ಮಡಕೇರಿ, ನ. ೨೪: ನರ್ಸಿಂಗ್ ಸೇವೆ ಮಹತ್ತರವಾದುದು, ವೈದ್ಯಕೀಯ ವಿಭಾಗದಲ್ಲಿ ಶುಶ್ರೂಷಕರು ರೋಗಿಗಳು ಗುಣಮುಖರಾಗಲು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅತಿಥಿ ಪ್ರಮುಖರು ಅಭಿಪ್ರಾಯಪಟ್ಟರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸರ್ಕಾರಿ ನರ್ಸಿಂಗ್ ಕಾಲೇಜು ಮಡಿಕೇರಿಯಲ್ಲಿ “ಐಕ್ಯಂ” ೨೦೨೩-೨೪ ರ ನಾಮಫಲಕದಡಿ ಕಾಲೇಜಿನ ವಾರ್ಷಿಕೋತ್ಸವÀ ಜರುಗಿದ್ದು ಆ ಸಂದರ್ಭ ಸಭೆಗೆ ಆಗಮಿಸಿದ್ದ ಎಲ್ಲ ಅತಿಥಿಗಳು ನರ್ಸಿಂಗ್ ಸೇವೆಯ ಪಾತ್ರದ ಕುರಿತು ವಿಶ್ಲೇಷಿಸಿದರು. ಅಲ್ಲz,ೆ ಶುಶ್ರೂಷಕರು ಕರ್ತವ್ಯ ನಿರ್ವಹಿಸುವ ಸಂದರ್ಭ ರೋಗಿಗಳ ಬಗ್ಗೆ ಸದಾ ಕಾಳಜಿ ವಹಿಸುವಂತೆ ಕರೆಯಿತ್ತರು.

ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ “ಶಕ್ತಿ” ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿ ದೇಶರಕ್ಷಣೆಯಲ್ಲಿ ಸೈನಿಕರ ಪಾತ್ರ ಎಷ್ಟು ದೊಡ್ಡದೋ ಅದೇ ರೀತಿ ರೋಗಿಗಳ ರಕ್ಷಣೆಯಲ್ಲಿ ಶುಶ್ರೂಷಕರ ಪಾತ್ರವೂ ಮಹತ್ವದ್ದಾಗಿದೆ ಎಂದರು. ನರ್ಸಿಂಗ್ ತರಬೇತಿ ಪಡೆಯುವವರು ಮಾನಸಿಕ ಶಕ್ತಿ ವರ್ಧಿಸಿಕೊಳ್ಳಲು ತಮ್ಮ ಶಿಕ್ಷಣ ಕಲಿಕೆಯೊಂದಿಗೆ ಯೋಗ, ಧ್ಯಾನವನ್ನು ಅಭ್ಯಸಿಸಿದರೆ ಸಂಯಮದೊAದಿಗೆ ಸೇವೆಗೈಯ್ಯಲು ಸುಲಭ ಸಾಧ್ಯವಾಗುತ್ತದೆ ಎಂದು ಸಲಹೆಯಿತ್ತರು. ಕೊಡಗು ಜಿಲ್ಲೆಯಲ್ಲಿ ಸರ್ಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜು ಇರುವುದು ವಿಶೇಷವಾಗಿದ್ದು ವೈದ್ಯಕೀಯ ಕಾಲೇಜಿನಲ್ಲಿ ಈ ವಿಭಾಗವನ್ನು ಪ್ರಾರಂಭಿಸಿ ಪ್ರಸ್ತುತ ೪೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದು ಜಿಲ್ಲೆಗೆ ಹೆಮ್ಮೆ ತರುವ ಬೆಳವಣಿಗೆಯಾಗಿದೆ ಎಂದರು. ನರ್ಸಿಂಗ್ ಕಾಲೇಜಿಗೆ ಅವಶ್ಯವಿರುವ ಪ್ರತ್ಯೇಕ ಜಾಗದ ಸಮಸ್ಯೆಗಳ ಬಗ್ಗೆ ಮಾತನಾಡಿ ಮಡಿಕೇರಿಯಲ್ಲಿ ಸರ್ಕಾರಿ ಜಾಗದ ಸಮಸ್ಯೆ ಇದ್ದು ಆದಾರೂ ಜನಪ್ರತಿನಿಧಿಗಳ ಮೂಲಕ ನರ್ಸಿಂಗ್ ಕಾಲೇಜಿಗೆ ಅವಶ್ಯವಿರುವ ಜಾಗವನ್ನು ಮಂಜೂರು ಮಾಡಲು ಎಲ್ಲ ಒಟ್ಟಾಗಿ ಪ್ರಯತ್ನಿಸೋಣ ಎಂದು ಆಶಿಸಿದರು. ಕೊರೊನಾ ಸಮಯದಲ್ಲಿ ಶುಶ್ರೂಷಕರು ಮನೆ, ಮಕ್ಕಳನ್ನು ಬಿಟ್ಟು ಕರ್ತವ್ಯ ನಿರ್ವಹಿಸಿರುವುದÀನ್ನು ಸ್ಮರಿಸಿದರು.

ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ. ಸತೀಶ್‌ಕುಮಾರ್ ವಿ.ಎಸ್. ಮಾತನಾಡಿ ವಿದ್ಯಾರ್ಥಿಗಳು ನರ್ಸಿಂಗ್ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು, ಸೇವಾ ಮನೋಭಾವ, ನಿಸ್ವಾರ್ಥ ಸೇವೆ ರೂಢಿಸಿಕೊಳ್ಳಬೇಕು, ವೃತ್ತಿಯಲ್ಲಿ ಮುಂದೆ ಬರಬೇಕು. ಭಾವನಾತ್ಮಕವಾಗಿ ಸ್ಪಂದಿಸಬೇಕು. ಸಂಸ್ಥೆಯ ಘನತೆಯನ್ನು ಹೆಚ್ಚಿಸಲು ಶಿಸ್ತು ಪಾಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

(ಮೊದಲ ಪುಟದಿಂದ) ವೈದ್ಯಕೀಯ ಅಧೀಕ್ಷಕರಾದ ಡಾ. ರೂಪೇಶ್ ಗೋಪಾಲ್ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಶುಶ್ರೂಷಕರ ಆರೈಕೆ ಅತೀ ಮುಖ್ಯ. ರೋಗಿಗಳೊಂದಿಗೆ ತುಂಬ ಸಮಯ ಕಳೆಯುವುದು ಶುಶ್ರೂಷಕರು ಮಾತ್ರ. ಅವರ ಕೊಡುಗೆ ಆಸ್ಪತ್ರೆಗೆ ಹೆಚ್ಚಿರುತ್ತದೆ ಎಂದರು.

ಜಿಲ್ಲಾ ಆಸ್ಪತ್ರೆ ಶಸ್ತç ಚಿಕಿತ್ಸಕರಾದ ಡಾ. ನಂಜುAಡಯ್ಯ ಮಾತನಾಡಿ ಶುಶ್ರೂಷಕರು ಆಸ್ಪತ್ರೆಯ ಹೃದಯವಿದ್ದಂತೆ ಎಂದು ಅವರ ಸೇವೆಯನ್ನು ಸ್ಮರಿಸಿದರು.

ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎ.ಕೆ. ಮಂಜುಳ ನರ್ಸಿಂಗ್ ಕಾಲೇಜಿನ ವರದಿಯನ್ನು ಓದಿ ಸಂಸ್ಥೆಯು ೨೦೨೦ ರಲ್ಲಿ ಕರ್ನಾಟಕ ಸರ್ಕಾರದಿಂದ ೧೦೦ ಸೀಟುಗಳಿಗೆ ಅನುಮತಿ ನೀಡಿ ಮಂಜೂರು ಮಾಡಿದ್ದು ಭಾರತೀಯ ನರ್ಸಿಂಗ್ ಕೌನ್ಸಿಲ್, ಕರ್ನಾಟಕ ರಾಜ್ಯ ಶುಶ್ರೂಷಕ ಪರಿಷತ್, ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದಿಂದ ಅಂಗೀಕಾರಗೊAಡಿದ್ದು ಈ ಕಾಲೇಜನ್ನು ಮಂಜೂರು ಮಾಡಿಸಲು ಶ್ರಮಿಸಿದ ಡೀನ್ ಹಾಗೂ ನಿರ್ದೇಶಕರು, ಜನ ಪ್ರತಿನಿಧಿಗಳು ಮತ್ತು ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ನರ್ಸಿಂಗ್ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ನೃತ್ಯ, ನಾಟಕ ಸೇರಿದಂತೆ ವಿವಿಧ ಬಗೆಯ ಮನೋರಂಜನಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಎ.ಎಲ್ ಸ್ವಾಮಿ, ಡಾ ನರಸಿಂಹ ರೈ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ನರ್ಸಿಂಗ್ ವಿದ್ಯಾರ್ಥಿಗಳಾದ ಹರ್ಷಿಕ, ರಾಧಿಕ ನೇರವೇರಿಸಿದರು. ಸ್ವಾಗತವನ್ನು ಪೂಜ, ವಂದನಾರ್ಪಣೆಯನ್ನು ಹರ್ಷಿತಾ, ಅತಿಥಿ ಪರಿಚಯವನ್ನು ಸಹಾಯಕ ಪ್ರಾಧ್ಯಾಪಕರಾದ ಗುರುಪಾದ ನೆರವೇರಿಸಿದರು.