ಮಡಿಕೇರಿ, ನ. ೨೪: ಮಡಿಕೇರಿ ಯೂತ್ ಕ್ರಿಕೆಟ್ ಕ್ಲಬ್ (ಎಂ.ವೈ.ಸಿ.ಸಿ.) ವತಿಯಿಂದ ಪ್ರತೀ ಬಾರಿಯಂತೆ ಈ ವರ್ಷವೂ ಡಿಸೆಂಬರ್ ೧೮ ರಿಂದ ೨೪ರವರೆಗೆ ಜಿಲ್ಲಾಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ಲಬ್ ಉಪಾಧ್ಯಕ್ಷ ಪೊನ್ನಚ್ಚನ ಮಧು ಸೋಮಣ್ಣ ಮಡಿಕೇರಿಯಲ್ಲಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೩೯ ವರ್ಷಗಳಿಂದ ಕೊಡಗಿನಲ್ಲಿ ಕ್ರಿಕೆಟ್‌ಗೆ ಉತ್ತೇಜನ ನೀಡುತ್ತಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಕ್ಲಬ್ ಈ ಬಾರಿ ಇಪ್ಪತ್ತು ಓವರ್‌ಗಳಿಗೆ ಸೀಮಿತವಾಗಿ ಕೊಡಗು ಮೂಲದ ಆಟಗಾರರಿಗೆ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದೆ. ಆಸಕ್ತ ತಂಡಗಳು ಡಿಸೆಂಬರ್ ೧೦ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಪ್ರಥಮ ೩೦ ಸಾವಿರ, ದ್ವಿತೀಯ ೨೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ ವೈಯಕ್ತಿಕ ಪ್ರಶಸ್ತಿಗಳನ್ನು ವಿಜೇತರಿಗೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

ಜಿಲ್ಲಾಮಟ್ಟದ ಪಂದ್ಯಾವಳಿಯಲ್ಲಿ ಜಿಲ್ಲಾ ವ್ಯಾಪ್ತಿಯ ೨೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಟಗಾರರು ಕೊಡಗಿನ ಮೂಲದವರೇ ಆಗಿರಬೇಕು ಎಂದು ಸ್ಪಷ್ಟಪಡಿಸಿದ ಅವರು, ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗೆ ಧ್ರುವ ಮೊ. ೮೩೧೦೧೨೮೭೯೦ ಹಾಗೂ ಪ್ರಿನ್ಸ್ ಕುಶಾಲಪ್ಪ - ೮೬೬೦೭೨೩೧೭೦ ಅವರನ್ನು ಸಂಪರ್ಕಿಸಬಹುದು ಎಂದರು.

ಜಿಲ್ಲಾ ಕ್ರೀಡಾಂಗಣದ ಅವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಧು, ಮೈದಾನವನ್ನು ವಾಹನ ನಿಲುಗಡೆಗೆ, ಸಮಾರಂಭ ಗಳಿಗೆ ಬಳಸಿಕೊಳ್ಳುತ್ತಿರುವುದು ವಿಷಾದನೀಯ ಎಂದರು. ಕೊಡಗಿನಲ್ಲಿ ಕ್ರೀಡೆಗೆ ಪ್ರೋತ್ಸಾಹವಿಲ್ಲ ಎಂಬುದಕ್ಕೆ ಈ ಮೈದಾನವೇ ಸಾಕ್ಷಿ. ಕೆಲವರು ನಾಗರಿಕ ಪ್ರಜ್ಞೆ ಮರೆತು ಮೈದಾನದಲ್ಲೇ ತ್ಯಾಜ್ಯಗಳನ್ನು ಹಾಕುತ್ತಾರೆ. ಜಿಲ್ಲೆಯಲ್ಲಿರುವ ಬಹುತೇಕ ಸುಸಜ್ಜಿತ ಮೈದಾನಗಳು ಖಾಸಗಿಯವರಿಗೆ ಸೇರಿದ್ದು, ಸಾರ್ವಜನಿಕವಾಗಿ ಅತ್ಯುತ್ತಮ ಮೈದಾನದ ವ್ಯವಸ್ಥೆಗೆ ಸರ್ಕಾರ ಮನಸ್ಸು ಮಾಡಬೇಕೆಂದು ಮಧು ತಾಕೀತು ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್ ಟೀಂ ಮ್ಯಾನೇಜರ್ ಎ.ಎಂ. ಅಜಯ್, ಸದಸ್ಯರುಗಳಾದÀ ಧ್ರುವ, ಪ್ರಿನ್ಸ್ ಮತ್ತು ನಿತಿನ್ ಕುಮಾರ್ ಉಪಸ್ಥಿತರಿದ್ದರು.