ಪೊನ್ನಂಪೇಟೆ, ನ. ೨೩: ಹಾಕಿ ಇಂಡಿಯಾದ ವತಿಯಿಂದ ತಾ. ೨೦ ರಿಂದ ತಾ. ೩೦ ರವರೆಗೆ ಚೆನ್ನೆöÊನ ಕೋವಿಲ್ಪಟ್ಟಿಯಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಜೂನಿಯರ್ ಮೆನ್ ಚಾಂಪಿಯನ್ ಶಿಪ್ - ೨೦೨೩ಕ್ಕೆ ಜಿಲ್ಲೆಯ ಬೊಟ್ಟಂಗಡ ಕೌಶಿಕ್ ಕಾವೇರಪ್ಪ ತೀರ್ಪುಗಾರನಾಗಿ ಆಯ್ಕೆಯಾಗಿದ್ದಾರೆ.

ಹಾಕಿ ಕೂರ್ಗ್ ತೀರ್ಪುಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೌಶಿಕ್ ಕಾವೇರಪ್ಪ, ಪೊನ್ನಂಪೇಟೆ ತಾಲೂಕಿನ ತೆರಾಲು ಗ್ರಾಮದ ಬೊಟ್ಟಂಗಡ ವಿನು ಮುದ್ದಪ್ಪ ಮತ್ತು ಪದ್ಮ ದಂಪತಿ ಪುತ್ರ. ಗೋಣಿಕೊಪ್ಪಲು ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ.