ಮಡಿಕೇರಿ, ನ. ೨೩: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೊಳಿಸಿರುವ ಸ್ವನಿಧಿ ಹಾಗೂ ವಿಶ್ವಕರ್ಮ ಯೋಜನೆಗಳಿಂದ ಅಸಂಘಟಿತ ವಲಯ ಶ್ರೇಯೋಭಿವೃದ್ಧಿ ಜೊತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ ಎಂದು ಯೋಜನೆಗಳ ರಾಜ್ಯ ಸಂಚಾಲಕ, ಮಾಜಿ ಸಚಿವರೂ ಆದ ಎಸ್.ಎ. ರಾಮದಾಸ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವನಿಧಿ’ ಯೋಜನೆ ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಅಸಂಘಟಿತ ವಲಯಗಳ ಆರ್ಥಿಕ ಚೈತನ್ಯಕ್ಕೆ ಪೂರಕವಾಗಿದೆ. ಆತ್ಮನಿರ್ಭರದಡಿ ಉಭಯ ಯೋಜನೆಗಳು ಕೆಲಸ ಮಾಡುತ್ತಿವೆ. ಕೋವಿಡ್ ಪರಿಸ್ಥಿತಿಯ ನಂತರ ಅಸಂಘಟಿತ ವಲಯ ಆರ್ಥಿಕ ಸಮಸ್ಯೆ ಅನುಭವಿಸಿರುವುದನ್ನು ಮನಗಂಡು ಪ್ರಧಾನ ಮಂತ್ರಿ ಈ ಯೋಜನೆ ಜಾರಿಗೊಳಿಸಿದ್ದಾರೆ. ಇದರಿಂದ ಪತ್ರಿಕೆ, ಹಾಲು ವಿತರಕರು, ಬೀದಿ ಬದಿ ವ್ಯಾಪಾರಿಗಳು, ಕ್ಯಾಟ್ರಿಂಗ್ ಕೆಲಸ ಮಾಡುವವರು, ಡೆಲಿವರಿ ಬಾಯ್ಸ್, ಹೂ ಕಟ್ಟುವವರು ಹಾಗೂ ಮಾರುವವರು, ಹೂ ಅಲಂಕಾರ ಮಾಡುವವರು, ಕೇಬಲ್ ಕೆಲಸ ಗಾರರು, ಟೈರ‍್ಸ್ಗಳು, ಫೋಟೋ, ವೀಡಿಯೋಗ್ರಾಫರ್‌ಗಳಿಗೆ ಪ್ರಯೋಜನ ವಾಗಲಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಪಾಲಿಕೆಗಳ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವವರು ಇದರ ಫಲಾನುಭವಿಗಳಾಗುತ್ತಾರೆ. ಗ್ರಾಮೀಣ ಪ್ರದೇಶದ ವಾಸಿಗಳಾದರೂ, ಪಟ್ಟಣದಲ್ಲಿ ವಹಿವಾಟು ನಡೆಸಿದರೆ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ೧೭೭೬ ಮಂದಿ ಫಲಾನುಭವಿಗಳು

ಆನ್‌ಲೈನ್ ಮೂಲಕ ಈ ಯೋಜನೆಗೆ ನೋಂದಾವಣಿ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್, ರಾಷ್ಟಿçÃಕೃತ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ ಈ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ.

ಕರ್ನಾಟಕದಲ್ಲಿ ‘ಪೈಲೆಟ್ ಪ್ರಾಜೆಕ್ಟ್’ ಆಗಿ ಈ ಯೋಜನೆ ಆರಂಭವಾಗಿದ್ದು, ಪ್ರಥಮ ಹಂತವಾಗಿ ರೂ. ೧೦ ಸಾವಿರ ಹಣವನ್ನು ಶೇ ೭ ಬಡ್ಡಿ ದರದಲ್ಲಿ ನೀಡಲಾಗುವುದು. ಉಳಿದ ಬಡ್ಡಿ ದರವನ್ನು ಸರಕಾರ ಪಾವತಿ ಮಾಡುತ್ತದೆ. ಈ ಹಣವನ್ನು ಸಮರ್ಪಕವಾಗಿ, ನಿಗದಿತ ಸಮಯದಲ್ಲಿ ಮುಗಿಸಿದರೆ, ಹಂತಹAತವಾಗಿ ಗರಿಷ್ಠ ರೂ. ೧೦ ಲಕ್ಷದ ತನಕ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಇದನ್ನು ಬಂಡವಾಳವಾಗಿ ಬಳಸಿಕೊಂಡು ತಮ್ಮ ವ್ಯಾಪಾರವನ್ನು ವೃದ್ಧಿಸಿ ಕೊಳ್ಳಬಹುದು. ಕೊಡಗು ಜಿಲ್ಲೆಯಲ್ಲಿ ೧೭೭೬ ಮಂದಿ ಈ ಯೋಜನೆಯ ಲಾಭ ಪಡೆದುಕೊಂಡಿದ್ದು, ರೂ. ೫೦ ಸಾವಿರ ಸಾಲವನ್ನು ೧೩೦ ಮಂದಿ ಪಡೆದುಕೊಂಡಿದ್ದಾರೆ. ಸರಿಯಾಗಿ ಪಾವತಿ ಮಾಡಿದರೆ ಅವರಿಗೆ ರೂ. ೧೦ ಲಕ್ಷದ ತನಕ ಬಂಡವಾಳ ಸಾಲ ನೀಡಲಾಗುವುದು ಎಂದು ರಾಮದಾಸ್ ವಿವರಿಸಿದರು.

ವಿಮೆ-ಪಿಂಚಣಿ ಸೌಲಭ್ಯ

ಸ್ವನಿಧಿ ಯೋಜನೆಗೆ ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯನ್ನು ಅಳವಡಿಸಿಕೊಂಡು ಅಸಂಘಟಿತರಿಗೆ ವಿಮೆ ಹಾಗೂ ಪಿಂಚಣಿ ಸೌಲಭ್ಯ ಒದಗಿಸುವ ಗುರಿ

(ಮೊದಲ ಪುಟದಿಂದ) ಹೊಂದಲಾಗಿದೆ ಎಂದು ರಾಮದಾಸ್ ತಿಳಿಸಿದರು.

ಮಹಿಳಾ ವ್ಯಾಪಾರಿ, ಫಲಾನುಭವಿಗಳ ಪತ್ನಿಗೆ ಹೆರಿಗೆ ಸಂದರ್ಭ ರೂ. ೫ ಸಾವಿರ, ಅವರ ತಾಯಿಯರಿಗೆ ಆರೋಗ್ಯ ಸಮಸ್ಯೆ ಯಾದರೆ ರೂ. ೬ ಸಾವಿರ ನೀಡಲು ವ್ಯವಸ್ಥೆ ಮಾಡಲಾಗಿದೆ. ೬೦ ವರ್ಷ ಮೇಲ್ಪಟ್ಟ ನಂತರ ಪ್ರತಿ ತಿಂಗಳು ರೂ. ೩ ಸಾವಿರ ಪಿಂಚಣಿ ನೀಡಲು ಕ್ರಮಕೈಗೊಳ್ಳಲಾಗಿದೆ. ‘ಒನ್ ನೇಷನ್ ಒನ್ ರೇಷನ್’ ಅಡಿ ಪಡಿತರವನ್ನು ನೀಡಲಾಗುವುದು. ಅಪಘಾತ ಸಂದರ್ಭ ಅಥವಾ ಸಹಜವಾಗಿ ಸಾವನಪ್ಪಿದರೆ ರೂ. ೨ ಲಕ್ಷ, ಅವಘಡದಿಂದ ವಿಶೇಷ ಚೇತನರಾದರೆ ರೂ. ೧ ಲಕ್ಷ ಹಣವನ್ನು ನೀಡಲಾಗುತ್ತದೆ ಎಂದ ಅವರು, ಈ ಯೋಜನೆಯಿಂದ ದೇಶದಲ್ಲಿ ೪೪ ಲಕ್ಷ ಕುಟುಂಬಕ್ಕೆ ನೆರವಾಗಿದೆ. ಈ ಮೊದಲು ಇಂತಿಷ್ಟು ಫಲಾನುಭವಿ ಗಳೆಂಬ ಗುರಿ ಇತ್ತು. ಇದೀಗ ಎಲ್ಲಾ ಅರ್ಹರಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಕರ್ನಾಟಕ ರಾಜ್ಯ ಸ್ವನಿಧಿ ಅನುಷ್ಠಾನದಲ್ಲಿ ದೇಶದಲ್ಲಿ ೪ ಸ್ಥಾನದಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸ್ವನಿಧಿಯ ಲಾಭ ಪಡೆದ ಫಲಾನುಭವಿಗಳು ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯನ್ನು ಅಧಿಕಾರಿಗಳ ಮೂಲಕ ಸಮೀಕ್ಷೆ ನಡೆಸಲಾಗುತ್ತದೆ. ಡಿಸೆಂಬರ್ ನೊಳಗೆ ಈ ಸಮೀಕ್ಷೆ ಪೂರ್ಣ ಗೊಂಡು ವರದಿ ಸಿದ್ಧಪಡಿಸ ಲಾಗುವುದು. ಇದರ ಪ್ರಚಾರ ಕ್ಕಾಗಿಯೂ ಹಣ ಮೀಸಲಿಡಲಾಗಿದೆ ಎಂದು ಹೇಳಿದರು.

ವಿಶ್ವಕರ್ಮ ಯೋಜನೆಯಿಂದ ಉದ್ಯೋಗ ಸೃಷ್ಟಿ

ವಿವಿಧ ಬಗೆಯ ೧೮ ಕರಕುಶಲ ವಿಷಯಗಳಡಿ ಕೆಲಸ ಮಾಡುವವರನ್ನು ಉತ್ತೇಜಿಸಲು ಪ್ರಧಾನಿಗಳು ವಿಶ್ವಕರ್ಮ ಯೋಜನೆ ಜಾರಿಗೊಳಿಸಿದ್ದಾರೆ. ಯುವ ಸಮುದಾಯದವರಿಗೆ ತರಬೇತಿ ನೀಡಿ ಅವರಿಗೆ ಸೂಕ್ತ ಮಾರ್ಗದರ್ಶನದೊಂದಿಗೆ ವ್ಯಾಪಾರ ವೃದ್ಧಿಸುವ ತರಬೇತಿ ನೀಡಲಾಗುವುದು ಎಂದು ರಾಮದಾಸ್ ಮಾಹಿತಿ ನೀಡಿದರು. ೧ ವಾರಗಳ ಕಾಲ ತರಬೇತಿ ನೀಡಿ, ದಿನಕ್ಕೆ ರೂ. ೫೦೦ ರಂತೆ ಭತ್ಯೆ ನೀಡಲಾಗುವುದು. ದೇಶಾದ್ಯಂತ ಇರುವ ಗ್ರಾಮೀಣ ಹಾಗೂ ನಗರ ಪ್ರದೇಶದ ೧೮ ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಕೌಶಲ್ಯ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಬ್ಯಾಂಕ್ ಖಾತರಿ ರಹಿತ ಸಾಲ ಸೌಲಭ್ಯ ದೊರೆಯಲಿದೆ. ಟೂಲ್ ಕಿಟ್ ಖರೀದಿಗೆ ರೂ. ೧೫ ಸಾವಿರ ನೆರವು ನೀಡಲಾಗುವುದು. ಸೇವಾ ಸಿಂದು, ಗ್ರಾಮ ಒನ್, ಕರ್ನಾಟಕ ಒನ್ ಮೂಲಕ ಈ ಯೋಜನೆಗೆ ನೋಂದಾವಣಿ ಮಾಡಿಕೊಳ್ಳಬಹುದು ಎಂದು ವಿವರ ನೀಡಿದರು.

ರಾಜಕೀಯ ಗಿಮಿಕ್ ಅಲ್ಲ

ಈ ಯೋಜನೆಗಳು ಮುಂದಿನ ಲೋಕಸಭೆ ಚುನಾವಣೆಗಾಗಿ ಮಾಡುತ್ತಿರುವ ರಾಜಕೀಯ ಗಿಮಿಕ್ ಅಲ್ಲ ಎಂದು ರಾಮದಾಸ್ ಹೇಳಿದರು.

ರಾಜ್ಯದ ೨೫ ಬಿಜೆಪಿ ಸಂಸದರಿದ್ದರು ನಿಮ್ಮನೇ ಸಂಚಾಲಕರು ಮಾಡಿದ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ರಾಮದಾಸ್, ತಾನು ಈ ಸಂಬAಧ ನಿರಂತರ ಅಧ್ಯಯನ ನಡೆಸಿದ್ದೇನೆ. ದೇಶವ್ಯಾಪಿ ಸಂಚರಿಸಿ ವರದಿ ನೀಡಿದ್ದೇನೆ. ಬೀದಿಬದಿ ಸೇರಿದಂತೆ ವಿವಿಧ ವಲಯಗಳ ವ್ಯಾಪಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಕಾರಣ ತನಗೆ ರಾಜ್ಯದ ಜವಾಬ್ದಾರಿ ನೀಡಿದ್ದಾರೆ. ಮುಂದಿನ ೫ ವರ್ಷಗಳಲ್ಲಿ ಈ ಯೋಜನೆ ಪರಿಣಾಮಕಾರಿ ಅನುಷ್ಠಾನ ಮಾಡಬೇಕೆಂಬುದು ಪ್ರಧಾನಿ ಮೋದಿ ಅವರ ಧೇಯೋದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು. ಗೋಷ್ಠಿಯಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಪ್ರಧಾನ ಕಾರ್ಯದರ್ಶಿಗಳಾದ ನಾಪಂಡ ರವಿ ಕಾಳಪ್ಪ, ಹುಲ್ಲುರುಕೊಪ್ಪ ಮಾದಪ್ಪ ಹಾಜರಿದ್ದರು.