*ಗೋಣಿಕೊಪ್ಪ, ನ. ೨೫: ಮಾಯಮುಡಿ ಗ್ರಾಮದ ಕೂಟತ್ಮಾವು ಮಂದ್ನಲ್ಲಿ ಹುತ್ತರಿ ಹಬ್ಬದ ಅಂಗವಾಗಿ ತಾ. ೩೦ ರಂದು ಕಂಗಳತ್ನಾಡ್ ಮಂದ್ ಆಯೋಜಿಸಲಾಗಿದೆ ಎಂದು ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಗೌರವ ಅಧ್ಯಕ್ಷ ಸಣ್ಣುವಂಡ ಬಿ. ರಮೇಶ್ ತಿಳಿಸಿದ್ದಾರೆ.
ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಕಂಗಳತ್ನಾಡ್ ಮಹಿಳಾ ಸಮಾಜ ಸಹಯೋಗದಲ್ಲಿ ನಡೆಯುವ ಮಂದ್ನಲ್ಲಿ ಬೆಳಿಗ್ಗೆ ೧೧ ಗಂಟೆಯಿAದ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಧ್ಯಾಹ್ನ ೨.೩೦ ಗಂಟೆಗೆ ಮಂದ್ ಪತ್ತುವ ಕಾರ್ಯಕ್ರಮ, ನಂತರ ಕೋಲಾಟ್, ಉಮ್ಮತ್ತಾಟ್, ಪರೆಯಕಳಿ, ಬೊಳಕಾಟ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾಯಮುಡಿ ಗ್ರಾಮ ಪಂಚಾಯಿತಿಗೆ ಒಳಪಡುವ ೮ ಸಾಧಕರನ್ನು ಸನ್ಮಾನಿಸಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಡಾ. ಬಲ್ಲಣಮಾಡ ನಿಖಿಲ್ ನಂಜಪ್ಪ, ಸಮಾಜ ಸೇವೆಯಲ್ಲಿ ಚೆಪ್ಪುಡಿರ ಕಿಟ್ಟು ಅಯ್ಯಪ್ಪ, ಉದ್ಯೋಗದಲ್ಲಿ ಕೊಣಿಯಂಡ ಸಿ. ಅಪ್ಪಣ್ಣ, ಕೊಡವಾಮೆಯಲ್ಲಿ ಅಲ್ಲಾರಂಡ ಬೀನಾ ಸೋಮಯ್ಯ, ಸ್ವ ಉದ್ಯೋಗದಲ್ಲಿ ಆಪಟ್ಟಿರ ಎಸ್. ಹರೀಶ್, ಸಂಘಟನೆಯಲ್ಲಿ ಬಲ್ಯಂಡ ಯಮುನಾ ರವಿ, ಸಹಕಾರ ಕ್ಷೇತ್ರದಲ್ಲಿ ಸಣ್ಣುವಂಡ ಪಿ. ಸಂಪತ್, ಚೆಪ್ಪುಡಿರ ಪಿ. ಕುಶಾಲಪ್ಪ ಗೌರವ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕಂಗಳತ್ನಾಡ್ ಮಹಿಳಾ ಸಮಾಜದ ಅಧ್ಯಕ್ಷೆ ಚೆಪ್ಪುಡಿರ ರಾಧಾ ಅಚ್ಚಯ್ಯ, ಕಾರ್ಯದರ್ಶಿ ಬಲ್ಯಂಡ ಯಮುನಾ ರವಿ, ಮಾನಿಲ್ ಅಯ್ಯಪ್ಪ ಸೇವಾ ಸಮಿತಿ ಉಪಾಧ್ಯಕ್ಷ ಆಪಟ್ಟಿರ ಸಿ. ಪ್ರದೀಪ್, ಯುವಕ ಸಂಘ ಅಧ್ಯಕ್ಷ ಚೆಪ್ಪುಡಿರ ಕೆ. ಪ್ರದೀಪ್ ಪೂವಯ್ಯ ಇದ್ದರು.