ಮಡಿಕೇರಿ, ನ. ೨೨: ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಇರುವ ಕೆಲವು ಸಮಸ್ಯೆಗಳು ಕೊಡವ ಸಮಾಜದ ಬೇಡಿಕೆ ಬಗ್ಗೆ ಕೊಡವ ಸಮಾಜಗಳ ಒಕ್ಕೂಟ, ಕೊಡವ ಮುಸ್ಲಿಂ ಜನಾಂಗದ ಹಾಗೂ ಬುಡಕಟ್ಟು ಜನಾಂಗದ ಹಾಗೂ ಬುಡಕಟ್ಟು ಜನಾಂಗದ ಸಮಸ್ಯೆಗಳಿಗೆ ಸಂಬAಧಿಸಿದAತೆ ಈ ಜನಾಂಗದ ಮೂರು ಪ್ರತ್ಯೇಕ ನಿಯೋಗದಿಂದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು.

ಮೂರು ನಿಯೋಗದೊಂದಿಗೆ ಮುಖ್ಯಮಂತ್ರಿಗಳು ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದ್ದು, ವಿಶೇಷ ಬೆಳವಣಿಗೆಯಾಗಿತ್ತು. ಶಾಸಕ ಪೊನ್ನಣ್ಣ ಅವರು ಪ್ರತ್ಯೇಕವಾಗಿ ವಿವರ ನೀಡಿದರು. ಕೊಡವ ಸಮಾಜದ ಬೇಡಿಕೆಗಳ ಕುರಿತಾಗಿ ಕೊಡವ ಸಮಾಜದ ಒಕ್ಕೂಟದ ಮೂಲಕ ಸಮಾಲೋಚನೆ ನಡೆಸಲಾಯಿತು. ಕೊಡವ ಸಮಾಜದ ಅಭಿವೃದ್ಧಿಗೆಂದು ಈ ಹಿಂದೆ ಬಸವರಾಜ್ ಬೊಮ್ಮಾಯಿ ಅವರ ಸರಕಾರವಿದ್ದ ಸಂದರ್ಭ ರೂ. ೧೦ ಕೋಟಿ ಅನುದಾನ ನೀಡಲಾಗಿದ್ದು, ಇದು ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಆದರೆ, ದೇವರಾಜ್ ಅರಸ್ ನಿಗಮದ ಮೂಲಕ ಬಿಡುಗಡೆಯಾಗಿರುವ ಈ ಅನುದಾನ ತಾಂತ್ರಿಕ ಕಾರಣದಿಂದಾಗಿ ಇನ್ನೂ ಅಧಿಕೃತವಾಗಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಸರಿಪಡಿಸಿ ಕೊಡುವಂತೆ ಚರ್ಚಿಸಲಾಯಿತು. ಈ ಬಗ್ಗೆ ದೇವರಾಜ್ ಅರಸು ನಿಗಮದ ಕಾರ್ಯದರ್ಶಿ ತುಳಸಿ ಅವರಿಗೆ ಸೂಚನೆ ನೀಡಿದ ಮುಖ್ಯಮಂತ್ರಿಗಳು ಇದರ ವ್ಯವಸ್ಥಿತ ಮಂಜೂರಾತಿಗೆ ತಕ್ಷಣ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.

ಕೊಡವ ಕುಟುಂಬಗಳ ನಡುವಿನ ವಾರ್ಷಿಕ ಹಾಕಿ ಉತ್ಸವವನ್ನು ಬಾಳುಗೋಡುವಿನ ಕ್ರೀಡಾ ಕೇಂದ್ರದಲ್ಲೇ ಆಯೋಜಿತ ಕುಟುಂಬ ಹಾಗೂ ಒಕ್ಕೂಟದ ಸಹಕಾರ ದೊಂದಿಗೆ ನಡೆಸುವ ಕುರಿತು ಹಾಗೂ ಸರಕಾರದಿಂದ ನೀಡುವ ಅನುದಾನವನ್ನು ವಾರ್ಷಿಕವಾಗಿ ನಿರಂತರವಾಗಿ ನೀಡುವ ಕುರಿತು ಮನವಿ ಮಾಡಲಾಯಿತು. ಈ ಬಗ್ಗೆಯೂ ಮುಖ್ಯಮಂತ್ರಿಗಳು ಸಕರಾತ್ಮಕ ಸ್ಪಂದನ ನೀಡಿದರು. ಇದರೊಂದಿಗೆ ಬಾಳುಗೋಡುವಿನಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ ಈ ಹಿಂದೆ ಘೋಷಿಸಲ್ಪಟ್ಟು ಬಿಡುಗಡೆಗೆ ಬಾಕಿಯಿರುವ ರೂ. ೫ ಕೋಟಿ ಅನುದಾನವನ್ನು ಬಿಡುಗಡೆ ಗೊಳಿಸುವಂತೆಯೂ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದರು. ಈ ಕುರಿತು ಮುಖ್ಯಮಂತ್ರಿಗಳು ಭರವಸೆಯಿತ್ತರು.

ಜಿಲ್ಲೆಗೆ ೩೦ ಹೆಚ್ಚುವರಿ ಸರ್ವೆಯರ್‌ಗಳಿಗೆ ಬೇಡಿಕೆ

ಕೊಡಗು ಜಿಲ್ಲೆಯಲ್ಲಿ ಕಂದಾಯ ನಿಗದಿಗೆ ಸಂಬAಧಿಸಿದAತೆ ಇರುವ ಸಮಸ್ಯೆ ನಿರಂತರವಾಗಿ ಮುಂದುವರಿದಿದ್ದು, ಈ ಬಗ್ಗೆ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು. ಸರ್ವೆ ಆಗದೆ ತೊಂದರೆಯಾಗುತ್ತಿರುವ ಹಿನ್ನೆಲೆ ಕಂದಾಯ ನಿಗದಿಯಾಗುತ್ತಿಲ್ಲ. ಜಿಲ್ಲೆಯಲ್ಲಿ ಸರ್ವೆಯರ್‌ಗಳು ಇಲ್ಲದೆ ಸಮಸ್ಯೆ ಇರುವದನ್ನು ಗಮನಕ್ಕೆ ತರಲಾಯಿತು. ಅಲ್ಲದೆ ಜಿಲ್ಲೆಗೆ ಹೆಚ್ಚು ವರಿಯಾಗಿ ೩೦ ಸರ್ವೆಯರ್‌ಗಳನ್ನು ನೇಮಕ

(ಮೊದಲ ಪುಟದಿಂದ) ಮಾಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ಕಂದಾಯ ಸಚಿವರೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸುವುದಾಗಿ ಭರವಸೆಯಿತ್ತಿರುವುದಾಗಿ ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.

ಒಕ್ಕೂಟದ ನಿಯೋಗದಲ್ಲಿ ಶಾಸಕ ಪೊನ್ನಣ್ಣ ನೇತೃತ್ವದಲ್ಲಿ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಎಂ. ಮೋಟಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಕರವಟ್ಟಿರ ಪೆಮ್ಮಯ್ಯ, ಉಪಾಧ್ಯಕ್ಷ ಪಾಂಡAಡ ಕಮಲ ಮುತ್ತಣ್ಣ, ಕಾರ್ಯದರ್ಶಿ ಲೇ. ಕ. ಚಿರಿಯಪಂಡ ವಿವೇಕ್ ಮುತ್ತಣ್ಣ, ಜಂಟಿ ಕಾರ್ಯದರ್ಶಿ ಪೊನ್ನಚೆಟ್ಟಿರ ರಮೇಶ್, ಮಾಜಿ ಅಧ್ಯಕ್ಷ ಮಲ್ಲೇಂಗಡ ದಾದಾ ಬೆಳ್ಯಪ್ಪ ಅವರುಗಳು ಪಾಲ್ಗೊಂಡಿದ್ದರು.

ಮುಸ್ಲಿA ನಿಯೋಗ ಭೇಟಿ

ಕೊಡವ ಮುಸ್ಲಿಂ ಅಸೋಸಿಯೇಷನ್ ನಿಯೋಗ ಶಾಸಕ ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿತು.

ಕೊಡವ ಮುಸ್ಲಿಂ ಸಮುದಾಯದ ಕುಲಶಾಸ್ತç ಅಧ್ಯಯನ ಕೂರ್ಗ್ ಬೈರೇಸ್ ಅವಕಾಶದಡಿ ಬಂದೂಕು ವಿನಾಯಿತಿ, ಕೊಡವ ಮಾತೃಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರ್ಪಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಬೇಕು. ಕೊಡವ ಮುಸ್ಲಿಂ ಭವನ ಕೊಡವ ಮುಸ್ಲಿಂ ಅಸೋಸಿಯೇಷನ್ ನಿಯೋಗ ಶಾಸಕ ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಲ್ಲಿಸಿತು.

ಕೊಡವ ಮುಸ್ಲಿಂ ಸಮುದಾಯದ ಕುಲಶಾಸ್ತç ಅಧ್ಯಯನ ಕೂರ್ಗ್ ಬೈರೇಸ್ ಅವಕಾಶದಡಿ ಬಂದೂಕು ವಿನಾಯಿತಿ, ಕೊಡವ ಮಾತೃಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರ್ಪಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಬೇಕು. ಕೊಡವ ಮುಸ್ಲಿಂ ಭವನ

ಬುಡಕಟ್ಟು ಜನಾಂಗದವರಿAದ ಭೇಟಿ

ಬೆಂಗಳೂರು/ ಗೋಣಿಕೊಪ್ಪಲು ನ. ೨೨: ಕ್ಷೇತ್ರದಲ್ಲಿನ ಬುಡಕಟ್ಟು ಜನಾಂಗದ ಗಿರಿಜನರು ಅನೇಕ ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಮುಂದಾಳತ್ವದಲ್ಲಿ ಆದಿವಾಸಿಗಳ ನಿಯೋಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಕರೆದೊಯ್ಯುವ ಮೂಲಕ ಸಮಸ್ಯೆಗಳ ಚರ್ಚೆ ನಡೆಸಿದರು.

ಚುನಾವಣೆಯಲ್ಲಿ ಜಯಗಳಿಸಿದ ಸಂದರ್ಭ ಶಾಸಕ ಎ.ಎಸ್. ಪೊನ್ನಣ್ಣ ಅವರು ಗಿರಿಜನರ ಸಮಸ್ಯೆ ಬಗ್ಗೆ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕರೆದೊಯ್ಯುವ ಭರವಸೆ ನೀಡಿದ್ದರು.

ನೀಡಿದ ಭರವಸೆಯಂತೆ ಕ್ಷೇತ್ರದ ಬುಡಕಟ್ಟು ಆದಿವಾಸಿಗಳ ೨೦ ಜನರ ತಂಡವನ್ನು ಬೆಂಗಳೂರಿಗೆ ಕರೆಸಿಕೊಂಡ ಶಾಸಕ ಎ.ಎಸ್.ಪೊನ್ನಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಗ್ರಹ ಕಚೇರಿ ಕೃಷ್ಣದಲ್ಲಿ ಭೇಟಿ ಮಾಡಿಸಿ ಸಮಸ್ಯೆಗಳ ಪರಿಹಾರಕ್ಕೆ ಖುದ್ದಾಗಿ ಮನವಿ ಮಾಡಿದರು.

ಈ ವೇಳೆ ನಿಯೋಗದಲ್ಲಿದ್ದ ಆದಿವಾಸಿಗಳ ಮುಖಂಡರುಗಳಾದ ಸಿದ್ದಪ್ಪ, ಮಣಿಕುಂಞ, ಪಿ.ಸಿ.