ್ಕೆ ಅಪೂರ್ವ ಸ್ಪಂದನ ದೊರಕಿದ್ದು, ರಾಜ್ಯದಲ್ಲಿ ಕಳೆದ ೬ ತಿಂಗಳಲ್ಲಿ ೧೭೮.೬೭ ಕೋಟಿ ಮಹಿಳೆಯರು ಪ್ರಯಾಣಿಸಿದ್ದರೆ, ಕೊಡಗಿನಲ್ಲಿ ಇದೇ ಅವಧಿಯಲ್ಲಿ ೨೪,೩೩,೮೩೫ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ.
ಚುನಾವಣಾ ಸಂದರ್ಭ ನೀಡಿದ್ದ ಭರವಸೆಯಂತೆಯೇ ಅಧಿಕಾರಕ್ಕೆ ಬಂದೊಡನೇ ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ರಾಜ್ಯವ್ಯಾಪಿ ಪ್ರಯಾಣಿಸುವ ಶಕ್ತಿ ಹೆಸರಿನ ಯೋಜನೆ ಜಾರಿಗೆ ತಂದರು. ಜೂನ್ ೧೧ ರಂದು ಯೋಜನೆ ಜಾರಿಗೆ ಬಂದಿದ್ದು ಕಳೆದ ೬ ತಿಂಗಳಿನಲ್ಲಿ ೧೭೮.೬೭ ಕೋಟಿ ಪ್ರಯಾಣಿಕರು ಸಂಚರಿಸಿದ್ದರೆ ಈ ಪೈಕಿ ೧೦೦.೪೭ ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಪ್ರಯೋಜನ ಪಡೆದಿದ್ದಾರೆ. ಅಂದರೆ ಈವರೆಗೆ ೧೦೦ ಕೋಟಿ ಮಹಿಳೆಯರಿಗೆ ಕಾಂಗ್ರೆಸ್ ಸರ್ಕಾರ ತನ್ನ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಅನುಕೂಲ ಕಲ್ಪಿಸಿದಂತಾಗಿದೆ.
ಪ್ರತಿ ನಿತ್ಯ ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಶೇ.೫೬ ಮಹಿಳಾ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಯೋಜನೆಗೆ ಪೂರ್ವ ಸರ್ಕಾರಿ ಬಸ್‌ಗಳಲ್ಲಿ ಪ್ರತಿ ನಿತ್ಯ ೮೪ ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರೆ, ಪ್ರಸ್ತುತ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ೧.೦೮ ಕೋಟಿ ಮಹಿಳೆಯರು ಪ್ರಯಾಣ ಕೈಗೊಳ್ಳುತ್ತಿದ್ದಾರೆ. ಯೋಜನೆ ಜಾರಿಗೆ ಬಂದ ೫ ತಿಂಗಳಲ್ಲಿ ಈ ಉಚಿತ ಯೋಜನೆಗಾಗಿ ಸರ್ಕಾರ ವಿನಿಯೋಗಿಸಿದ ವೆಚ್ಚ ೨೩೯೭.೮೦ ಕೋಟಿ ರೂ. ಗಳಾಗಿವೆ.
ಕೊಡಗು ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ೩,೭೫೩ ಬಾಲಕಿಯರು ಸೇರಿ ೨,೬೭,೪೩೦ ಮಹಿಳಾ ಪ್ರಯಾಣಿಕರು ಸಂಚಾರ ಕೈಗೊಂಡಿದ್ದು ಈ ಪ್ರಯಾಣಕ್ಕಾಗಿ ರೂ. ೧,೨೧,೧೫೩ ಮೌಲ್ಯವನ್ನು ಸರ್ಕಾರ ಭರಿಸಿದೆ.
ಜುಲೈ ತಿಂಗಳಿನಲ್ಲಿ ೬,೯೫೩ ಬಾಲಕಿಯರನ್ನೊಳಗೊಂಡAತೆ ೪,೪೫,೩೧೦ ಮಹಿಳಾ ಪ್ರಯಾಣಿಕರು ಸಂಚಾರ ಕೈಗೊಡಿದ್ದು ರೂ. ೧,೬೮,೨೭,೯೭೭ ಸರ್ಕಾರ ಭರಿಸಿದೆ.
ಆಗಸ್ಟ್ನಲ್ಲಿ ೭೧೫೬ ಬಾಲಕಿಯರು ಸೇರಿದಂತೆ ೪,೪೬,೬೩೮ ಮಹಿಳಾ ಪ್ರಯಾಣಿಕರು ಸಂಚಾರ ಕೈಗೊಂಡಿದ್ದು ರೂ. ೧,೬೫,೨೦,೪೮೬ ಸರ್ಕಾರ ಒದಗಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ೭,೯೦೭ ಬಾಲಕಿಯರು ಸೇರಿದಂತೆ ೪,೭೫,೧೭೭ ಮಹಿಳಾ ಪ್ರಯಾಣಿಕರು ಸಂಚಾರ ಕೈಗೊಂಡಿದ್ದು ರೂ. ೧,೭೬,೮೭,೫೬೮ ಮೌಲ್ಯವನ್ನು ಸರ್ಕಾರ ಭರಿಸಿದೆ.
ಅಕ್ಟೋಬರ್ ತಿಂಗಳಿನಲ್ಲಿ ೧೨,೫೫೯ ಬಾಲಕಿಯರು ಸೇರಿದಂತೆ ೪,೬೧,೩೦೯ ಮಹಿಳಾ ಪ್ರಯಾಣಿಕರು ಸಂಚಾರ ಕೈಗೊಂಡಿದ್ದು
ರೂ. ೧,೯೨,೪೩,೧೨೫ ಮೌಲ್ಯವನ್ನು ಸರ್ಕಾರ ನೀಡಿದೆ.
ನವೆÀಂಬರ್ ಮಾಹೆಯಲ್ಲಿ (೨೩ನೇ ದಿನಾಂಕದವರೆಗೆ) ೭,೦೫೭ ಬಾಲಕಿಯರು ಸೇರಿದಂತೆ ೩,೩೭,೯೭೧ ಮಹಿಳಾ ಪ್ರಯಾಣಿಕರು ಸಂಚಾರ ಕೈಗೊಂಡಿದ್ದು, ರೂ. ೧,೩೪,೩೧,೯೯೯ ಮೌಲ್ಯವನ್ನು ಸರ್ಕಾರ ಭರಿಸಿದೆ.
ಜೂನ್ ೧೧ ರಿಂದ ನವೆಂಬರ್ ೨೩ ರ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ೪೫,೩೮೫ ಬಾಲಕಿಯರೂ ಸೇರಿದಂತೆ ೨೪ ಲಕ್ಷದ ೩೩ ಸಾವಿರದ ೮೩೫ ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಕೈಗೊಂಡಿದ್ದಾರೆ. ಇದರಿಂದಾಗಿ ಕೊಡಗು ಜಿಲ್ಲೆಯಲ್ಲಿಯೇ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಸರ್ಕಾರ ಈವರೆಗೆ ೯ ಕೋಟಿ ೩೭ ಲಕ್ಷದ ೩೨ (ಮೊದಲ ಪುಟದಿಂದ) ಸಾವಿರದ ೩೦೮ ರೂ. ಗಳನ್ನು ವಿನಿಯೋಗಿಸಿದೆ.
ಅಂಕಿಅAಶಗಳನ್ನು ಅವಲೋಕಿಸಿದಾಗ ಸೆಪ್ಟೆಂಬರ್‌ನಲ್ಲಿ ಕೊಡಗು ಜಿಲ್ಲೆಯ ಸರ್ಕಾರಿ ಬಸ್ ಗಳ ಮೂಲಕ ಅತೀ ಹೆಚ್ಚು ಮಹಿಳಾ ಪ್ರಯಾಣಿಕರು ಸಂಚಾರ ಕೈಗೊಂಡಿದ್ದಾರೆ. ಈ ತಿಂಗಳಿನಲ್ಲಿ ೪.೭೫ ಲಕ್ಷ ಮಹಿಳೆಯರು ಉಚಿತ ಯೋಜನೆಯಡಿ ಸಂಚರಿಸಿದ್ದಾರೆ. ೧ ಕೋಟಿ ೭೬ ಲಕ್ಷ ರೂ. ಗಳನ್ನು ಸರ್ಕಾರ ವಿನಿಯೋಗಿಸಿದೆ.
ದಸರಾ ಸಂದರ್ಭದ ಅಕ್ಟೋಬರ್ ಮಾಸದಲ್ಲಿ ದೂರದ ಊರುಗಳಿಗೆ ಮಹಿಳೆಯರು ಸಂಚರಿಸಿದ್ದರಿAದಾಗಿ ಪ್ರಯಾಣ ದರ ಹೆಚ್ಚಾಗಿರುವ ಕಾರಣ ಆ ತಿಂಗಳಿನಲ್ಲಿ ಸರ್ಕಾರ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ರೂ. ೧.೯೨ ಕೋಟಿಯನ್ನು ವಿನಿಯೋಗಿಸಿದೆ. ಆ ತಿಂಗಳಿನಲ್ಲಿ ಅತೀ ಹೆಚ್ಚು ೧೨,೫೫೯ ಬಾಲಕಿಯರೂ ಮಹಿಳೆಯರ ಜೊತೆ (ಅಮ್ಮ, ಸಹೋದರಿ, ಸಂಬAಧಿಕ ಮಹಿಳೆಯರು) ಪ್ರಯಾಣ ಕೈಗೊಂಡಿರುವುದೂ ಗಮನಾರ್ಹ.