ಗೋಣಿಕೊಪ್ಪ ವರದಿ, ನ. ೨೩: ಅಖಿಲ ಕೊಡಗು ಅಮ್ಮ ಕೊಡವ ಸಮಾಜದಿಂದ ಡಿಸೆಂಬರ್ ೧೦ ರಂದು ಗೋಣಿಕೊಪ್ಪದಲ್ಲಿರುವ ಸಮಾಜದ ಆವರಣದಲ್ಲಿ ಪುತ್ತರಿ ನಮ್ಮೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಪುರುಷರಿಗೆ ಮೊಟ್ಟೆ ಅಥವಾ ಚೆಂಡಿಗೆ ಗುಂಡು ಹೊಡೆಯುವ ಸ್ಪರ್ಧೆ, ಮಹಿಳೆಯರಿಗೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುಡಿಕೆ ಒಡೆಯುವ ಸ್ಪರ್ಧೆ ಆಯೋಜಿಸಲಾಗಿದೆ. ಅಮ್ಮ ಕೊಡವ ಕಲಾವಿದರಿಂದ ವಾಯ್ಸ್ ಆಫ್ ಅಮ್ಮ ಕೊಡವ ಆರ್ಕೆಸ್ಟç ನಡೆಯಲಿದೆ ಎಂದು ಸಮಾಜದ ಅಧ್ಯಕ್ಷ ಬಾನಂಡ ಎನ್. ಪ್ರಥ್ಯು ಹೇಳಿಕೆಯಲ್ಲಿ ತಿಳಿಸಿದ್ದಾರೆ.