ಕರಿಕೆ, ನ. ೨೩: ಕೇಂದ್ರ ಸರಕಾರದ ಬಿ.ಎಸ್.ಎನ್.ಎಲ್. ವತಿಯಿಂದ ಕೊಡಗಿಗೆ ೬೨ ಮೊಬೈಲ್ ಟವರ್ ಮಂಜೂರಾಗಿ ವಿವಿಧೆಡೆ ಕಾಮಗಾರಿ ನಡೆಯು ತ್ತಿದ್ದು, ಕರಿಕೆ ಗ್ರಾಮಕ್ಕೆ ಕೂಡ ಟವರ್ ಮಂಜೂರಾಗಿ ಇದೀಗ ನೆಲ ಸಮತಟ್ಟುಗೊಳಿಸಿ ಕಾಂಕ್ರೀಟ್ ಕಾಮಗಾರಿ ಆರಂಭಿಸಲಾಗಿದೆ. ಈ ಪ್ರಯುಕ್ತ ಊರಿನ ದೇವಾಲಯವಾದ ಶ್ರೀ ವನಶಾಸ್ತಾವು ದೇವಸ್ಥಾನದಲ್ಲಿ ಕಾಮಗಾರಿ ನಿರ್ವಿಘ್ನವಾಗಿ ನೆರವೇರಲಿ. ಗ್ರಾಮದ ಜನರ ಬಹುದಿನದ ಬೇಡಿಕೆ ಯಶಸ್ವಿಯಾಗಿ ನೆರವೇರಲೆಂದು ಬೇಡಿ ಪೂಜೆ ಸಲ್ಲಿಸಲಾಯಿತು. ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ನಾಯರ್, ಸದಸ್ಯ ಕೆ.ಎ. ನಾರಾಯಣ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹೊದ್ದೆಟ್ಟಿ ಸುಧೀರ್ ಕುಮಾರ್ ಉಪಸ್ಥಿತರಿದ್ದರು.