ಗೋಣಿಕೊಪ್ಪ ವರದಿ, ನ. ೨೨: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ಆಯೋಜಿಸಿರುವ ಹಾಕಿ ಲೀಗ್ ಟೂರ್ನಿಯಲ್ಲಿ ೪ ತಂಡಗಳು ಗೆಲುವಿನ ನಗೆ ಬೀರಿದವು.

ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ತಂಡವು ಅಂಜಿಗೇರಿನಾಡ್ ತಂಡವನ್ನು ೩-೧ ಗೋಲುಗಳಿಂದ ಮಣಿಸಿತು. ಅಶ್ವಿನಿ ತಂಡದ ಜಶನ್, ಕುಶಾಲಪ್ಪ, ನಂಜುAಡ, ಪೊನ್ನಣ್ಣ, ಅಂಜಿಗೇರಿ ನಾಡ್ ತಂಡದ ಪೊನ್ನಣ್ಣ ತಲಾ ಒಂದೊAದು ಗೋಲು ಹೊಡೆದರು.

ಬೇಗೂರು ಈಶ್ವರ ಯೂತ್‌ಕ್ಲಬ್ ತಂಡವು ಮಡಿಕೇರಿ ಚಾರ್ಮರ್ಸ್ ವಿರುದ್ಧ ೨-೧ ಗೋಲುಗಳ ಜಯ ಸಾಧನೆ ಮಾಡಿತು. ಬೇಗೂರು ತಂಡದ ಬೋಪಣ್ಣ ಜೋಡಿ ಗೋಲು, ಚಾರ್ಮರ್ಸ್ ಪರ ಸುಜನ್ ಏಕೈಕ ಗೋಲು ದಾಖಲಿಸಿದರು.

ಬ್ಲೇಜ್ ತಂಡವು ಡ್ರಿಬ್ರ‍್ಸ್ ಹೆಂಪ್ ವಿರುದ್ಧ ೪-೦ ಗೋಲುಗಳ ಜಯ ದಾಖಲಿಸಿತು. ಚೆಶ್ವಿನ್ ೨, ಪ್ರಜ್ವಲ್, ರಾಯ್ ತಲಾ ಒಂದೊAದು ಗೋಲು ಬಾರಿಸಿದರು.

ಕೋಣನಕೊಟ್ಟೆ ಇಲವೆನ್ ತಂಡ ಗೋಣಿಕೊಪ್ಪ ಬಿಬಿಸಿ ವಿರುದ್ಧ ೮-೦ ಗೋಲುಗಳ ಮೂಲಕ ಗೆಲುವು ಸಾಧಿಸಿತು. ಗಣಪತಿ ೩ ಗೋಲು ಸಿಡಿಸಿದರು. ಗೌತಂ ೨, ಸೋಮಣ್ಣ, ನಿಹಲ್, ಸಾವನ್ ತಲಾ ಒಂದೊAದು ಗೋಲು ದಾಖಲಿಸಿದರು.