ಮಡಿಕೇರಿ, ನ. ೨೩: ಕೊಡಗು ಜಿಲ್ಲೆಯಲ್ಲಿ ಮಾನವ ವನ್ಯಜೀವಿ ಸಂಘರ್ಷ ತಡೆಹಿಡಿಯುವ ಹಿನ್ನೆಲೆಯಲ್ಲಿ ನಿಗಾವಹಿಸುವ ನಿಟ್ಟಿನಲ್ಲಿ ಸರಕಾರ ನೋಡಲ್ ಅಧಿಕಾರಿಯನ್ನು ನೇಮಕ ಮಾಡಿದೆ.

ಹಿರಿಯ ಅರಣ್ಯಾಧಿಕಾರಿ ಬ್ರಿಜೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ವಾರದಲ್ಲಿ ಮೂರು ದಿವಸ ವನ್ಯಜೀವಿ ದಾಂಧಲೆ ಇರುವ ಪ್ರದೇಶಗಳಿಗೆ ಭೇಟಿ ವರದಿ ನೀಡುವಂತೆ ಹಾಗೂ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವAತೆ ಸೂಚನೆ ನೀಡಲಾಗಿದೆ.