ಮಡಿಕೇರಿ, ನ. ೨೩: ಜಾನಪದ ಕಲೆಯನ್ನು ವಿಶ್ವಾದ್ಯಂತ ಪಸರಿಸಿದ ಜಿಲ್ಲೆಯ ಕಲಾವಿದೆ, ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ಕೊಡವ ಜಾನಪದ ಉಮ್ಮತಾಟ್ ಕಲೆಯನ್ನು ಪ್ರಚುರಪಡಿಸಿದಲ್ಲದೆ, ಇದುವರೆಗೂ ೧೦ ಸಾವಿರಕ್ಕೂ ಅಧಿಕ ಮಕ್ಕಳಿಗೆ ಕಲೆಯ ಬಗ್ಗೆ ಶಿಕ್ಷಣ ನೀಡಿರುವುದನ್ನು ಗುರುತಿಸಿ ಜೈಪುರ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ತಾ. ೩೦ರಂದು ನಡೆಯಲಿರುವ ಸಮಾರಂಭದಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ.