ಮಡಿಕೇರಿ, ನ. ೨೩: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೂಲತಃ ಬಾಳಲೆ ನಿವಾಸಿ ಆಶಾ ಎಂಬವರ ಪುತ್ರ ಮನೋಜ್ ಹೆಚ್.ಎ. (ಮಂಜುನಾಥ್-೨೬) ಮೂರ್ನಾಡಿನ ಎಂ. ಬಾಡಗದ ನಿವಾಸಿಯೊಬ್ಬರ ಮನೆಗೆ ಕೂಲಿ ಕೆಲಸಕ್ಕೆಂದು ತೆರಳಿದ್ದು, ತಾ. ೮ರಿಂದ ಕಾಣೆಯಾಗಿರುವುದಾಗಿ ಆಶಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆ (೨೨೮೭೭೭) ಅಥವಾ ಪೊಲೀಸ್ ಕಂಟ್ರೋಲ್ ರೂಂ (೨೨೯೦೦೦)ಗೆ ಮಾಹಿತಿ ನೀಡಲು ಪೊಲೀಸ್ ಪ್ರಕಟಣೆ ಕೋರಿದೆ.